ಬಣಕಲ್ ಪೊಲೀಸರಿಂದ ಮಂಗ್ಳೂರು ತಾಲೂಕು ಪಂಚಾಯತ್ ಅಧ್ಯಕ್ಷನ ಗಾಡಿ ಸೀಜ್

Public TV
1 Min Read
CKM Mangaluru TP President A

ಚಿಕ್ಕಮಗಳೂರು: ಪೊಲೀಸರು ಅಡ್ಡ ಹಾಕಿದರು ಗಾಡಿ ನಿಲ್ಲಸದೆ ಮೂಡಿಗೆರೆ ತಾಲೂಕಿನ ಬಣಕಲ್‍ಗೆ ಬಂದು ಹಿಂದಿರುಗಿದ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷನ ಗಾಡಿಯನ್ನು ಬಣಕಲ್ ಪೊಲೀಸರು ಸೀಜ್ ತಂದು ಠಾಣೆಯಲ್ಲಿ ನಿಲ್ಲಿಸಿದ್ದಾರೆ.

ದಿನದಿಂದ ದಿನಕ್ಕೆ ಕೊರೊನಾ ಆತಂಕ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಎಲ್ಲಾ ಜಿಲ್ಲೆ ಹಾಗೂ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ ಕೊರೊನಾ ವೈರಸ್ ಆತಂಕದಲ್ಲಿ ಮಂಗಳೂರು ರೆಡ್ ಝೋನ್‍ನಲ್ಲಿದೆ. ಮಂಗಳೂರಿನಿಂದ ಚಾರ್ಮಾಡಿ ಮೂಲಕ ಚಿಕ್ಕಮಗಳೂರಿಗೆ ಬರುವ ಪ್ರತಿಯೊಂದು ಗಾಡಿಯನ್ನು ಅಣ್ಣಪ್ಪ ಸ್ವಾಮಿ ದೇವಾಲಯದ ಬಳಿ ತೊಳೆದುಕೊಂಡು ಬರುವಂತೆ ಹೇಳಿ, ಚೆಕ್ ಮಾಡಿ ಜಿಲ್ಲೆಯೊಳಗೆ ಬರುವಂತೆ ಸೂಚಿಸಿದ್ದಾರೆ.

CKM Mangaluru TP President

ಮಂಗಳೂರಿನಿಂದ ಎರಡು ದಿನಗಳ ಹಿಂದೆ ತಾಲೂಕು ಪಂಚಾಯತ್ ಅಧ್ಯಕ್ಷರ ಗಾಡಿ ಕೊಟ್ಟಿಗೆಹಾರದಲ್ಲಿ ಪೊಲೀಸರು ಅಡ್ಡ ಹಾಕಿದರು ನಿಲ್ಲಿಸದೆ ಬಣಕಲ್ ಬಂದಿದ್ದರು. ಪುನಃ ಹೋಗುವಾಗಲೂ ಗಾಡಿ ನಿಲ್ಲಿಸದೆ ಹೋಗಿದ್ದರು. ಗಾಡಿಯಲ್ಲಿ ಡ್ರೈವರ್ ಸೇರಿ ನಾಲ್ಕೈದು ಜನ ಇದ್ದರೆಂದು ಹೇಳಲಾಗಿದೆ.

ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗಡಿಗಳು ಬಂದ್ ಮಾಡಿ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ಎಸ್‍ಪಿ ಹಾಗೂ ಡಿಸಿ ಅನುಮತಿ ಬೇಕು. ಆದರೆ ಅನುಮತಿ ಇದ್ಯೋ-ಇಲ್ಲವೋ ಎರಡನೇ ಮಾತು. ಪೊಲೀಸರು ಕೈ ಅಡ್ಡ ಹಾಕದರು ಗಾಡಿ ನಿಲ್ಲಿಸಿಲ್ಲ. ಗಾಡಿಯ ಮುಂದೆ ಅಧ್ಯಕ್ಷರು ತಾಲೂಕು ಪಂಚಾಯತ್ ಎಂಬ ಬೋರ್ಡ್ ಇತ್ತು. ಸರ್ಕಾರದ ನಿಯಮವನ್ನ ಉಲ್ಲಂಘಿಸಿದ ಆರೋಪದಡಿ ಬಣಕಲ್ ಪೊಲೀಸರು ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರ ಗಾಡಿಯನ್ನ ಸೀಜ್ ಮಾಡಿ ಸ್ಟೇಷನ್‍ಗೆ ತಂದು ನಿಲ್ಲಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *