ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ಹೋದ ಅಯ್ಯಪ್ಪ ಮಾಲಾಧಾರಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲದ ಶಿವಪ್ರಸಾದ್ (35) ಮೃತ ದುರ್ದೈವಿ. ಮೂಡಿಗೆರೆ ತಾಲೂಕಿನ ಕಳಸ ಸಮೀಪದ ಹೆಬ್ಬಾಳೆ ಸೇತುವೆ ಬಳಿ ಘಟನೆ ನಡೆದಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
Advertisement
ಗುಂಡ್ಲುಪೇಟೆಯಿಂದ 22 ಜನ ಮಾಲಾಧಾರಿಗಳು ಟಿಟಿ ವಾಹನದಲ್ಲಿ ಹೆಬ್ಬಾಳೆ ಸೇತುವೆಗೆ ಬಂದಿದ್ದರು. ಅಲ್ಲಿಯೇ ವಾಹನ ನಿಲ್ಲಿಸಿ ಎಲ್ಲರೂ ಸ್ನಾನಕ್ಕೆ ಇಳಿದಿದ್ದಾಗ ಶಿವಪ್ರಸಾದ್ ಅವರು ಭದ್ರಾ ನದಿಯ ಆಳದ ಅರಿವಿಲ್ಲದ ಮುಂದೆ ಹೋಗಿದ್ದಾರೆ. ಮುಂದೆ ಹೋದಂತೆ ಆಳದ ಇದ್ದಿದ್ದರಿಂದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
Advertisement
Advertisement
ಶಿವಪ್ರಸಾದ್ ಅವರು ನೀರಿಗೆ ಇಳಿಯುವ ಮುನ್ನ ಹೆಬ್ಬಾಳೆ ಸೇತುವೆ ಅಕ್ಕಪಕ್ಕದ ಅಂಗಡಿಯವರು ಹೋಗಬೇಡಿ ತುಂಬಾ ಆಳ ಇದೆ ಎಂದಿದ್ದರು. ಆದರೆ ಸ್ಥಳೀಯರ ಮಾತು ಕೇಳದ ನದಿಗೆ ಇಳಿದು ಮುಳುಗುತ್ತಿದ್ದ ಶಿವಪ್ರಸಾದ್ ಅವರ ರಕ್ಷಣೆಗೆ ಮುಂದಾಗ ಕೆಲವರು ಒಬ್ಬರ ಕೈ ಒಬ್ಬರು ಹಿಡಿಕೊಂಡು ಎಳೆದುಕೊಳ್ಳಲು ಯತ್ನಿಸಿದ್ದಾರೆ. ಆದರೆ ನೀರು ರಭಸವಾಗಿ ಹರಿಸುತ್ತಿದ್ದರಿಂದ ಶಿವಪ್ರಸಾದ್ ಮೃತಪಟ್ಟಿದ್ದಾರೆ.
Advertisement
ಕೆಲ ಸಮಯದ ಬಳಿಕ ಶಿವಪ್ರಸಾದ್ ಅವರ ಮೃತದೇಹ ಪತ್ತೆಯಾಗಿದೆ. ಶಿವಪ್ರಸಾದ್ ಅವರಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ಘಟನಾ ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.