ಚಿಕ್ಕಬಳ್ಳಾಪುರ: ಜಿಲ್ಲೆಯ ನೂತನ ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದ ಸಂದೀಪ್ ರೆಡ್ಡಿ (Sandeep Reddy) ಆಯ್ಕೆಯನ್ನು ತಡೆ ಹಿಡಿಯಲಾಗಿದೆ.
ಸಂದೀಪ್ ರೆಡ್ಡಿಯನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದಕ್ಕೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಡಾ. ಕೆ ಸುಧಾಕರ್ (Dr K Sudhakar) ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ವಿರುದ್ಧ ಕೆಂಡ ಕಾರಿದ್ದರು. ಇದನ್ನೂ ಓದಿ: ಸೋಮಣ್ಣ ಗೃಹಪ್ರವೇಶದಲ್ಲಿ ಭಿನ್ನರು – ದೆಹಲಿಯಲ್ಲೇ ಇದ್ರೂ ಅತ್ತ ಸುಳಿಯದ ವಿಜಯೇಂದ್ರ!
Advertisement
Advertisement
ಸಂದೀಪ್ ರೆಡ್ಡಿ ಆಯ್ಕೆಯನ್ನು ಬದಲಾವಣೆ ಮಾಡಲೇಬೇಕು ಎಂದು ಸಂಸದ ಸುಧಾಕರ್ ಪಟ್ಟು ಹಿಡಿದಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ದಾ ಸೂಚನೆ ಮೇರೆಗೆ ಇಂದು ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ ವಾಲ್ ಸಂದೀಪ್ ರೆಡ್ಡಿ ನೇಮಕಾತಿ ಆಯ್ಕೆಯನ್ನ ತಡೆಹಿಡಿಯುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರೆಗೆ ಆದೇಶ ಮಾಡಿದ್ದಾರೆ.
Advertisement
ಸಂದೀಪ್ ರೆಡ್ಡಿ ಆಯ್ಕೆಗೆ ಬ್ರೇಕ್ ಹಾಕಿಸುವ ಮೂಲಕ ಸಂಸದ ಸುಧಾಕರ್ ಮೇಲುಗೈ ಸಾಧಿಸಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಸಂದೀಪ್ ರೆಡ್ಡಿ, ಪಕ್ಷದ ತೀರ್ಮಾನವನ್ನು ಸ್ವಾಗತಿಸುತ್ತೇನೆ. ಎಲ್ಲವನ್ನೂ ಜನರು ಗಮನಿಸುತ್ತಿದ್ದಾರೆ. ನಾನು ಕಳೆದುಕೊಳ್ಳುವುದು ಏನೂ ಇಲ್ಲ. ನನಗೆ ಮತ್ತಷ್ಟು ಶಕ್ತಿ ಬರಲಿದೆ ಅಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
Advertisement