ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇಂದು ಮತ್ತೊಬ್ಬ ಕೊರೊನಾ ಸೋಂಕಿತ ಮಹಿಳೆ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಕೋವಿಡ್-19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ-191 ಇಂದು ಡಿಸ್ಚಾರ್ಜ್ ಆಗಿದ್ದಾರೆ. ಅಂದಹಾಗೆ ಈಕೆ ಗೌರಿಬಿದನೂರಿನ ಪಿ-19 ರ ಸಹೋದರಿಯಾಗಿದ್ದಾರೆ. ಪಿ-19 ರ ತಂದೆ-ತಾಯಿ, ಇಬ್ಬರು ಸಹೋದರಿಯರು ಸೇರಿದಂತೆ ಚಿಕ್ಕಮ್ಮನಿಗೂ ಸೋಂಕು ತಗಲಿತ್ತು.
Advertisement
Advertisement
ಈ ಮೂಲಕ ಒಂದೇ ಕುಟುಂಬದ ಆರು ಮಂದಿಗೆ ಸೋಂಕು ದೃಢವಾಗಿತ್ತು. ಸದ್ಯ 6 ಮಂದಿ ಸಹ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈ ಆರು ಮಂದಿಯೂ ಗುಣಮುಖರಾಗಿದ್ದು, ಇಡೀ ಕುಟುಂಬ ಕೊರೊನಾ ಮುಕ್ತವಾಗಿದೆ. ಸದ್ಯ ಜಿಲ್ಲೆಯಲ್ಲಿ 16 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದರು. ಇದರಲ್ಲಿ ಸದ್ಯ 10 ಮಂದಿ ಗುಣಮುಖರಾಗಿದ್ದು, 4 ಮಂದಿ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.