ಕಿಡ್ನ್ಯಾಪ್‌ ಕೇಸ್‌ಗೆ ಟ್ವಿಸ್ಟ್ – ಅರೆಬೆತ್ತಲೆ ಮೈಗೆ ಸೊಪ್ಪು ಸುತ್ತಿಕೊಂಡು ಬಂದಿದ್ದ ಯೋಗ ಶಿಕ್ಷಕಿ!

Public TV
3 Min Read
Yoga Teacher 3

ಚಿಕ್ಕಬಳ್ಳಾಪುರ: ಬೆಂಗಳೂರಿನ ಯೋಗ ಶಿಕ್ಷಕಿಯನ್ನ (Yoga Teacher) ಕಿಡ್ನ್ಯಾಪ್‌ ಮಾಡಿ ಜೀವಂತ ಸಮಾಧಿ ಮಾಡಿದ್ದ ಪ್ರಕರಣ ಯಾವುದೇ ಸಿನಿಮಾ ಕಥೆಗೂ ಕಮ್ಮಿಯಿಲ್ಲ ಎನ್ನುವಂತಿದೆ.

Yoga Teacher

ಹೌದು. ಬೆಂಗಳೂರಿನ (Bengaluru) ಯೋಗ ಶಿಕ್ಷಕಿಯನ್ನ ಸಂತೋಷ್ ಕುಮಾರ್ ಪತ್ನಿ ಬಿಂದು ಕೊಟ್ಟ ಸುಪಾರಿ ಮೇರೆಗೆ ಸತೀಶ್ ರೆಡ್ಡಿ ಅಂಡ್ ಕಿಡ್ನಾಪರ್ಸ್ ಗ್ಯಾಂಗ್ ಆಕ್ಟೋಬರ್ 23 ರಂದು ಅಪಾರ್ಟ್ಮೆಂಟ್‌ನಿಂದ (Apartment) ಕಾರಿನಲ್ಲಿ ಕರೆದುಕೊಂಡು ಬಂದಿದ್ರು. ಪ್ರೀ ಪ್ಲಾನ್‌ನಂತೆ ಆಕೆಯನ್ನ ಕಾರಲ್ಲಿ ಇಡೀ ದಿನ ಬೆಂಗಳೂರಿನ ನಾನಾ ಕಡೆ ಸುತ್ತಾಡಿಸಿ ಕೊನೆಗೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ರಸ್ತೆಯಲ್ಲಿನ ಗೌಡನಹಳ್ಳಿ ಧನಮಿಟ್ಟೇನಹಳ್ಳಿ ಬಳಿ ಮಾರ್ಗ ಮಧ್ಯೆ ನಿರ್ಜನ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಕಾರಿಂದ ಕೆಳಗೆ ಇಳಿಸಿ ಹಲ್ಲೆ ನಡೆಸಿದ್ದರು. ಆಕೆಯ ಮೈಮೇಲೆ ಇದ್ದ ಚಿನ್ನಾಭರಣ ಕಸಿದು, ಲೈಂಗಿಕ ದೌರ್ಜನ್ಯ ಮಾಡಿದ್ದರು. ಅರೆಬೆತ್ತಲೆಯಾಗಿದ್ದ ಆಕೆಯ ಕುತ್ತಿಗೆಗೆ ಚಾರ್ಜರ್ ವೈರ್‌ನಿಂದ ಬಲವಾಗಿ ಬಿಗಿದು ಉಸಿರುಗಟ್ಟಿಸಿದ್ದರು.. ಇನ್ನೇನು ಆಕೆ ಸತ್ತಳು ಅಂತ ಅಲ್ಲಿಂದ ಎಸ್ಕೇಪ್ ಆಗಿದ್ದರು. ಆದ್ರೆ ಯೋಗ ಶಿಕ್ಷಕಿಯಾಗಿದ್ದ ಅರ್ಚನಾ ಪ್ರಾಣಾಯಾಮದ ಟೆಕ್ನಿಕ್‌ಗಳ ಮೂಲಕ ಸತ್ತವಳಂತೆ ನಾಟಕ ಮಾಡಿದ್ರು, ಕಿಡ್ನಾಪರ್ಸ್ ಎಸ್ಕೇಪ್ ಆದ ನಂತರ ಮೆಲ್ಲಗೆ ಎದ್ದು ಅಲ್ಲಿಂದ ಊರಿನತ್ತ ಬಂದಿದ್ದಾರೆ.

Yoga Teacher 4

ಮೊದಲೇ ಅರಬೆತ್ತಲೆಯಾಗಿದ್ದ ಆಕೆ ಮೈ ಮುಚ್ಚಿಕೊಳ್ಳಲು ಅಲ್ಲೇ ಎಲ್ಲೋ ಬಿದ್ದಿದ್ದ ಹಳೆಯ ಶರ್ಟ್ ಧರಿಸಿಕೊಂಡಿದ್ದಾಳೆ. ಇನ್ನೂ ಸೊಂಟದ ಕೆಳಭಾಗಕ್ಕೆ ಕಾಡು ಮನುಷ್ಯರಂತೆ ಸೊಪ್ಪು ಸುತ್ತಿಕೊಂಡು ದಾರಿಯುದ್ದಕ್ಕೂ ನಡೆದುಕೊಂಡೇ ಬಂದಿದ್ದು. ಕೋಳಿ ಕೂಗುವ ಶಬ್ದ ಕೇಳಿ ವೆಂಕಟೇಶ್ ಎಂಬುವವರ ಮನೆಯತ್ತ ಧಾವಿಸಿದ್ದಾರೆ. ಮುಂಜಾನೆ 5 ಗಂಟೆ ಸುಮಾರಿಗೆ ಇದ್ಯಾರಪ್ಪ ಅಂತ ಎದ್ದವರು ಶಾಕ್ ಆಗಿ ನೋಡಿ ಈಕೆಗೆ ಸಹಾಯ ಮಾಡಿದ್ದಾರೆ. ಇದನ್ನೂ ಓದಿ: ಜಮಾತ್-ಎ-ಇಸ್ಲಾಮಿ ಬೆಂಬಲದೊಂದಿಗೆ ಪ್ರಿಯಾಂಕಾ ವಯನಾಡಿನಲ್ಲಿ ಸ್ಪರ್ಧೆ – ಪಿಣರಾಯಿ ವಿಜಯನ್‌

Accused of kidnapping and attempted murder of woman arrested in Chikkaballapur

ಇನ್ನೂ ಯೋಗ ಶಿಕ್ಷಕಿಯನ್ನ ಕೊಲೆ ಮಾಡಿದ್ದ ಜಾಗ ನಿರ್ಜನ ಅರಣ್ಯ ಪ್ರದೇಶವಾಗಿದ್ದು, ಕುರಚಲು ಗಿಡಗಳು ಬೆಳೆದುಕೊಂಡಿವೆ. ಎತ್ತ ನೊಡಿದರೂ ಮಳೆಯ ನೀರು ಹರಿದಿರೋ ದೊಡ್ಡ ಗುಂಡಿಗಳಿವೆ. ಆದೇ ಗುಂಡಿಯೊಳಗೆ ಈಕೆಯನ್ನ ಮುಚ್ಚಿ ಹಾಕಿದ್ದ ಕಿಡ್ನಾಪರ್ಸ್ ಆ ಗುಂಡಿ ಮೇಲೆ ಕುರಚಲು ಗಿಡಗಳ ಸೊಪ್ಪು ಸೆದೆ ಹಾಕಿ ಮುಚ್ಚಿ ಹಾಕಿದ್ದಾರೆ. ಆದ್ರೆ ಪ್ರಾಣಾಯಾಮದ ಟೆಕ್ನಿಕ್ ಮೂಲಕ ಬದುಕಿ ಬಂದಿದ್ದಾರೆ. ಸದ್ಯ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕೃತ್ಯಕ್ಕೂ ಮುನ್ನ ಆಕೆಯನ್ನ ಹತ್ತಿಸಿಕೊಂಡಿದ್ದ ಅಪಾರ್ಟ್ಮೆಂಟ್, ಹಾಗೂ ಕಿಡ್ನಾಪರ್ ಸತೀಶ್ ರೆಡ್ಡಿ ಆಫೀಸ್, ಸೇರಿದಂತೆ ಪ್ಲಾನ್ ಮಾಡಲು ಸೇರಿದ್ದ ಸ್ಥಳವೊಂದರಲ್ಲಿ ಮಹಜರು ನಡೆಸಿದ್ದಾರೆ. ಇದನ್ನೂ ಓದಿ: ಕರ್ನಾಟಕವನ್ನ ಲೂಟಿ ಹೊಡೀತಿದ್ದಾರೆ.. ರಕ್ಷಣೆ ಮಾಡಿ – ನಿರ್ಮಲಾ ಸೀತಾರಾಮನ್ ಎದುರು ಹೈಡ್ರಾಮಾ

ಈ ಯೋಗ ಟೀಚರ್ ಅರ್ಚನಾಗೆ ಗುಂಡಿ ತೋಡಿಸಿದ್ದೇ ಈ ಬಿಂದು. ಈ ಬಿಂದುಗೆ ಅರ್ಚನಾ ತನ್ನ ಗಂಡನ ಜೊತೆ ಸಲುಗೆಯಿಂದ ಇರೋದು ಇಷ್ಟವಿರಲಿಲ್ಲ. ಗಂಡನೊಂದಿಗೆ ಈಕೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾಳೆ ಅನ್ನೋ ಸಿಟ್ಟಿತ್ತು. ತನ್ನ ಗಂಡನನ್ನ ತನ್ನತ್ತಲೇ ಉಳಿಸಿಕೊಳ್ಳಬೇಕು ಅಂತ ಬಿಂದು ಯೋಚನೆ ಮಾಡಿದಳು, ಅದಕ್ಕೆ ದಾರಿ ಹುಡುಕೋಕೆ ಶುರು ಮಾಡಿದ್ಳು. ಈಗಂತೂ ಯಾರಿಗೆ ಯಾವ ಡೌಟ್ ಬಂದ್ರೂ ಹುಡುಕೋದೇ ಗೂಗಲ್‌ನಲ್ಲಿ. ಅದೇ ರೀತಿ ಬಿಂದು ಕೂಡ ಈ ಅರ್ಚನಾಗೆ ಒಂದು ಗತಿ ಕಾಣಿಸಬೇಕು ಅಂದ್ರೆ ಏನ್ ಮಾಡೋದು ಅಂತ ಗೂಗಲ್‌ನಲ್ಲಿ ಸರ್ಚ್ ಮಾಡಿದ್ದಾಳೆ. ಹೀಗೆ ಸರ್ಚ್ ಮಾಡಿದವಳಿಗೆ ಸಿಕ್ಕಿದ್ದು ಡಿಟೆಕ್ಟಿವ್ ಏಜೆನ್ಸಿ.. ಈ ಡಿಟೆಕ್ಟಿವ್ ಏಜೆನ್ಸಿಗೆ ಕಾಲ್ ಮಾಡ್ತಿದ್ದವಳಿಗೆ ಇಲ್ಲಿದ್ದಾನಲ್ಲ ಈ ಸತೀಶ್ ರೆಡ್ಡಿಯ ಕಾಂಟ್ಯಾಕ್ಟ್ ಸಿಕ್ಕಿಬಿಟ್ಟಿತ್ತು. ಡಿಟೆಕ್ಟಿವ್ ಏಜೆನ್ಸಿ ನಡೆಸುತ್ತಿದ್ದ ಸತೀಶ್ ರೆಡ್ಡಿಗೆ 4 ಲಕ್ಷ ರೂ. ಸುಪಾರಿ ಕೊಟ್ಟಿದ್ದಾಳೆ.

ಒಟ್ನಲ್ಲಿ ಕಿಡ್ನ್ಯಾಪ್‌ ಆಗಿ ಕೊಲೆಯಾಗಬೇಕಿದ್ದ ಯೋಗ ಶಿಕ್ಷಕಿ ಬದುಕಿದ್ದೇ ರೋಚಕವಾಗಿದೆ. ಸದ್ಯ ಕಿಡ್ನಾಪರ್ಸ್ ಹಾಗೂ ಸುಪಾರಿ ಕೊಟ್ಟಿದ್ದ ಕಿಲಾಡಿ ಲೇಡಿ ಜೈಲು ಸೇರಿದ್ದು, ಕಿಡ್ನಾಪ್‌ಗಾಗಿ ಕಾರು ಕಳವು ಮಾಡಿದ ತಂದಿದ್ದ ಅಪ್ರಾಪ್ತ ಬಾಲಕ ಸಹ ಕಾನೂನು ಪ್ರಕ್ರಿಯೆಗೆ ಒಳಗಾಗಿದ್ದಾನೆ. ಇದನ್ನೂ ಓದಿ: Kodagu | ದೇವಾಲಯಕ್ಕೂ ಹಬ್ಬಿದ ವಕ್ಫ್‌ ಭೂತ – ವನದುರ್ಗ, ಗುಳಿಗ ದೈವಾರಾಧನೆ ನಡೆಯುವ 11 ಎಕ್ರೆ ಜಾಗ ವಕ್ಫ್‌ ಆಸ್ತಿ!

Share This Article