ಚಿಕ್ಕಬಳ್ಳಾಪುರ: ತಾಲೂಕಿನ ಮುದ್ದೇನಹಳ್ಳಿ ಬಳಿಯ ಸರ್ ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ (Visvesvaraya Technological University) ಮುದ್ದೇನಹಳ್ಳಿ ಕ್ಯಾಂಪಸ್ ನಲ್ಲಿ ಎಂಬಿಎ ವಿದ್ಯಾರ್ಥಿಯೋರ್ವ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕಾಲೇಜಿನ ವಸತಿ ನಿಲಯದ (Hostel) ಕೊಠಡಿಯಲ್ಲಿ 22 ವರ್ಷದ ಬಾಬು ವಿ ಫ್ಯಾನಿಗೆ ಕೊರಳೊಡ್ಡಿ ಕೊನೆಯುಸಿರು ಚೆಲ್ಲಿದ್ದಾನೆ. ಅಂದಹಾಗೆ ಇಂದು ಬೆಳಗ್ಗೆ 10 ಗಂಟೆಯವರೆಗೂ ಚೆನ್ನಾಗಿಯೇ ಇದ್ದ ಬಾಬು ನಂತರ ಇದ್ದಕ್ಕಿದ್ದಂತೆ ಕೊಠಡಿಗೆ ಹೋಗಿ ಫ್ಯಾನಿಗೆ ಹಗ್ಗ ಕಟ್ಟಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಇದನ್ನೂ ಓದಿ: Bharat Mobility Global Expo | ವಿನೂತನ ವಾಹನಗಳ ವಿಶ್ವರೂಪವನ್ನೇ ನೋಡ್ತಿದ್ದೇನೆ: ಹೆಚ್‌ಡಿಕೆ
Advertisement
Advertisement
ಇನ್ನೂ ಸಾಯುವ ಮುನ್ನ ತನ್ನ ಅಣ್ಣನ ಮೊಬೈಲ್‌ಗೆ ಸ್ನೇಹಿತರು ಕೊಡಬೇಕಾದ ಹಣದ ವಿವರ, ಬ್ಯಾಂಕ್ ನಲ್ಲಿರುವ ಹಣದ ಮಾಹಿತಿ ಹಾಗೂ ಎಟಿಎಂನ ಪಿನ್ ನಂಬರ್ ಮೆಸೇಜ್ ಮಾಡಿದ್ದಾನೆ. ಇದ್ರಿಂದ ಕೂಡಲೇ ತಮ್ಮನಿಗೆ ಅಣ್ಣ ಕರೆ ಮಾಡಿದ್ರೂ ಕರೆ ಸ್ವೀಕರಿಸಿಲ್ಲ. ತದನಂತರ ಸ್ನೇಹಿತರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಕೊಠಡಿಗೆ ಹೋಗಿ ನೋಡಲಾಗಿ ಆತ್ಮಹತ್ಯೆ ಮಾಡಕೊಂಡಿರುವುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರ್ ಇ ವಿಟಾರಾ ಅನಾವರಣ; 500 ಕಿಮೀ ರೇಂಜ್
Advertisement
Advertisement
ಇನ್ನೂ ಬಾಬು ಯಾಕೆ ಆತ್ಮಹತ್ಯೆ ಮಾಡಿಕೊಂಡ ಎಂಬುದರ ಬಗ್ಗೆ ನಿಖರ ಕಾರಣ ಯಾರ ಬಳಿಯೂ ಹೇಳಿಕೊಂಡಿಲ್ಲ. ಕಾಲೇಜಿನ ಸಹಪಾಠಿಗಳು ಹೇಳಿರುವ ಮಾಹಿತಿ ಪ್ರಕಾರ ಬಾಬು ಕಾಲೇಜಿನಲ್ಲೇ ತಮ್ಮದೇ ತರಗತಿಯ ವಿದ್ಯಾರ್ಥಿನಿಯೊಬ್ಬಳನ್ನ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದೆ. ಅದೇ ಹುಡಿಗಿಯನ್ನ ಇಂದು ತನ್ನ ಬೈಕ್ ಮೂಲಕವೇ ಕಾಲೇಜು ಕ್ಯಾಂಪಸ್ ನಿಂದ ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡಿಬಂದಿದ್ದನಂತೆ. ಆದ್ರೆ ಆಕೆ ಹಾಗೂ ಬಾಬು ನಡುವೆ ಅದೇನ್ ಮನಸ್ತಾಪ ಆಗಿದೆಯೋ ಗೊತ್ತಿಲ್ಲ. ಅಲ್ಲಿಂದ ಬಂದವನೇ ನೇರವಾಗಿ ಕೊಠಡಿಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಘಟನೆ ನಂತರ ನಂದಿಬೆಟ್ಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯೆ ಶವಾಗಾರಕ್ಕೆ ರವಾನಿಸಿದ್ದಾರೆ. ಮೃತನ ಸಂಬಂಧಿಕರು ವಿಚಾರಣೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಮುಡಾ ಮಾಜಿ ಆಯುಕ್ತನ ಹೆಸ್ರಲ್ಲಿ 198, ಎಂಎಲ್‌ಸಿ ಹೆಸ್ರಲ್ಲಿ 128 ಬೇನಾಮಿ ಸೈಟ್ – 631 ಸೈಟುಗಳ ಮಾಹಿತಿ ಕೇಳಿದ ಇಡಿ