ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ನಗರದ ಆಜಾದ್ ಚೌಕ್‍ನಲ್ಲಿ ತಡರಾತ್ರಿ ನಡೆದ ಕೊಲೆ ಪ್ರಕರಣ ಸಂಬಂಧಪಟ್ಟಂತೆ ಆರೋಪಿ ನವೀದ್ ಎಂಬವನನ್ನು ಚಿಂತಾಮಣಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Advertisement
ಚಿಂತಾಮಣಿ ನಗರದ ಆಗ್ರಹಾರ ನಿವಾಸಿ 35 ವರ್ಷದ ಸೈಯದ್ ಮುಸ್ತಾಕ್ ಎಂಬವರನ್ನ ಸೆ.13 ರ ರಾತ್ರಿ 8.30 ಗಂಟೆ ಸುಮಾರಿಗೆ ಕೊಲೆ ಮಾಡಲಾಗಿತ್ತು. ಜನವಸತಿ ಪ್ರದೇಶದಲ್ಲೇ ಚಾಕುವಿನಿಂದ ಎದೆ ಹಾಗೂ ಹೊಟ್ಟೆಗೆ ಇರಿದು ಯುವಕನೋರ್ವ ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಆತ ಯಾರೆಂಬುದು ಸ್ಥಳೀಯರಿಗೆ ಗೊತ್ತಾಗಿರಲಿಲ್ಲ. ನವೀದ್ ಇರಬಹುದು ಅನ್ನೋ ಅನುಮಾನಗಳು ಇತ್ತು. ಇದನ್ನೂ ಓದಿ: ಮೊಬೈಲ್ ಟವರ್ ನಿರ್ಮಾಣಕ್ಕೆ ಸ್ಥಳೀಯರ ವಿರೋಧ – ನಿವೃತ್ತ ಪೊಲೀಸಪ್ಪ ಹೈಡ್ರಾಮಾ
Advertisement
Advertisement
ಪೊಲೀಸರು ನವೀದ್ ಎಂಬ ಆಟೋ ಚಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ನವೀದ್ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇದನ್ನೂ ಓದಿ:ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಹಲ್ಲೆ ಆರೋಪ
Advertisement
ಕೊಲೆಗೆ ಕಾರಣ ಏನು..?
ಮೃತ ಮುಸ್ತಾಕ್ ಪತ್ನಿ ಜೊತೆ ನವೀದ್ ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಈ ಬಗ್ಗೆ ಸ್ಥಳೀಯರು ಮುಸ್ತಾಕ್ ಗೆ ಕುಹಕ ಮಾಡುತ್ತಿದ್ದರಂತೆ. ಇದರಿಂದ ಕೆರಳಿದ ಮುಸ್ತಾಕ್, ನವೀದ್ ಗೆ ಕರೆ ಮಾಡಿ ಮಾತಾಡಬೇಕು ಬಾ ಅಂತ ಕರೆಸಿಕೊಂಡಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಮೊದಲೇ ಚಾಕು ತಂದಿದ್ದ ನವೀದ್, ಮುಸ್ತಾಕ್ ಗೆ ಇರಿದು ಕೊಲೆ ಮಾಡಿದ್ದಾನೆ.