ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ (Chikkaballapur Loksabha Constituency) ಮೈತ್ರಿ ಟಿಕೆಟ್ ವಿಚಾರ ಸಂಬಂಧ ಸುಧಾಕರ್ ಗಾದ್ರೂ ಕೊಡಿ ಅಲೋಕ್ ವಿಶ್ವನಾಥ್ ಗಾದ್ರೂ ಕೊಡಿ. ಆದರೆ ಹೊರಗಿನವರಿಗೆ ಮಾತ್ರ ಟಿಕೆಟ್ ಕೊಡೋದು ಬೇಡ ಎಂದು ಶಾಸಕ ಎಸ್.ಆರ್ ವಿಶ್ವನಾಥ್ (S.R Vishwanath) ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಘೋಷಣೆ ತಡ ಯಾಕೆ ಅಂತ ನನಗೂ ಗೊತ್ತಾಗುತ್ತಿಲ್ಲ. ಸರ್ವೆ ಅಧಾರದ ಮೇಲೆ ಗೆಲ್ಲುವಂತಹ ಅಭ್ಯರ್ಥಿಗೆ ಟಿಕೆಟ್ ಕೊಡಿ. ಕಾರ್ಯಕರ್ತರಲ್ಲೂ ಆತಂಕ ಗೊಂದಲ ಮನೆ ಮಾಡಿದೆ. ದಿನಕ್ಕೊಂದು ಸುದ್ದಿ ಮೂರನೇ ವ್ಯಕ್ತಿ ಬರುವ ಮಾಹಿತಿ ಇದೆ. ಹಾಗಾಗಿ ವರಿಷ್ಠರಲ್ಲಿ ಹೊರಗಿನವರಿಗೆ ಟಿಕೆಟ್ ಕೊಡಬೇಡಿ ಅಂತ ಮನವಿ ಮಾಡಿದ್ದೇನೆ ಎಂದು ಹೇಳಿದರು.
Advertisement
Advertisement
ಎರಡು ದಿನದಲ್ಲಿ ಅಭ್ಯರ್ಥಿ ಘೋಷಣೆ ಆಗಲಿದೆ. ಸೋಮವಾರ ಸಭೆ ಇದೆ ಮೂರನೇ ಪಟ್ಟಿಯಲ್ಲಿ ಘೋಷಣೆ ಆಗಲಿದೆ. ಸ್ಥಳೀಯರಿಗೆ ಟಿಕೆಟ್ ಕೊಡಿ ಹೊರಗಿನವರು ಬೇಡವೇ ಬೇಡ. ಕುಮಾರಸ್ವಾಮಿಗೂ ಸಹ ಆಫರ್ ಕೊಟ್ಟಿರುವ ಬಗ್ಗೆ ಮಾಹಿತಿ ಬಂದಿದೆ. ನಿಲ್ಲುವ ಹಾಗೆ ಇದ್ರೆ ಅವರು ಪಕ್ಷ ಸಂಘಟನೆ ಮಾಡ್ತಿದ್ರು. ಹಾಗಾಗಿ ನಿಲ್ಲೋದು ಅನುಮಾನ ಎಂದರು.
Advertisement
ಒಂದು ವೇಳೆ ಹೈಕಮಾಂಡ್ ಕುಮಾರಸ್ವಾಮಿಯವರಿಗೆ ಕೊಟ್ರೆ ಸಹ ನಾವು ಸಹಕಾರ ಕೊಡ್ತೇವೆ. ಸುಧಾಕರ್ ಹಾಗೂ ನಾನು ಸಹ ಮಾತನಾಡಿದ್ದೇವೆ. ಇಬ್ಬರು ಸಹ ನಮ್ಮಿಬ್ಬರಲ್ಲಿ ಯಾರಿಗಾದ್ರೂ ಕೊಡಲಿ ಅಂತ ಮಾತನಾಡಿದ್ದೇವೆ. ಹೊರಗಿನವರು ಬರೋದು ಬೇಡ ಅಂತ ತೀರ್ಮಾನ ಮಾಡಿಕೊಂಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಮೈಸೂರು ಬಿಜೆಪಿ ಅಭ್ಯರ್ಥಿ ಯದುವೀರ್ ಟೆಂಪಲ್ ರನ್