– ನಾನ್‍ವೆಜ್ ತಿಂದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ
ಚಿಕ್ಕಮಗಳೂರು: ನಗರದ ಹನುಮಂತಪ್ಪ ವೃತ್ತದ ಸಮೀಪವಿರುವ ಕತ್ರಿಮಾರಮ್ಮ ದೇವಸ್ಥಾನದ ಬಳಿಯ ಟೆಂಡರ್ ಚಿಕನ್ ಸೆಂಟರ್ ನಲ್ಲಿ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಎರಡು ಕೆಜಿ ಚಿಕನ್ ಖರೀದಿಸಿದ್ದಾರೆ.
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕನ್‍ಗೂ ಕೊರೊನಾಗೂ ಯಾವುದೇ ಸಂಬಂಧವಿಲ್ಲ. ನಾನು ಬೇಸಿಕಲಿ ನಾನ್ ವೆಜ್. ಆದರೆ ಕಡಿಮೆ ತಿನ್ನುತ್ತೇನೆ. ನಾನ್ ವೆಜ್‍ನವರು ಚಿಕನ್, ಫಿಶ್ ಹಾಗೂ ಕೋಳಿ ಮೊಟ್ಟೆಯನ್ನು ತಿನ್ನಬಹುದು ಎಂದರು.
Advertisement
Advertisement
ಇವುಗಳನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂದು ಆಹಾರ ತಜ್ಞರೇ ಹೇಳಿದ್ದಾರೆ. ಹಾಗಾಗಿ ಯಾವುದೇ ಆತಂಕವಿಲ್ಲದೆ ಇವುಗಳನ್ನು ತಿಂದು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು ಎಂದರು.
Advertisement
ಮಾಂಸಾಹಾರಿಗಳು ಚಿಕನ್, ಫಿಶ್, ಕೋಳಿ ಮೊಟ್ಟೆ ತಿಂದರೆ, ಸಸ್ಯಾಹಾರಿಗಳು ಬಾಳೆಹಣ್ಣು, ತರಕಾರಿ ತಿನ್ನಬಹುದು ಎಂದಿದ್ದಾರೆ.