ಚಿಕ್ಕಬಳ್ಳಾಪುರ: ಪೋಷಕರ ವಿರೋಧದ ನಡುವೆಯೂ ಮದುವೆಯಾಗಿದ್ದ ಹಿಂದೂ ಯುವಕ ಹಾಗೂ ಮುಸ್ಲಿಂ ಯುವತಿಯ (Muslim Girl) ಪ್ರೇಮವಿವಾಹ ಕೇವಲ 15 ದಿನಕ್ಕೆ ಮುರಿದುಬಿದ್ದಿದೆ.
ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಮೈಲಪನಹಳ್ಳಿ ಗ್ರಾಮದ 23 ವರ್ಷದ ಫಸಿಹಾ ಹಾಗೂ ಇದೇ ಗ್ರಾಮದ 25 ವರ್ಷದ ನಾಗಾರ್ಜುನ ಇಬ್ಬರು ಪರಸ್ಪರ 2 ವರ್ಷಗಳಿಂದ ಪ್ರೀತಿ ಮಾಡಿ ಕಳೆದ ತಿಂಗಳು ಮಾರ್ಚ್ 23 ರಂದು ಪ್ರೇಮವಿವಾಹವಾಗಿದ್ರು. ಪ್ರೇಮ ವಿವಾಹಕ್ಕೆ (Love Marriage) ಯುವಕನ ಮನೆಯಲ್ಲಿ ಒಪ್ಪಿಗೆ ಇದ್ರೂ ಯುವತಿ ಮನೆಯಲ್ಲಿ ಒಪ್ಪಿಗೆ ಇರಲಿಲ್ಲ. ಹೀಗಾಗಿ ರಕ್ಷಣೆ ಕೋರಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಮೊರೆ ಹೋಗಿದ್ರು. ಇದನ್ನೂ ಓದಿ: ಚಿಕ್ಕಬಳ್ಳಾಪುರ | ಪೋಷಕರ ವಿರೋಧದ ನಡ್ವೆ ಹಿಂದೂ ಯುವಕ – ಮುಸ್ಲಿಂ ಯುವತಿ ಪ್ರೇಮ ವಿವಾಹ
ಠಾಣೆಯಲ್ಲಿ ಎರಡೂ ಕಡೆಯ ಪೋಷಕರನ್ನ ಕರೆಸಿ ವಿಚಾರಣೆ ಮಾಡಲಾಗಿ ಯುವತಿಯನ್ನ ಸಹ ಅವರ ಪೋಷಕರ ಜೊತೆ ಮಾತನಾಡಲು ಅವಕಾಶ ನೀಡಲಾಗಿತ್ತು. ಆದ್ರೆ ಯುವತಿ ತಾನು ಮದುವೆಯಾದ ಯುವಕನ ಜೊತೆಯಲ್ಲೇ ಹೋಗುವುದಾಗಿನ ತಿಳಿಸಿ ನಾಗಾರ್ಜುನನ ಕೈ ಹಿಡಿದು ಹೊರಟಿದ್ದಳು. ಇದನ್ನೂ ಓದಿ: ಚಿಕ್ಕಬಳ್ಳಾಪುರ ನಗರಸಭೆಯ 6 ಮಂದಿ ಕಾಂಗ್ರೆಸ್ ಸದಸ್ಯರು ಅನರ್ಹ – ಸುಧಾಕರ್ ವಿರುದ್ಧ ಸೇಡು ತೀರಿಸಿಕೊಂಡ ಪ್ರದೀಪ್ ಈಶ್ವರ್
ಇದೀಗ ಮದುವೆಯಾಗಿ 15 ದಿನ ಕಳೆಯೋದರೊಳಗೆ ಯುವತಿ ಫಸಿಹಾ ತಾಯಿ ಮನೆ ಸೇರಿಕೊಂಡಿದ್ದಾಳೆ. ತಾಯಿಗೆ ಅನಾರೋಗ್ಯ ಇದೆ ನನ್ನ ನೋವಲ್ಲೇ ಕೊರಗಿ ನೋವು ತಿನ್ನುತ್ತಾರೆ ಅನ್ನೋ ಕಾರಣ ನೀಡಿ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರಿಗೆ ಮುಚ್ಚಳಿಕೆ ಬರೆದುಕೊಟ್ಟು ತಾಯಿ ಮನೆ ಸೇರಿಕೊಂಡಿದ್ದಾಳೆ.
ಇದ್ರಿಂದ ಪೋಷಕರ ವಿರೋಧದ ನಡುವೆ ಸಮುದಾಯಗಳು, ಸಮಾಜದಲ್ಲಿ ಸಾಕಷ್ಟು ಚರ್ಚೆಗೀಡು ಮಾಡಿದ್ದ ಹಿಂದೂ ಯುವಕ-ಮುಸ್ಲಿಂ ಯುವತಿಯ ಮದುವೆ ಮುರಿದು ಬಿದ್ದಿದೆ. ಇದನ್ನೂ ಓದಿ: Chikkaballapura | ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ 20ಕ್ಕೂ ಹೆಚ್ಚು ಟ್ಯಾಕ್ಸಿಗಳು ವಶಕ್ಕೆ