– ವ್ಯಕ್ತಿ ಅರೆಸ್ಟ್, ಎಣ್ಣೆನೂ ಸೀಜ್
ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಬದಿ ಎಣ್ಣೆ ಮಾರಾಟ ಜೋರಾಗಿ ನಡೆಯುತ್ತಿದೆ.
ಹೌದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಚಂದನ ವೈನ್ಸ್‍ನಲ್ಲಿ ಕೆಲಸ ಮಾಡ್ತಿದ್ದ ಕ್ಯಾಶಿಯರ್ ವೆಂಕಟೇಶ್ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾನೆ. ಅಲ್ಲದೆ ಅದನ್ನ ರಸ್ತೆ ಬದಿ ನಿಂತು ಡಬಲ್‍ಗಿಂತ ಹೆಚ್ಚಿನ ರೇಟಿಗೆ ಮಾರುತ್ತಿದ್ದನು. ವಿಷಯ ತಿಳಿದ ಕೂಡಲೇ ಹಲವರು ಡೈಲಿ ನೈಂಟಿ ಹಾಕೋಣ ಸಾಕು ಅಂತ ಖರೀದಿ ಕೂಡ ಮಾಡಿದ್ದಾರೆ.
Advertisement
Advertisement
ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮ ಮದ್ಯ ಮಾರುತ್ತಿದ್ದ ವ್ಯಕ್ತಿ ಮೇಲೆ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ಬಾರ್ ಕ್ಯಾಶಿಯರ್ ವೆಂಕಟೇಶ್‍ನನ್ನ ಬಂಧಿಸಿದ್ದಾರೆ.
Advertisement
ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಮೂರು ಚೀಲದಷ್ಟು ಮದ್ಯವನ್ನು ಕೂಡ ಜಪ್ತಿ ಮಾಡಲಾಗಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಣ್ಣೆ ಸಿಕ್ಕವರು ಓ ಮೈ ಗಾಡ್, 15ರ ತನಕ ಹೇಗೋ ನೈಂಟಿ ಹಾಕೊಂಡ್ ತಳ್ಳಬಹುದು ಅಂತಿದ್ರೆ, ಸಿಗದವರು ಈ ಪೊಲೀಸ್ರಿಗೆ 10 ನಿಮಿಷ ಲೇಟಾಗಿ ಬರೋದಕ್ಕೆ ಏನಾಗಿತ್ತು ಅಂತ ಗೊಣಗುತ್ತಿದ್ದಾರೆ.