ಚಿಕ್ಕಬಳ್ಳಾಪುರ: ಐಎಂಎ ಜ್ಯೂವೆಲರ್ಸ್ ಮಾಲೀಕ ಮನ್ಸೂರ್ ಅಲಿಖಾನ್ ಸಾವಿರಾರು ಜನರಿಗೆ ಮೋಸ ಮಾಡಿರೋದು ಕಣ್ಣುಮುಂದೆ ಇರಬೇಕಾದರೆ, 25 ಲಕ್ಷ ಲಾಟರಿ ಬಂದಿದೆ ಎಂದು ಹೇಳಿ ಆನ್‍ಲೈನ್ ಮೂಲಕ ಮಹಿಳೆಯಿಂದ 3 ಲಕ್ಷ ಕಟ್ಟಿಸಿಕೊಂಡು ಮೋಸ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಜಿಲ್ಲೆಯ ಗೌರಿಬಿದನೂರು ನಗರದ ನಿವಾಸಿ ಶಮೀನ್ ಎಂಬ ಮಹಿಳೆ ವಂಚಕರ ಮೋಸದ ಜಾಲಕ್ಕೆ ಬಲಿಯಾಗಿದ್ದಾರೆ. ಮನೆಗೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದ ಶಮೀನ್ ಜೂನ್ 11 ರಂದು ಕೋಲ್ಕತ್ತಾದಿಂದ ಬಂದ ಅನಾಮಿಕರ ಫೋನ್ ಕಾಲ್‍ಗೆ ಮಾರುಹೋಗಿ ಮೋಸ ಹೋಗಿದ್ದಾರೆ.
Advertisement
Advertisement
ನಿಮ್ಮ ಮೊಬೈಲ್ ನಂಬರಿಗೆ 25 ಲಕ್ಷ ರೂಪಾಯಿ ಲಾಟರಿ ಬಂದಿದೆ ಎಂದು ನಂಬಿಸಿ, ದಿನೇ ದಿನೇ ಹಣ ಕಟ್ಟಿಸಿಕೊಂಡು ಇದುವರೆಗೂ 3 ಲಕ್ಷ ರೂಪಾಯಿ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ ಇವತ್ತು ಮತ್ತೆ ಹಣ ಕಟ್ಟಿ ಎಂದು ಫೋನ್ ಮಾಡಿದ್ದಾಗ ಅನುಮಾನಗೊಂಡ ಶಮೀನ್ ಗೌರಿಬಿದನೂರು ಪೊಲೀಸರ ಮೊರೆ ಹೋದಾಗ ಮೋಸಹೋದ ಸತ್ಯ ಗೊತ್ತಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರದ ದಾಖಲೆಗಳನ್ನು ಬಳಸಿದ್ದು, ಬೇರೊಬ್ಬ ಮಹಿಳೆಗೆ ಲಾಟರಿ ಹಣ ಬಂದಿರುವ ವಿಡಿಯೋ ಹಾಗೂ ಇವರ ಅಕೌಂಟಿಗೆ ಹಣ ವರ್ಗಾವಣೆ ಮಾಡೋ ರೀತಿಯ ದಾಖಲೆಗಳನ್ನು ಸೃಷ್ಟಿಸಿ ಅಮಾಯಕ ಮಹಿಳೆಯನ್ನು ವಂಚಿಸಿದ್ದಾರೆ.
Advertisement
Advertisement
ಮನೆಗೆಲಸ ಮಾಡಿಕೊಂಡು ಮದುವೆ ವಯಸ್ಸಿಗೆ ಬಂದಿರೋ ಮಕ್ಕಳಿಗೆ ಎಂದು ಕೂಡಿಟ್ಟಿದ್ದ ಹಣ ಒಡವೆಗಳು ಇದೀಗ ಮೋಸದ ಜಾಲಕ್ಕೆ ಬಲಿಯಾಗಿರೊದು ವಿಪರ್ಯಾಸವೇ ಸರಿ. ಒಟ್ಟಿನಲ್ಲಿ ಇನ್ನಾದರೂ ಅನಾಮಿಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂಬುದೇ ನಮ್ಮ ಕಳಕಳಿಯಾಗಿದೆ.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]