ಚಾಮರಾಜನಗರ: ಚಿಕ್ಕಲ್ಲೂರು (Chikkalluru Jathre) ಘನನೀಲಿ ಸಿದ್ದಪ್ಪಾಜಿ ಜಾತ್ರೆಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಐದು ದಿನಗಳ ಕಾಲ ಚಿಕ್ಕಲ್ಲೂರು ಜಾತ್ರೆ ನಡೆಯಲಿದೆ.
ಮೊದಲ ದಿನ ಚಂದ್ರಮಂಡಲೋತ್ಸವ ನಡೆಯಲಿದೆ. ಬಿದಿರಿನಿಂದ ರಚಿಸಿದ ಚಂದ್ರಮಂಡಲದ ಆಕೃತಿ ರಚನೆ ಮಾಡಲಾಗಿದೆ. ಚಂದ್ರಮಂಡಲಕ್ಕೆ ತಡರಾತ್ರಿ ಅಗ್ನಿಸ್ಪರ್ಶ ಮಾಡಲಾಯಿತು.
ಉರಿಯುವ ಚಂದ್ರಮಂಡಲಕ್ಕೆ ಸುತ್ತಮುತ್ತಲ ಗ್ರಾಮಗಳ ರೈತರಿಂದ ದವಸ-ಧಾನ್ಯ ಅರ್ಪಣೆ ಮಾಡಿದ್ದಾರೆ. ಈ ಬಾರಿ ದಕ್ಷಿಣ ದಿಕ್ಕಿಗೆ ಚಂದ್ರಮಂಡಲ ಜ್ಯೋತಿ ಉರಿಯಿತು.
ಚಂದ್ರಮಂಡಲ ಜ್ಯೋತಿ ಯಾವ ದಿಕ್ಕಿಗೆ ವಾಲುತ್ತದೋ ಆ ದಿಕ್ಕಿಗೆ ಈ ವರ್ಷ ಉತ್ತಮ ಮಳೆ, ಬೆಳೆ ಎಂಬ ನಂಬಿಕೆಯಿದೆ. ಚಂದ್ರಮಂಡಲೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿದ್ದರು.