ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನವೆಂಬರ್ 9ರ ರಾತ್ರಿ ವೇಳೆ ಕೇಳಿಸಿತ್ತು ಎನ್ನಲಾದ ಜೋರಾದ ಶಬ್ದಕ್ಕೆ ಸಂಬಂಧಿಸಿದಂತೆ ತಾಂತ್ರಿಕ ವರದಿಗಳು ಬಂದಿದ್ದು, ಜಿಲ್ಲೆಯ ಜನತೆ ಆತಂಕ ಪಡಬೇಕಾದ ಯಾವುದೇ ಅಂಶಗಳು ವರದಿಯಲ್ಲಿ ಇಲ್ಲ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ಸ್ಪಷ್ಟಪಡಿಸಿದ್ದಾರೆ.
Advertisement
ಈ ಕುರಿತು ಮಾಧ್ಯಮದವರಿಗೆ ಮಾಹಿತಿ ಬಿಡುಗಡೆ ಮಾಡಿರುವ ಅವರು, ಭೂಕಂಪನ ಮಾಪನ ಕೇಂದ್ರಗಳಿಂದ ಅಂಕಿ-ಅಂಶಗಳನ್ನು ಸಮಗ್ರವಾಗಿ ಪಡೆದು ತಜ್ಞರಿಂದ ವಿಶ್ಲೇಷಣೆಗೆ ಒಳಪಡಿಸಿ ವರದಿ ಪಡೆಯಲಾಗಿದೆ. ಈ ಭಾಗದಲ್ಲಿ ಯಾವುದೇ ಲಘು ಭೂಕಂಪನ ಸಂಭವಿಸಿರುವ ಕುರಿತು ಯಾವುದೇ ಸಂಕೇತ (ಸಿಗ್ನಲ್)ಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ, ಕಾಂಗ್ರೆಸ್ ಯತ್ನ: ಎಚ್‍ಡಿಕೆ
Advertisement
ಬೆಂಗಳೂರಿನ ರಾಷ್ಟ್ರೀಯ ಶಿಲಾ ಯಾಂತ್ರಿಕತೆ ಸಂಸ್ಥೆ (NIRM)ಯಿಂದಲೂ ಈಗಾಗಲೇ ಮಾಹಿತಿಗಳನ್ನು ಕಲೆ ಹಾಕಲಾಗಿದೆ. ನವೆಂಬರ್ 9ರ ರಾತ್ರಿ 9 ಗಂಟೆ ಸುಮಾರಿನ ಅವಧಿಯಲ್ಲಿ NIRM ಘಟಕಗಳ ಜಾಲದಿಂದಲೂ ಭೂಕಂಪನ ಸಂಭವಿಸಿರುವ ಬಗ್ಗೆ ಯಾವುದೇ ಸಂಕೇತಗಳು ವರದಿಯಾಗಿರುವುದಿಲ್ಲ. ಜಿಲ್ಲೆಯ ಯಾವುದೇ ಭಾಗದಲ್ಲಿ ಜೋರಾದ ಶಬ್ದ ಕೇಳಿಸಿದೆ ಎನ್ನುವ ಬಗ್ಗೆ ಜಿಲ್ಲೆಯ ಜನರು ಆತಂಕಪಡಬೇಕಾಗಿಲ್ಲ. ಲಘು ಭೂಕಂಪನದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಜಿಲ್ಲಾಧಿಕಾರಿಗಳು ಜನತೆಗೆ ಹೇಳಿದ್ದಾರೆ. ಇದನ್ನೂ ಓದಿ: ಜೈಲಿನಿಂದ ರಿಲೀಸ್ ಬಳಿಕ ಫಸ್ಟ್ ಟೈಂ ಪತ್ನಿ ಜೊತೆ ಕಾಣಿಸಿಕೊಂಡ ರಾಜ್ ಕುಂದ್ರಾ
Advertisement
Advertisement
ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಈ ಪ್ರದೇಶದ ಚಟುವಟಿಕೆಗಳ ಮೇಲೆ ನಿರಂತರವಾಗಿ ವಿಶೇಷ ನಿಗಾ ವಹಿಸಿರುತ್ತಾರೆ. ಯಾವುದೇ ಸಂದರ್ಭದಲ್ಲಿ ಯಾವುದೇ ರೀತಿಯ ಕಂಪನ ಸಂಭವಿಸಿದ ಕೂಡಲೇ ಸಂಬಂಧಪಟ್ಟ ಸಕ್ಷಮ ಕೇಂದ್ರಗಳಿಂದ ಮಾಹಿತಿ ಲಭ್ಯವಾಗಲಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.