ಚಿಕ್ಕಮಗಳೂರು: ಜಿಲ್ಲೆಯ ಕ್ರೈಸ್ತ ಶಾಲೆಯೊಂದರಲ್ಲಿ ಅಯೋಧ್ಯೆ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆಯ (Pran Prathistha ceremony) ದಿನ ಗೈರಾದ್ರೆ 1 ಸಾವಿರ ದಂಡ ಹಾಕಲಾಗುವುದು ಎಂಬ ವಿಚಾರ ಇಂದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಬೆನ್ನಲ್ಲೇ ಇದೀಗ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದು, ಅಯೋಧ್ಯೆಗೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.
Advertisement
ದಂಡ ಪ್ರಕರಣ: ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ದಿನ ಯಾರಾದರೂ ಶಾಲೆಗೆ ರಜೆ ಹಾಕಿದ್ರೆ 1,000 ದಂಡ (Fone) ಎಂದು ಚಿಕ್ಕಮಗಳೂರು ನಗರದ ಕ್ರೈಸ್ತ ಶಾಲೆ ಮಕ್ಕಳಿಗೆ ಎಚ್ಚರಿಕೆ ನೀಡಿದೆ ಎನ್ನಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆ ವಿರುದ್ಧ ಭಜರಂಗದಳ ಹಾಗೂ ವಿಶ್ವಹಿಂದೂಪರಿಷತ್ ಆಕ್ರೋಶ ಹೊರಹಾಕಿದೆ.
Advertisement
Advertisement
ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆ ದಿನ ರಾಜ್ಯದ ಎಲ್ಲಾ ಮುಜರಾಯಿ ದೇಗುಲಗಳಲ್ಲಿ ಪೂಜೆಗೆ ಸರ್ಕಾರವೇ ಆದೇಶಿಸಿದೆ. ಜನವರಿ 22ರಂದು ಶಾಲೆಗಳಿಗೆ ರಜೆ ನೀಡಬೇಕೋ, ಬೇಡವೋ ಅಂತ ಸರ್ಕಾರ ಕೂಡ ಗೊಂದಲದಲ್ಲಿದೆ. ಈ ಮಧ್ಯೆ ಖಾಸಗಿ ಶಾಲೆಗಳು ಮಕ್ಕಳ ಮೇಲೆ ದಬ್ಬಾಳಿಕೆ ಮಾಡ್ತಿದ್ದು ಹಿಂದೂ ಪರ ಸಂಘಟನೆಗಳು ಶಾಲೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆ ದಿನ ‘ರಾಮಾಯಣ’ ಪ್ರಸಾರಕ್ಕೆ ಸಿದ್ಧತೆ
Advertisement
1,000 ರೂ. ದಂಡ ಕಟ್ಟೋದು ದೊಡ್ಡ ವಿಚಾರವಲ್ಲ. ಆದರೆ ಶಾಲೆಯ ಈ ನಡೆ ಮಕ್ಕಳ ಮೇಲೆ ಯಾವ ಪರಿಣಾಮ ಬೀರಲಿದೆ ಎಂದು ಪ್ರಶ್ನಿಸಿದ್ದಾರೆ. ಒಂದು ಧರ್ಮದ ಮಕ್ಕಳ ಮೇಲೆ ಶಾಲೆ ಈ ರೀತಿ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಆಕ್ರೋಶ ಹೊರಹಾಕಿರೋ ಸಂಘಟನೆಗಳು, ಇಡೀ ಜಿಲ್ಲೆಯ ಜನ ಮಕ್ಕಳ ಬೆನ್ನಿಗೆ ನಿಂತಿದ್ದಾರೆ.
ಜನವರಿ 22ರಂದು ಯಾವುದೇ ಮಕ್ಕಳಿಗೆ ರಾಮಮಂದಿರದ ಲೈವ್ ನೋಡಬೇಕು ಅನ್ನಿಸಿದರೆ ರಜೆ ಹಾಕಿ ಮನೆಯಲ್ಲೇ ನೋಡಿ. ಜಿಲ್ಲೆಯ ಯಾವುದೇ ಶಾಲೆಯ ಯಾವುದೇ ಮಕ್ಕಳಿಗೆ ಯಾರಾದರೂ ದಂಡ ಹಾಕಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಜೊತೆಗೆ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಆದರೆ ಶಾಲೆಯಲ್ಲಿ ಇಂದು ನವೋದಯ ಪರೀಕ್ಷೆ ನಡೆಯುತ್ತಿದ್ದು, ಶಾಲೆಗೆ ರಜೆ ಇರೋದ್ರಿಂದ ಶಾಲಾ ಆಡಳಿತ ಮಂಡಳಿ ಜೊತೆ ಚರ್ಚಿಸಿ ಎಚ್ಚರಿಕೆ ನೀಡಿದ್ದಾರೆ. ಸ್ಥಳಕ್ಕೆ ಎ.ಎಸ್ಪಿ. ಕೃಷ್ಣಮೂರ್ತಿ ಭೇಟಿ ನೀಡಿ ಹಿಂದೂಪರ ಸಂಘಟನೆ ಕಾರ್ಯಕರ್ತರ ಜೊತೆ ಮಾತನಾಡಿ ಶಾಲಾ ಆಡಳಿತ ಮಂಡಳಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರ ಜೊತೆ ಮಾತನಾಡಿದ್ದಾರೆ.
ಸ್ಪಷ್ಟನೆ ಏನು..?: ಇತ್ತ ದಂಡದ ಎಚ್ಚರಿಕೆಯ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆಯೇ ಶಾಲೆಯ ಪ್ರಾಂಶುಪಾಲರು ಸ್ಪಷ್ಟನೆ ಕೊಟ್ಟಿದ್ದಾರೆ. 3-4 ದಿನ ರಜೆ ಇದ್ದಾಗ ಮಕ್ಕಳನ್ನು ಕರೆದು ಹೇಳುತ್ತೇವೆ. ಯಾಕೆಂದರೆ 3-4 ದಿನ ರಜೆ ಸಿಕ್ಕರೆ ಊರಿಗೆ ಹೋಗ್ತಾರೆ, ಶಾಲೆಗೆ ಬರೋದು ಲೇಟ್ ಆಗುತ್ತೆ. ಕ್ಲಾಸ್ ಮಿಸ್ ಆಗೋದು ಬೇಡ ಅಂತ ಮಕ್ಕಳಿಗೆ ಎಚ್ಚರಿಕೆ ನೀಡ್ತೇನೆ. ಈ ಹಿನ್ನೆಲೆಯಲ್ಲಿ ಸೋಮವಾರ ಕೂಡ ಮಕ್ಕಳಿಗೆ ಭಯ ಇರಲಿ ಅಂತ ಎಚ್ಚರಿಕೆ ನೀಡಿದ್ದೇನೆ ಅಷ್ಟೇ ಎಂದರು.
ರಾಮಮಂದಿರಕ್ಕೂ ಮಕ್ಕಳಿಗೆ ಎಚ್ಚರಿಕೆ ನೀಡಿದ್ದಕ್ಕೂ ಯಾವುದೇ ಸಂಬಂಧವಿಲ್ಲ. ನಾನು ಧಾರ್ಮಿಕ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ನೋಡ್ತೀನಿ. ಮಕ್ಕಳು ಶಾಲೆಗೆ ಬರದಿದ್ರೆ ದಂಡ ಹಾಕ್ತೀನಿ ಅಂತ ಹೇಳಿಲ್ಲ. ಪ್ರತಿ ಬಾರಿ ಹೇಳುವ ರೀತಿಯೇ ಹೇಳಿದ್ದೇನೆ ರಾಮಮಂದಿರಕ್ಕಾಗಿ ಹೇಳಿಲ್ಲ. ಸೆಂಟ್ ಜೋಸೆಫ್ ಶಾಲೆಯ ಪ್ರಾಂಶುಪಾಲೆ ಜೀನ್ ಸ್ಪಷ್ಟನೆ ಕೊಟ್ಟಿದ್ದಾರೆ.