ಚಿಕ್ಕಮಗಳೂರು: ಜಿಲ್ಲೆಯಲ್ಲಿ ಬರಿ ಕಾರ್ ರ‍್ಯಾಲಿಯಲ್ಲ. ಮಲೆನಾಡಿನ ಗ್ರಾಮೀಣ ಕ್ರೀಡೆಗಳು ಕಾಫಿನಾಡಲ್ಲಿ ಇಂದಿಗೂ ಜೀವಂತ. ಮೈದುಂಬಿ ಹರಿಯುತ್ತಿರೋ ಭದ್ರೆಯ ಒಡಲಲ್ಲಿ ಮೊದಲ ಬಾರಿಗೆ ಸಾಹಸಮಯ ರ‍್ಯಾಫ್ಟಿಂಗ್ ಆಯೋಜನೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಸುಮಾರು 300 ಕಿ.ಮೀ. ವ್ಯಾಪ್ತಿಯಲ್ಲಿ ಭದ್ರ ನದಿ ತುಂಬ ವೇಗವಾಗಿ ಹರಿಯುತ್ತದೆ. ಮಳೆಗಾಲದಲ್ಲಿ ಮೂಡಿಗೆರೆ ತಾಲೂಕಿನ ಬಾಳೆಹೊಳೆ ಬಳಿ ಕಳೆದ ಎಂಟತ್ತು ವರ್ಷಗಳಿಂದ ರ‍್ಯಾಫ್ಟಿಂಗ್ ನಡೆಯುತ್ತಿದೆ. ಜಿಲ್ಲೆಯ ಏಸ್ ಪ್ಯಾಡಲರ್ರ್ಸ್ ಸಂಸ್ಥೆ ಇದೇ ಮೊದಲ ಬಾರಿಗೆ ಭದ್ರೆಯ ಒಡಲಲ್ಲಿ ರ‍್ಯಾಫ್ಟಿಂಗ್ ನಡೆಸುತ್ತಿದೆ.
Advertisement
Advertisement
ಏಸ್ ಸಂಸ್ಥೆ ಭದ್ರಾ ನದಿಯಲ್ಲಿ ಸಮೀಕ್ಷೆ ಕೂಡ ನಡೆಸಿದೆ. ಅಪಾಯವಿಲ್ಲದೇ ರ‍್ಯಾಫ್ಟಿಂಗ್ ನಡೆಸಲು ಜಿಲ್ಲಾಡಳಿತದ ಅನುಮತಿಯೂ ಇದೆ. ಕುದುರೆಮುಖ, ಕಳಸ ಸೇರಿದಂತೆ ಘಟ್ಟಪ್ರದೇಶದಲ್ಲಿ ಮಳೆಯಾಗುತ್ತಿದ್ದರೂ ಮೈಕೊರೆಯೋ ಚಳಿಯನ್ನೂ ಲೆಕ್ಕಿಸಿದೆ ಪ್ರವಾಸಿಗರು ರ‍್ಯಾಫ್ಟಿಂಗ್‌ನ ಎಂಜಾಯ್ ಮಾಡುತ್ತಿದ್ದಾರೆ. ಹಿಮಾಚಲ ಪ್ರದೇಶ, ಉತ್ತರಪ್ರದೇಶ, ಸೇರಿದಂತೆ ಉತ್ತರ ಭಾರತದಿಂದ ಬಂದಿರೋ ರಿವರ್ ಗೈಡರ್ಸ್‍ಗಳು ಉಪಯುಕ್ತವಾಗಿ ಗೈಡ್ ಮಾಡುತ್ತಿದ್ದಾರೆ.
Advertisement
ಭದ್ರ ನದಿಯಲ್ಲಿ ಬೋಟ್ ಮೇಲೆ ಕುಳಿತವರಿಗೆ ಕೆಳಗಿಳಿಯಲು ಮನಸ್ಸಾಗೋಲ್ಲ. 4 ರಿಂದ 10 ಕಿ.ಮೀ. ವರೆಗೂ ಸಾಗಬಹುದಾದ ರ‍್ಯಾಫ್ಟಿಂಗ್‌ನಲ್ಲಿ ಸ್ಥಳೀಯರು ಹಾಗೂ ಪ್ರವಾಸಿಗರು ಪಾಲ್ಗೊಳ್ಳುತ್ತಿದ್ದಾರೆ. ನದಿಯಲ್ಲಿ ದೊಡ್ಡ-ದೊಡ್ಡ ಗಾತ್ರದ ಬಂಡೆಗಳಿದ್ದು ಅಲ್ಲಲ್ಲೇ ಭಾರಿ ಗಾತ್ರದ ಅಲೆಗಳನ್ನು ಸೃಷ್ಠಿಸುತ್ತವೆ. ಬಂಡೆಯ ಮೇಲ್ಭಾಗದಲ್ಲಿ ಬೋಟ್‍ಗಳು ಸಾಗುವಾಗಿನ ಅನುಭವ ಮತ್ತಷ್ಟು ರೋಚಕ. ಈ ವೇಳೆ ರಬ್ಬರ್ ದೋಣಿಯನ್ನು ನಿಯಂತ್ರಿಸೋ ಗೈಡ್‍ಗಳ ಸಾಹಸ ನಿಜಕ್ಕೂ ಅಚ್ಚರಿ.
Advertisement
ಹೊರಜಿಲ್ಲೆ, ಹೊರರಾಜ್ಯಗಳಿಂದ ಕಾಫಿನಾಡಿಗೆ ಆಗಮಿಸೋ ಪ್ರವಾಸಿಗರು ರ‍್ಯಾಫ್ಟಿಂಗ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಸರ್ಕಾರ ಕೂಡ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಇಲ್ಲಿ ವಿದ್ಯಾರ್ಥಿಗಳಿಗೆ ರ‍್ಯಾಫ್ಟಿಂಗ್ ಆಯೋಜಿಸಿತ್ತು. ಸರ್ಕಾರ ಕೂಡ ಸಂಪೂರ್ಣ ಸಾಥ್ ನೀಡಿದರೆ ಕಾಫಿನಾಡಿನ ಪ್ರವಾಸಿ ತಾಣಗಳು ಮತ್ತಷ್ಟು ಜಗಜ್ಜಾಹಿರಾಗೋದರಲ್ಲಿ ಎರಡು ಮಾತಿಲ್ಲ ಎನ್ನುತ್ತಾರೆ ಸ್ಥಳೀಯರು.