ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ರೈತರ (Farmers), ಮಠಮಾನ್ಯಗಳ, ದೇವಾಲಯಗಳ ಆಸ್ತಿ ವಕ್ಫ್‌ಗೆ ಪರಭಾರೆ ಮಾಡಿದ್ದಾರೆ ಎಂದು ಆರೋಪಿಸಿ ಆರೋಪ ಬಿಜೆಪಿ ವತಿಯಿಂದ ನಾಳೆ (ನ.19) ಚಿಕ್ಕಬಳ್ಳಾಪುರದಲ್ಲಿ (Chikkaballapura) ಬೃಹತ್ ಹೋರಾಟ ನಡೆಸಲು ತೀರ್ಮಾನಿಸಲಾಗಿದ್ದು, ವಿಪಕ್ಷನಾಯಕ ಅರ್.ಅಶೋಕ್ (R Ashoka) ಭಾಗಿಯಾಗಲಿದ್ದಾರೆ.
ಮಂಗಳವಾರ ಬೆಳಗ್ಗೆ 10 ಗಂಟೆಗೆ ಚಿಕ್ಕಬಳ್ಳಾಪುರಕ್ಕೆ ಆಗಮಿಸಲಿರುವ ಅರ್.ಅಶೋಕ್, ಮೊದಲಿಗೆ ಮುದ್ದೇನಹಳ್ಳಿಯ ಸರ್.ಎಂ ವಿಶ್ವೇಶ್ವರಯ್ಯನವರ ಸಮಾಧಿಗೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಲಿದ್ದಾರೆ. ನಂತರ ವಿಶ್ವೇಶ್ವರಯ್ಯನವರು ಓದಿದ್ದ ಕಂದವಾರ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಲಿದ್ದಾರೆ. ಇದನ್ನೂ ಓದಿ: DCSನಲ್ಲಿ ಸರ್ವರ್ ಸಮಸ್ಯೆ, KSRTC ಬಸ್‌ಗಳಿಗೆ ತಟ್ಟಿದ ಬಿಸಿ – ಮಡಿಕೇರಿಯಲ್ಲಿ ಪ್ರಯಾಣಿಕರು ಹೈರಾಣು
ಅಂದಹಾಗೆ ಕಂದವಾರ ಸರ್ಕಾರಿ ಶಾಲೆ ಸಹ ವಕ್ಫ್ ಆಸ್ತಿಯಾಗಿತ್ತು. ಪ್ರಕರಣ ವರದಿ ನಂತರ ಜಿಲ್ಲಾಡಳಿತ ವಕ್ಪ್ ಆಸ್ತಿಯಿಂದ (Waqf Property) ಸರ್ಕಾರಿ ಶಾಲೆ ಆಸ್ತಿ ಅಂತ ಬದಲವಾಣೆ ಮಾಡಿದೆ. ಇನ್ನೂ ನಂತರ ಚಿಕ್ಕಬಳ್ಳಾಪುರ ನಗರದಲ್ಲಿ ಸಂಸದ ಸುಧಾಕರ್ ನೇತೃತ್ವದಲ್ಲಿ ನಡೆಯಲಿರುವ ʻವಕ್ಫ್ ಜಿಹಾದ್ʼ ಹೆಸರಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಸರ್ಕಾರಿ ನೌಕರರ ಬಿಪಿಎಲ್ ಕಾರ್ಡ್ ರದ್ದು – ಕಲಬುರಗಿಯಲ್ಲಿ ಹೆಚ್ಚು, ಉಡುಪಿಯಲ್ಲಿ ಅತಿ ಕಡಿಮೆ
ವಿವಾದಿತ ಸ್ಥಳಕ್ಕೆ ಭೇಟಿ ನೀಡಿದ್ದ ಬಿಜೆಪಿ ಮುಖಂಡರು:
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ತಿಮ್ಮಸಂದ್ರ ಗ್ರಾಮದ ವಕ್ಫ್ ಆಸ್ತಿ ವಿವಾದಿತ ಜಮೀನಿಗೆ ಮಾಜಿ ಸಂಸದ ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದ್ದರು. ಆದ್ರೆ ವಿವಾದಿತ ಜಾಗಕ್ಕೆ ಬಿಜೆಪಿ ಮುಖಂಡರು ಬರಬಾರದು ಅಂತ ಪೊಲೀಸರು ಭಾರೀ ಭದ್ರತೆ ಕೈಗೊಂಡಿದ್ದರು. ಇದಕ್ಕೂ ಮುನ್ನ ಚಿಂತಾಮಣಿ ನಗರದ ಕನ್ನಂಪಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಜಮಾಯಿಸಿದ್ದ ಬಿಜೆಪಿ ಕಾರ್ಯಕರ್ತರು ಹಾಗೂ ಸಂಸದ ಮುನಿಸ್ವಾಮಿ ವಿವಾದಿತ ಜಾಗಕ್ಕೆ ತೆರಳದಂತೆ ಪೊಲೀಸರು ತಡೆಯೊಡ್ಡಿದರು.
ಕೊನೆಗೆ ಪೊಲೀಸರ ಭದ್ರತೆಯಲ್ಲಿ ಮಾಜಿ ಸಂಸದ ಮುನಿಸ್ವಾಮಿ ಹಾಗೂ ಬಿಜೆಪಿ ಮುಖಂಡರನ್ನ ಕರೆದೊಯ್ದರು. ಈ ವೇಳೆ ವಿವಾದಿತ ಜಾಗದಲ್ಲಿ ಎಸಿ ಹಾಗೂ ತಹಶಿಲ್ದಾರ್ ವಿರುದ್ಧ ಮಾಜಿ ಸಂಸದ ಮುನಿಸ್ವಾಮಿ ಹರಿಹಾಯ್ದರು. ರೈತರಿಗೆ ಸೇರಿದ ಪೂರ್ವಜರ ಸಮಾಧಿಗಳಿವೆ, ಅರಳಿಕಟ್ಟೆ ಇದೆ. 60 ವರ್ಷಗಳಿಂದ ಉಳುಮೆ ಮಾಡಿಕೊಂಡು ಅನುಭೋಗದಲ್ಲಿದ್ದಾರೆ. ಆದರೂ ಹೇಗೆ ವಕ್ಫ್ ಆಸ್ತಿಯಾಯಿತು ಅಂತ ತೀವ್ರ ತರಾಟೆ ತೆಗೆದುಕೊಂಡರು. ತಹಶಿಲ್ದಾರ್ ಸ್ಪಂದಿಸಲಿಲ್ಲ ಅಂತ ಧರಣಿ ಕೂರಲು ಮುಂದಾಗಿ ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: ಚಿಕ್ಕಬಳ್ಳಾಪುರ: ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾದ ಚಿರತೆ ದೃಶ್ಯ!