ಚಿಕ್ಕಬಳ್ಳಾಪುರ: ಕೊರೊನಾಗೆ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಬಲಿಯಾಗಿದ್ದು, ಅವರ ಬಳಿ ಪಡಿತರ ಪಡೆದಿದ್ದ 100ಕ್ಕೂ ಹೆಚ್ಚು ಮಂದಿಗೆ ಈಗ ಕೊರೊನಾ ಭೀತಿ ಎದುರಾಗಿದೆ.
ಕಳೆದ ಎರಡು ದಿನಗಳ ಹಿಂದ ಚಿಕ್ಕಬಳ್ಳಾಪುರ ನಗರದ 65 ವರ್ಷದ ವೃದ್ಧ ಕೊರೊನಾಗೆ ಮೃತಪಟ್ಟಿದ್ದು, ಈಗ ಅವರ ಕೊನೆಯ ಮಗ(26), ಎದುರುಗಡೆ ಮನೆಯ ನಿವಾಸಿ 20 ಹಾಗೂ 19 ವರ್ಷದ ಯುವಕರಿಗೂ ಕೊರೊನಾ ಸೋಂಕು ದೃಢಪಟ್ಟಿದೆ.
Advertisement
Advertisement
ಈ ಮಧ್ಯೆ ಮೃತ ವೃದ್ಧ ಉಸಿರಾಟದ ಸಮಸ್ಯೆಗೆ ಓಳಗಾಗಿ ಆಸ್ಪತ್ರೆಗೆ ಹೋಗುವ ದಿನ ತನ್ನ ಏರಿಯಾದ ಜನರಿಗೆ ಉಚಿತವಾಗಿ ಪಡಿತರ ವಿತರಣೆ ಮಾಡಿದ್ದರು. ಹೀಗಾಗಿ ಏರಿಯಾದ 100ಕ್ಕೂ ಹೆಚ್ಚು ಮಂದಿ ವೃದ್ಧನ ಮನೆಗೆ ಬಂದು ಪಡಿತರ ಪಡೆದುಕೊಂಡು ಹೋಗಿದ್ದರು ಎನ್ನಲಾಗಿದೆ. ಆದ್ದರಿಂದ ಪಡೆತರ ಪಡೆದ ಮಂದಿಯನ್ನು ಪತ್ತೆಹಚ್ಚುವ ಕೆಲಸ ಮಾಡಲಾಗುತ್ತಿದೆ.
Advertisement
Advertisement
ಮತ್ತೊಂದೆಡೆ ಪಡಿತರ ಪಡೆದವರಿಗೆ ಕೊರೊನಾ ಸೋಂಕು ತಗುಲಿರುವ ಸಾಧ್ಯತೆ ಇರುವ ಕಾರಣ ಇಡೀ ಏರಿಯಾದಲ್ಲಿ ರ‌್ಯಾಂಡಮ್ ತಪಾಸಣೆ ಮಾಡೋದರ ಜೊತೆಗೆ ಅನುಮಾನಿತರ ಸ್ವಾಬ್ ಟೆಸ್ಟ್ ಮಾಡೋಕೆ ತೀರ್ಮಾನಿಸಲಾಗಿದೆ. ಸದ್ಯ ಕೊರೊನಾ ಕಂಟಕ ಚಿಕ್ಕಬಳ್ಳಾಪುರ ನಗರಕ್ಕೆ ಆವರಿಸಿದ್ದು, ನಗರವನ್ನ ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.