ಚಿಕ್ಕಬಳ್ಳಾಪುರ: ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಪ್ರಿಯಕರ ಹಾಗೂ ತನ್ನ ಸಹೋದರನ ಜೊತೆ ಸೇರಿ ಸುಪಾರಿ ಕೊಟ್ಟು ಗಂಡನಿಗೆ ಗುಂಡು ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಐನಾತಿ ಹೆಂಡತಿ, ಈಕೆಯ ಪ್ರಿಯಕರ ಹಾಗೂ ಆಕೆಯ ಸಹೋದರ ಸೇರಿ 6 ಮಂದಿಯನ್ನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರ ಪೊಲೀಸರು ಬಂಧಿಸಿದ್ದಾರೆ.
ಸುಪಾರಿ ಕೊಟ್ಟ ಹೆಂಡತಿಯ ಹೆಸರು ಸುಮಿತ್ರಾ. ಗುಂಡಿನ ದಾಳಿಗೆ ಒಳಗಾದವರು ಮೂಲತಃ ಆನೆಮಡುಗು ಗ್ರಾಮದ ಗಾರೆ ಕೆಲಸಗಾರ ಗೋವಿಂದಪ್ಪ.
ಘಟನೆಯ ವಿವರ:
ಆಗಸ್ಟ್ 18 ರಂದು ಶಿಡ್ಲಘಟ್ಟ ನಗರದ ಇದ್ಲೂಡು ರಸ್ತೆಯಲ್ಲಿ ಬೈಕಿನಲ್ಲಿ ಹೋಗುತ್ತಿದ್ದ ಗೋವಿಂದಪ್ಪ ಮೇಲೆ ಪಲ್ಸರ್ ಬೈಕಿನಲ್ಲಿ ಬಂದ ಅಪರಿಚಿತರು ಮಸಲ್ ಗನ್ ಬಳಸಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ರು. ಘಟನೆಯಲ್ಲಿ ಮಸಲ್ ಗನ್ ಗೆ ಸೈಕಲ್ ಬಾಲ್ಸ್ ಬಳಸಿ ಗುಂಡಿನ ದಾಳಿ ನಡೆಸಲಾಗಿದ್ದು, ಪರಿಣಾಮ ಗೋವಿಂದಪ್ಪ ಬೆನ್ನಿನ ಭಾಗ ಸೇರಿ ತಲೆಯ ಭಾಗದಲ್ಲಿ ಗಾಯಗಳಾಗಿದ್ದವು. ಇದನ್ನೂ ಓದಿ: ಕಾಂಗ್ರೆಸ್ಸಿನವರು ನನ್ನ ರೇಪ್ ಮಾಡಲು ಯತ್ನಿಸುತ್ತಿದ್ದಾರೆ: ಅರಗ ಜ್ಞಾನೇಂದ್ರ
ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗೋವಿಂದಪ್ಪ ಗುಣಮುಖರಾಗಿದ್ದಾರೆ. ಘಟನೆ ಸಂಬಂಧ ತನಿಖೆ ನಡೆಸಿರುವ ಪೊಲೀಸರಿಗೆ ಇದೆಲ್ಲಾ ಗೋವಿಂದಪ್ಪನ ಪತ್ನಿ ಸುಮಿತ್ರಾಳದ್ದೇ ಕೃತ್ಯ ಅನ್ನೋ ಸತ್ಯ ಗೊತ್ತಾಗಿದೆ. ಗೋವಿಂದಪ್ಪ ಪತ್ನಿ ಸುಮಿತ್ರ, ಮುನಿಕೃಷ್ಣ ಎಂಬವನ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇದಕ್ಕೆ ಗಂಡ ಗೋವಿಂದಪ್ಪ ಜಗಳ ಮಾಡಿ ಬುದ್ಧಿವಾದ ಹೇಳಿದ್ದಾರೆ.
ಇದೇ ವಿಚಾರವಾಗಿ ಗಂಡ ಪದೇ ಪದೇ ಟಾರ್ಚರ್ ಕಿರುಕುಳ ಕೊಡ್ತಾನೆ ಅಂತ ಪತ್ನಿ ಸುಮತ್ರಾ ಪ್ರಿಯಕರ ಮುನಿಕೃಷ್ಣ ಹಾಗೂ ಸಹೋದರ ರಾಮಕೃಷ್ಣ ಜೊತೆ ಪ್ಲಾನ್ ಮಾಡಿ, ಹರೀಶ್, ಮುರುಳಿ, ಪ್ರವೀಣ್ ಎಂಬವರಿಗೆ 2 ಲಕ್ಷ ರೂಪಾಯಿ ಸುಪಾರಿ ಕೊಟ್ಟಿದ್ರು. ಹೀಗಾಗಿ ಸುಪಾರಿ ಪಡೆದವರು ಸೇರಿ ಪತ್ನಿ, ಪ್ರಿಯಕರ ಹಾಗೂ ಸಹೋದರನನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.