ಇಂದಿನಿಂದ 7 ದಿನಗಳ ಕಾಲ ಚಿಕ್ಕಬಳ್ಳಾಪುರ ಉತ್ಸವ- ಸುಧಾಕರ್ ಮುಂದಾಳತ್ವದಲ್ಲಿ ಭರ್ಜರಿ ಸಿದ್ಧತೆ

Public TV
2 Min Read
CHIKKABALLAPUR UTSAV 3

ಚಿಕ್ಕಬಳ್ಳಾಪುರ: ದಸರಾ, ಹಂಪಿ ಹಾಗೂ ಕಾರ್ಕಳ ಉತ್ಸವದ ಮಾದರಿಯಲ್ಲೇ ವಿಜೃಂಭಣೆಯಿಂದ ಚಿಕ್ಕಬಳ್ಳಾಪುರ (Chikkaballapur) ಉತ್ಸವ ಆಚರಣೆ ಮಾಡಲಾಗುತ್ತಿದೆ. ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮುಂದಾಳತ್ವದಲ್ಲಿ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ವಿಜೃಂಭಣೆಯಿಂದ ಚಿಕ್ಕಬಳ್ಳಾಪುರ ಉತ್ಸವ ಅಚರಣೆ ಮಾಡಲಾಗುತ್ತಿದ್ದು, ಇಂದು ಉತ್ಸವಕ್ಕೆ ಚಾಲನೆ ದೊರೆಯಲಿದೆ. ಉತ್ಸವಕ್ಕಾಗಿ ಮದುವಣಗಿತ್ತಿಯಂತೆ ಚಿಕ್ಕಬಳ್ಳಾಪುರ ನಗರ ಸಿದ್ಧವಾಗಿದೆ.

CHIKKABALLAPUR UTSAV 4

ಚಿಕ್ಕಬಳ್ಳಾಪುರ ನಗರ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಸರಾ, ಹಂಪಿ ಹಾಗೂ ಕಾರ್ಕಳದ ಉತ್ಸವದ ಮಾದರಿಯಲ್ಲೇ ಚಿಕ್ಕಬಳ್ಳಾಪುರದ ಉತ್ಸವವನ್ನ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕರು ಹಾಗೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ (Dr. K Sudhakar) ನೇತೃತ್ವದಲ್ಲಿ ಒಂದು ವಾರಗಳ ಕಾಲ ಚಿಕ್ಕಬಳ್ಳಾಪುರ ಉತ್ಸವ ನಡೆಯಲಿದೆ. ಇದಕ್ಕಾಗಿ ಸಕಲ ಸಿದ್ಧತೆಗಳು ನಡೆದಿವೆ. ಇದನ್ನೂ ಓದಿ: ನಾನು ಬಿಜೆಪಿ ಸೇರ್ಪಡೆ ಬಗ್ಗೆ ಯೋಚನೆ ಮಾಡಿಲ್ಲ: ಸುಮಲತಾ

CHIKKABALLAPUR UTSAV

ಚಿಕ್ಕಬಳ್ಳಾಪುರ ಉತ್ಸವ ಇಂದಿನಿಂದ ಒಂದು ವಾರಗಳ ಕಾಲ ನಡೆಯಲಿದೆ. ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯ ಮರಳು ಸಿದ್ದೇಶ್ವರ ದೇವಾಲಯದ ಬಳಿ ಉತ್ಸವಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಿಲಾನಂದನಾಥ ಶ್ರೀಗಳು ಚಾಲನೆ ನೀಡಲಿದ್ದಾರೆ. ಜಾನಪದ ಕಲಾ ತಂಡಗಳೊಂದಿಗೆ ನಗರದಲ್ಲಿ ಮೆರವಣಿಗೆ ನಡೆಯಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ಭರ್ಜರಿ ಮೆರವಣಿಗೆ ಮೂಕ ಚಿಕ್ಕಬಳ್ಳಾಪುರ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಉತ್ಸವದ ಉದ್ಘಾಟನೆಯಲ್ಲಿ ನಟ ಕಿಚ್ಚ ಸುದೀಪ್ ಕೂಡ ಭಾಗಿಯಾಗಲಿದ್ದು, ಸಿಎಂ (Basavaraj Bommai) ಸಹ ಸಂಜೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ. ಚಿಕ್ಕಬಳ್ಳಾಪುರ ಉತ್ಸವಕ್ಕಾಗಿ ಇಡೀ ನಗರಕ್ಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದೆ. ಚಿಕ್ಕಬಳ್ಳಾಪುರ ನಗರ ಮಿರ ಮಿರ ಮಿಂಚುತ್ತಿದೆ.

CHIKKABALLAPUR UTSAV 2

ಈಗಾಗಲೇ ಉತ್ಸವದ ಅಂಗವಾಗಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕ್ರೀಡೋತ್ಸವ ಆಚರಣೆ ಮಾಡಲಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲೂ ಗ್ರಾಮೀಣ ಕ್ರೀಡೆಗಳು ಸೇರಿದಂತೆ, ಮಿಸ್ಟರ್ ಅಂಡ್ ಮಿಸ್ಸಸ್ ಚಿಕ್ಕಬಳ್ಳಾಪುರ, ಫ್ಯಾಷನ್ ಶೋ.. ಎತ್ತುಗಳ ಸಿಂಗಾರ ಸ್ಪರ್ಧೆ ಸೇರಿ ಕ್ರೀಡಾಕೂಟ ಆಯೋಜನೆ ಮಾಡಲಾಗಿದೆ. ಈ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಲಕ್ಷ ಲಕ್ಷ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಎಲ್ಲಾ ಕ್ರೀಡಾಕೂಟ ಸೇರಿ ಒಟ್ಟಾರೆ ಒಂದು ಕೋಟಿಗೂ ಅಧಿಕ ಮೊತ್ತದ ಬಹುಮಾನ ನೀಡಲಾಗುತ್ತದೆ. ಪ್ರತಿದಿನವೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಟಾಲಿವುಡ್ ಹಾಗೂ ಸ್ಯಾಂಡಲ್‍ವುಡ್‍ನ ಖ್ಯಾತ ನಟ ನಟಿಯರು ಸಹ ಭಾಗಿಯಾಗಲಿದ್ದಾರೆ. ಟಾಲಿವುಡ್ ನಿಂದ ಯಂಗ್ ಟೈಗರ್ ಎನ್‍ಟಿಆರ್ ಹಾಗೂ ರಾಮ್ ಚರಣ್ ತೇಜ್ ಕೂಡ ಭಾಗಿಯಾಗುವ ಸಾಧ್ಯತೆ ಇದೆ. ಕಿಚ್ಚ ಸುದೀಪ್, ಯಶ್ (Yash) ಸೇರಿ ಹಲವು ನಟ ನಟಿಯರು ಭಾಗವಹಿಸಲಿದ್ದಾರೆ.

CHIKKABALLAPUR UTSAV 1

ಚಿಕ್ಕಬಳ್ಳಾಪುರ ಉತ್ಸವದ ಅಂಗವಾಗಿ ಜನವರಿ 11ರಂದು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಹಳ್ಳಿ ಹಳ್ಳಿಯಲ್ಲೂ ಊರ ಹಬ್ಬ ಆಚರಣೆ ಮಾಡಲಾಗುವುದು. ಜನವರಿ 14ರಂದು ಸಂಕ್ರಾಂತಿ ಹಬ್ಬದ ದಿನ ರಂಗೋಲಿ ಸ್ಪರ್ಧೆ ಹಾಗೂ ಸಮಾರೋಪ ಸಮಾರಂಭ ನೇರವೇರಲಿದೆ. ಅಂದು ಸಿಎಂ ಹಾದಿಯಾಗಿ ಗಣ್ಯಾತಿ ಗಣ್ಯರು ಸಚಿವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *