ಸಿಲಿಕಾನ್ ಸಿಟಿಯಲ್ಲಿ ಸದ್ಯ ಸದ್ದು ಮಾಡ್ತಿರುವ ವಿಚಾರ ಅಂದರೆ ಚಿಕ್ಕಬಳ್ಳಾಪುರ ಉತ್ಸವ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮಾಜಿ ಸಂಸದೆ ಕಮ್ ನಟಿ ರಮ್ಯಾ (Ramya) ಕೂಡ ಭಾಗಿಯಾಗಿದ್ದರು. ಈ ವೇಳೆ ಸಚಿವ ಸುಧಾಕರ್ (Minister K.Sudhakar) ಅವರನ್ನ ಹಾಡಿ ಹೊಗಳಿದ್ದಾರೆ. ರಮ್ಯಾ ನಡೆ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ. ಈ ನಡುವೆ ರಮ್ಯಾ ಬಿಜೆಪಿ (Bjp) ಸೇರಲಿದ್ದಾರೆ ಸುದ್ದಿ ಕೂಡ ಸಖತ್ ಚರ್ಚೆಯಾಗುತ್ತಿದೆ.
ಸಜಿವ ಸುಧಾಕರ್ ನೇತೃತ್ವದಲ್ಲಿ ಜನವರಿ 7ರಿಂದ 14ರವರೆಗೆ ಅದ್ದೂರಿಯಾಗಿ ಚಿಕ್ಕಬಳ್ಳಾಪುರ ಉತ್ಸವ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ ಎಂಟ್ರಿ ಅನೇಕರಿಗೆ ಅಚ್ಚರಿ ಕೂಡ ಮೂಡಿಸಿತ್ತು. ಈ ಇವೆಂಟ್‌ನಲ್ಲಿ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರನ್ನ ನಟಿ ರಮ್ಯಾ ಹಾಡಿ ಹೊಗಳಿದ್ದಾರೆ.
ಮೋಹಕ ತಾರೆ ರಮ್ಯಾ ಅವರ ಮಾತಿಗೆ ಹುಚ್ಚೆದ್ದು ಜನ ಕುಣಿಯುತ್ತಿದ್ದರು. ಸಚಿವ ಸುಧಾಕರ್ ಹವಾ ಎಂದು ಜನರು ಘೋಷಣೆ ಕೂಗುತ್ತಿದ್ದರು. ಪ್ರೇಕ್ಷಕರ ಮಾತಿಗೆ ಪ್ರತಿಕ್ರಿಯೆ ನೀಡಿದ ರಮ್ಯಾ ಅವರು, ಹೀರೋಗಿಂತ ಸಚಿವ ಸುಧಾಕರ್ ಅವರ ಹವಾ ಇಲ್ಲಿ ಜೋರಾಗಿದೆ. ಸುಧಾಕರ್ ಅವರು ಮೊದಲು ನಮ್ಮ ತಂದೆಯವರಿಗೆ ಪರಿಚಯ, ಆ ಬಳಿಕ ನನಗೆ ಫ್ರೆಂಡ್ ಆದ್ರು. ಇವತ್ತು ನನಗೆ ತುಂಬಾ ಹೆಮ್ಮೆ ಎನಿಸುತ್ತಿದೆ. ಇದನ್ನೂ ಓದಿ: ಸತತ ಸೋಲಿನಿಂದ ಬೇಸತ್ತ ಪೂಜಾಗೆ ನಿರ್ದೇಶಕ ತ್ರಿವಿಕ್ರಮ್ ಸಲಹೆ
ನಾವು ಎಷ್ಟೇ ಕ್ಲೋಸ್ ಆದರೂ ನಾನು ಯಾವತ್ತೂ ಈ ಮಾತನ್ನು ಹೇಳಿರಲಿಲ್ಲ. ನಿಮ್ಮ ಎಲ್ಲರ ಎದುರು ನಾನು ಇವತ್ತು ಹೇಳ್ತಿದ್ದೀನಿ, ನನಗೆ ತುಂಬಾ ಖುಷಿ ಆಗುತ್ತಿದೆ. ಫ್ರೆಂಡ್ ಆಗಿ ಹೆಮ್ಮೆ ಎನಿಸುತ್ತಿದೆ. ಏಕೆಂದರೆ ಸುಧಾಕರ್ ಅವರು ರಾಜಕೀಯ (Politics) ಕುಟುಂಬದಿಂದ ಬಂದಿಲ್ಲ. ಆದರೂ ರಾಜಕೀಯಕ್ಕೆ ಬಂದು, ಎಷ್ಟೇ ಕಷ್ಟವಿದ್ದರೂ ಕೂಡ ಎಲ್ಲವನ್ನು ಎದುರಿಸಿ ಇವತ್ತು ಚಿಕ್ಕಬಳ್ಳಾಪುರವನ್ನು ಇಷ್ಟು ಅಭಿವೃದ್ಧಿ ಮಾಡಿ ಹೆಸರು ಪಡೆದಿದ್ದೀರಿ. ಇಲ್ಲಿನ ಜನರ ಮುಖದಲ್ಲಿ ಖುಷಿ ನೋಡಿದರೆ ಇದು ಗೊತ್ತಾಗುತ್ತೆ, ಅವರು ನಿಮ್ಮೊಂದಿಗೆ ಸಂತೋಷವಾಗಿದ್ದಾರೆ ಎಂದು ರಮ್ಯಾ ಹೊಗಳಿದ್ದರು.
ಇದೀಗ ಮಾಜಿ ಸಂಸದೆ ರಮ್ಯಾ ಅವರು ಆಡಿರುವ ಮಾತುಗಳಿಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಆಕ್ಟೀವ್ ಇರುವ ನಟಿ ರಮ್ಯಾ ಕಾಂಗ್ರೆಸ್ ಶಾಶ್ವತವಾಗಿ ಬೈ ಹೇಳಿ ಬಿಜೆಪಿ ಸೇರ್ಪಡೆಯಾಗುತ್ತಾರಾ ಎಂಬ ಗುಮಾನಿ ಸದ್ದು ಮಾಡ್ತಿದೆ. ಅಷ್ಟಕ್ಕೂ ಈ ವಿಚಾರ ಅದೆಷ್ಟರ ಮಟ್ಟಿಗೆ ನಿಜಾ ಎಂಬುದನ್ನ ರಮ್ಯಾ ಅಧಿಕೃತವಾಗಿ ಹೇಳುವವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k