ಚಿಕ್ಕಬಳ್ಳಾಪುರ: ಮೇ 3ರವರೆಗೂ ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ನಗರದಲ್ಲಿ ಸೀಲ್‍ಡೌನ್ ಮುಂದುವರಿಯಲಿದೆ ಅಂತ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವ ಡಾ ಕೆ ಸುಧಾಕರ್ ಹೇಳಿದರು.
ಚಿಕ್ಕಬಳ್ಳಾಪುರ ನಗರದಲ್ಲಿ ಮೊಬೈಲ್ ಸ್ವಾನ್ ಕಲೆಕ್ಷನ್ ಯೂನಿಟ್ ವಾಹನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದರು, ಈ ವೇಳೆ ಚಿಕ್ಕಬಳ್ಳಾಪುರ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದ್ದೇನೆ. ಚಿಕ್ಕಬಳ್ಳಾಪುರ ಜಿಲ್ಲೆ ನೆರೆಯ ರಾಜ್ಯ ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿದ್ದು, ಆಂಧ್ರದ ಹಿಂದೂಪುರ ರೆಡ್ ಝೋನ್ ಪಟ್ಟಿಯಲ್ಲಿದೆ. ಹೀಗಾಗಿ ಮೇ 3 ರವರೆಗೂ ಸಹ ಜಿಲ್ಲೆಯಲ್ಲಿ ಎಂದಿನಂತೆ ಲಾಕ್ ಡೌನ್ ಮುಂದುವರೆಸಲು ತೀರ್ಮಾನಿಸಿರುವುದಾಗಿ ತಿಳಿಸಿದರು.
Advertisement
Advertisement
ದೇಶದ ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ರಾಜ್ಯದಲ್ಲಿನ 523 ಪ್ರಕರಣಗಳಲ್ಲಿ 198 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಉಳಿದ 325 ಮಂದಿಯಲ್ಲಿ 20 ಮಂದಿ ಮೃತಪಟ್ಟಿದ್ದಾರೆ. ಉಳಿದವರಲ್ಲಿ ಶೇ.90 ರಷ್ಟು ಮಂದಿ ಆರೋಗ್ಯಕರವಾಗಿದ್ದು ಯಾವುದೇ ತೊಂದರೆ ಇಲ್ಲದೆ ಚೇತರಿಸಿಕೊಳ್ಳುತ್ತಿದ್ದಾರೆ. ಹಲವರು ದಾನಿಗಳು ಮುಂದೆ ಪ್ಲಾಸ್ಮಾ ದಾನ ಮಾಡಿದ್ರೂ ಪ್ಲಾಸ್ಮಾ ಥೆರೆಪಿ ಮಾಡೋಕೆ ರೋಗಿಗಳೇ ಇಲ್ಲ ಎಂದರು.
Advertisement
Advertisement
ಚಿಕ್ಕಬಳ್ಳಾಪುರ ನಗರ ಹಾಗೂ ಗೌರಿಬಿದನೂರು ನಗರ ಸಂಪೂರ್ಣ ಸೀಲ್‍ಡೌನ್ ಹಾಗೆ ಮುಂದುವರೆಯಲಿದೆ. ಸದ್ಯಕ್ಕೆ ಮೊದಲಿನಂತೆ ಕೃಷಿ ಹಾಗೂ ಕೃಷಿಗೆ ಸಂಬಧಿಸಿದಂತಹ ಸರಕು ಸಾಗಣೆ ವಾಹನಗಳ ಒಡಾಟ, ಕೃಷಿ ಸಂಬಂಧಿತ ಮಳಿಗೆಗೆಳನ್ನ ತೆರೆಯಲು ಹಾಗೂ ಕೆಲ ರಸ್ತೆ ಕಾಮಗಾರಿಗಳಷ್ಟೇ ಸಡಲಿಕೆ ಇರಲಿದೆ. ಕೈಗಾರಿಕೆಗಳಿಗೂ ಸಹ ಸದ್ಯಕ್ಕೆ ವಿನಾಯತಿ ಇಲ್ಲ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 18 ಮಂದಿಗೆ ಕೊರೊನಾ ಸೋಂಕು ದೃಢವಾಗಿ, ಇಬ್ಬರು ಮೃತಪಟ್ಟಿದ್ದರು, 16 ಮಂದಿಯಲ್ಲಿ 11 ಮಂದಿ ಸಂಪೂರ್ಣ ಗುಣಮುಖರಾಗಿದ್ದು, 5 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.