ಚಿಕ್ಕಬಳ್ಳಾಪುರ: ಭಾನುವಾರ ಚರ್ಚ್ ಗೆ ಹೋಗಿ ಬರುತ್ತಿದ್ದ ಹೆಣ್ಣು ಮಕ್ಕಳನ್ನು ಚುಡಾಯಿಸುತ್ತಿದ್ದ ಯುವಕನಿಗೆ ಸಾರ್ವಜನಿಕರೇ ಹಿಡಿದು ಥಳಿಸಿರುವ ಘಟನೆ ಚಿಕ್ಕಬಳ್ಳಾಪುರ ನಗರದಲ್ಲಿ ನಡೆದಿದೆ.
ನಗರದ ಬಿಬಿ ರಸ್ತೆಯ ಚರ್ಚ್ ಮುಂಭಾಗದಲ್ಲಿ ನಿಂತಿದ್ದ ಯುವಕ ಚರ್ಚ್ ಗೆ ಹೋಗಿ ಬರುತ್ತಿದ್ದ ಹೆಣ್ಣು ಮಕ್ಕಳ ಮೈ ಕೈ ಮುಟ್ಟಿ ಎಳೆದಾಡುತ್ತಿದ್ದನಂತೆ. ಇದನ್ನು ಕಂಡ ಸ್ಥಳೀಯರು ಯುವಕನನ್ನ ಹಿಡಿದು ಥಳಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಯುವಕನ ಬಳಿ ಪಂಕ್ಚರ್ಗೆ ಹಾಕುವ ಸೆಲ್ಯೂಷನ್ ಸಹ ಪತ್ತೆಯಾಗಿದೆ. ಸೆಲ್ಯೂಷನ್ ಹೊಡೆದ ಮತ್ತಿನಲ್ಲಿ ಯುವಕ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ.