ಚಿಕ್ಕಮಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾಫಿ ನಾಡಿನಲ್ಲಿ ಕೆರೆ ಕುಂಟೆಗಳು ತುಂಬಿ, ಜನಜೀವನ ಅಸ್ತವ್ಯಸ್ತವಾಗಿದೆ.
ಬೆಳಗಿನ ಜಾವ ಮೂರು ಗಂಟೆಯಿಂದ ಅಜ್ಜಂಪುರ ತಾಲೂಕಿನ ಹಲವೆಡೆ ವರುಣನ ಅಬ್ಬರ ಜೋರಾಗಿತ್ತು. ಇದರಿಂದಾಗಿ ಶಿವನಿ ಕೆರೆಯಿಂದ ಹೊರ ಹರಿಯುತ್ತಿರುವ ಭಾರೀ ನೀರಿನಿಂದಾಗಿ ಕೆರೆ ಏರಿ ಮೇಲಿನ ಮಾರ್ಗದಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಅಷ್ಟೆ ಅಲ್ಲದೆ ಕೆರೆ ಸಮೀಪದ ತೋಟ, ಜಮೀನಿಗೆ ನೀರು ನುಗ್ಗಿ ಹಾನಿಗೊಳಗಾಗಿದೆ.
Advertisement
Advertisement
ಅಜ್ಜಂಪುರ ತಾಲೂಕಿನ ಶಿವನಿ, ತಡಗ, ದಂದೂರು ಸುತ್ತಮುತ್ತ ಸುರಿದ ಮಳೆಯಿಂದಾಗಿ ರೈತರು ಕಂಗಾಲಾಗಿದ್ದಾರೆ. ಕೆರೆಗಳಿಂದ ಬಂದ ನೀರು ರಾಗಿ ಹೊಲಕ್ಕೆ ನುಗ್ಗಿದ್ದು, ಅಪಾರ ಪ್ರಮಾಣದ ಬೆಳೆ ನಷ್ಟವಾಗಿದೆ.
Advertisement
ವರುಣನ ಆರ್ಭಟದಿಂದಾಗಿ ಕಟಾವು ಮಾಡಿದ ರಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ನೂರಕ್ಕೂ ಹೆಚ್ಚು ಎಕರೆಯಲ್ಲಿ ಬೆಳೆದಿದ್ದ ರಾಗಿ ಬೆಳೆ ನಾಶವಾಗಿದೆ. ಮಳೆಯ ಮುನ್ಸೂಚನೆ ಇಲ್ಲದೆ ರೈತರು ಕಣ ಮಾಡಿದ್ದರು. ನಿನ್ನೆ ತಡರಾತ್ರಿ ಸುರಿದ ಧಾರಾಕಾರ ಮಳೆಗೆ ರೈತರು ಹೈರಾಣರಾಗಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 3ಕ್ಕೆ ಏರಿಕೆ?
Advertisement
ಕಾಫಿನಾಡ ಬಯಲುಸೀಮೆ ಭಾಗದಲ್ಲಿ ಕಳೆದ ರಾತ್ರಿಯ ಭಾರೀ ಮಳೆಯಿಂದಾಗಿ ಆಹುತಿ ಹಳ್ಳ ಭರ್ತಿಯಾಗಿ ರಸ್ತೆಯಲ್ಲಿ ನೀರು ಹರಿದಿದೆ. ಆಹುತಿ ಹಳ್ಳದ ನೀರಿನಿಂದ 15 ಹಳ್ಳಿ ಸಂಪರ್ಕ ಕಡಿತವಾಗಿದೆ. ಅಷ್ಟೆ ಅಲ್ಲದೆ ಕಡೂರು- ಹೊಸದುರ್ಗ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇದಕ್ಕೆ ಪರ್ಯಾಯ ಬೀರೂರು ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಮತ್ತೆ ಕೇರಳದ ಐವರು ವಿದ್ಯಾರ್ಥಿಗಳಿಗೆ ಕೊರೊನಾ