ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ (Ganja) ಸಾಗಾಟ ಮಾಡುತ್ತಿದ್ದ ತಂದೆ ಮಗಳು ಹಾಗೂ ಮೊಮ್ಮಗ ಸೇರಿ ಐವರನ್ನು ಬಂಧಸಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ಜಿಲ್ಲೆಯ ಚಿಂತಾಮಣಿ ನಗರದ ಕುರಟಹಳ್ಳಿ ಕ್ರಾಸ್ ಬಳಿ ನಡೆದಿದೆ.
Advertisement
ಅಂದಹಾಗೆ ತಡರಾತ್ರಿ ಚಿಕ್ಕಬಳ್ಳಾಪುರ ಸೆನ್ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಂದ್ರಾ XUV-500 ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಬರೋಬ್ಬರಿ 17.50 ಲಕ್ಷ ರೂ. ಮೌಲ್ಯದ 35 ಕೆಜಿ ಗಾಂಜಾವನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಏಪ್ರಿಲ್ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್ – ಆರಂಭಿಕ ಬೆಲೆ ಎಷ್ಟು?
Advertisement
ಕಾರಿನಲ್ಲಿದ್ದ ಬಾಗೇಪಲ್ಲಿಯ ಗರಿಗರೆಡ್ಡಿಪಾಳ್ಯ ನಿವಾಸಿಗಳಾದ ತಾಯಿ ದೇವಮ್ಮ ಹಾಗೂ ಮಗ ಆಂಜಿ ಹಾಗೂ ಪಲ್ಲಿಕುಂಟೆ ನಿವಾಸಿ ಮಾರಪ್ಪ ಸೇರಿದಂತೆ ವೆಂಕಟರಮಣ ಹಾಗೂ ಆದಿನಾರಾಯಣನನ್ನ ಬಂಧಿಸಲಾಗಿದೆ. ಇದನ್ನೂ ಓದಿ: ಕನ್ನಡ ನಾಡು,ನುಡಿ,ಜಲ, ಭಾಷೆಗೆ ಸಿದ್ದರಾಮಯ್ಯ, ಡಿಕೆಶಿ ಕೊಡುಗೆ ಏನು : ಹೆಚ್‌ಡಿಕೆ ಪ್ರಶ್ನೆ
Advertisement
Advertisement
ಕೃತ್ಯಕ್ಕೆ ಬಳಿಸಿದ ಮಹೀಂದ್ರಾ ಕಾರನ್ನ ಸಹ ವಶಕ್ಕೆ ಪಡೆಯಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: 25 ನಿಮಿಷ ಜಾಹೀರಾತು ಪ್ರಕಟಿಸಿ ಸಮಯ ವ್ಯರ್ಥಗೊಳಿಸಿದ್ದಕ್ಕೆ PVR- INOXಗೆ 1.20 ಲಕ್ಷ ದಂಡ – ಬೆಂಗಳೂರು ವ್ಯಕ್ತಿಗೆ ಜಯ