ಬೆಂಗಳೂರು: ನಾನು ಚೆನ್ನೈ ನಲ್ಲಿದ್ದಾಗ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಸಾವಿನ ಸುದ್ದಿ ತಿಳಿಯಿತು. ನನಗೆ ತುಂಬಾ ನೋವಾಯಿತು. ಪೇಜಾವರ ಶ್ರೀಗಳ ಆಗಲಿಕೆ ಬಹಳ ನೋವಿನ ಸಂಗತಿ ಎಂದು ಪೇಜಾವರ ಶ್ರೀಗಳ ನಿಧನಕ್ಕೆ ಮಾಜಿ ಸಚಿವ ರೋಷನ್ ಬೇಗ್ ಸಂತಾಪ ಸೂಚಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮಾಜಿ ಸಚಿವ ರೋಷನ್ ಬೇಗ್, ಉಡುಪಿಯಿಂದ ಮೈಸೂರಿಗೆ ಬಂದು ದಲಿತ ಕಾಲೋನಿಗಳಿಗೆ ಬಂದು ದಲಿತ ಕಾಲೋನಿ ಜನರು ಸಹ ನಮ್ಮವರೇ. ಎಲ್ಲರೂ ಒಂದೇ ಎಂದು ಸಮಾಜ ಸುಧಾರಣೆ ಮಾಡಿದವರು. ಶ್ರೀಗಳು ಕೇವಲ ಸ್ವಾಮೀಜಿಗಳಷ್ಟೇ ಅಲ್ಲ ಅವರು ಸಮಾಜ ಸುಧಾಕರು ಆಗಿದ್ದರು ಎಂದು ಬಣ್ಣಿಸಿದರು.
Advertisement
Advertisement
ಶ್ರೀಗಳು ಸಿಕ್ಕಾಗಲೆಲ್ಲಾ ನಾನು ಆಶೀರ್ವಾದ ಪಡೆಯುತ್ತಿದ್ದೆ ಆಗ ಅವರು ಹೆಲಿಕಾಪ್ಟರ್ ಕೊಟ್ಟಿದ್ರಲ್ಲಾ ಎಂಬ ವಿಷಯವನ್ನು ಪ್ರಸ್ತಾಪ ಮಾಡುತ್ತಿದ್ದರು. ಅಂದಹಾಗೆ 20 ವರ್ಷಗಳ ಹಿಂದೆ ನಾನು ಗೃಹ ಮಂತ್ರಿಯಾಗಿದ್ದ ರಾಯಚೂರು ಬಳಿ ಶ್ರೀಗಳ ಕಾರು ಅಪಘಾತಕ್ಕೀಡಾಗಿತ್ತು. ಆಗ ನಾನು ಅವರಿಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿಸಿದ್ದೆ. ಈ ವಿಷಯವನ್ನು ಸಿಕ್ಕಾಗಲೆಲ್ಲಾ ಶ್ರೀಗಳು ಪ್ರಸ್ತಾಪ ಮಾಡಿ ಆಶೀರ್ವಾದ ಮಾಡುತ್ತಿದ್ದರು. ಶ್ರೀಗಳ ಆಗಲಿಕೆಯ ದುಃಖ ಭರಿಸುವ ಶಕ್ತಿ ಭಕ್ತರಿಗೆ ದೇವರು ನೀಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು.