ಚಿಕ್ಕಬಳ್ಳಾಪುರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್ ನೀತಿ ಹೇಳಲಷ್ಟೇ ಲಾಯಕ್. ಅವರು ಅದನ್ನು ಎಂದಿಗೂ ಕಾರ್ಯಾಚರಣೆಗೆ ತಂದಿಲ್ಲ ಎಂದು ಆರೋಗ್ಯ ಸಚಿವ ಸುಧಾಕರ್ ಟೀಕಿಸಿದರು.
ಚಿಕ್ಕಬಳ್ಳಾಪುರ ತಾಲ್ಲೂಕಿನ ಗೋಪಿನಾಥ ಬೆಟ್ಟದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಕುಮಾರ್ ಊರೂರು ಅಲೆಯುವ ಕೊಕ್ಕರೆ ಇದ್ದಂತೆ. ಅವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುವುದರಲ್ಲೆ ಇಡೀ ಜೀವನವನ್ನು ಕಳೆದುಬಿಡುತ್ತಾರೆ. ಇಂಥವರು ಇವತ್ತು ನೀತಿ ಪಾಠ ಹೇಳಿಕೊಡುತ್ತಿದ್ದಾರೆ. ಅವರು ಹೇಳಿದ್ದಂತೆ ನಿಜ ಜೀವನದಲ್ಲಿ ಎಂದಿಗೂ ನಡೆದುಕೊಂಡಿಲ್ಲ. ರಮೇಶ್ ಕುಮಾರ್ ಏನು ಎಂದು ಇಡೀ ಜಗತ್ತಿಗೆ ಅರ್ಥ ಆಗಿದೆ. ಅವರು ಕೇವಲ ನೀತಿ ಪಾಠ ಹೇಳೋದು ಆ ರೀತಿ ನಡೆದುಕೊಳ್ಳಲ್ಲ ಎಂದರು.
Advertisement
Advertisement
ದೇವರಾಜು ಅರಸು ಬಿಟ್ಟು ಹೋದಾಗ ರಮೇಶ್ ಕುಮಾರ್ ಅವರ ಹಿಂದೆ ಹೋಗಿದ್ದರಾ? ದೇವೇಗೌಡರು ಅವರನ್ನು ಸ್ಪೀಕರ್ ಮಾಡಿದ್ದರು. ದೇವೇಗೌಡರು ಪದವಿ ಇಳಿದಾಗ ಎತ್ತ ಸಾಗಿದ್ದರು. ಇದರಿಂದ ರಮೇಶ್ ಕುಮಾರ್ ಫಕೀರ ಅಲ್ಲ. ಫಕೀರ ಆಗಲು ಯೋಗ್ಯತೆ ಇಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ
Advertisement
Advertisement
ಶಾಲಾ ಮಕ್ಕಳಿಗೆ ಮೊಟ್ಟೆ ಕೊಡುವ ವಿಚಾರವಾಗಿ ಮಾತನಾಡಿದ ಅವರು, ಮೊಟ್ಟೆ ವಿತರಣೆಗೆ ಕೆಲವರ ವಿರೋಧ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ವಿಚಾರಕ್ಕೆ ಧಕ್ಕೆ ತರುವಂತೆ ಸರ್ಕಾರ ಯಾರಿಗೂ ಒತ್ತಾಯ ಮಾಡುವುದಿಲ್ಲ. ಕೆಲವರು ಮೊಟ್ಟೆ ತಿನ್ನಲ್ಲ, ಕೆಲವರು ಹಾಲು ಕುಡಿಯೋದಿಲ್ಲ. ಅದು ಅವರವರ ಆಹಾರ ಪದ್ಧತಿಯಾಗಿದೆ. ಮೊಟ್ಟೆ ಪೌಷ್ಟಿಕಾಂಶವುಳ್ಳ ಆಹಾರ. ಆದರೆ ನಾವು ಯಾರಿಗೂ, ಯಾವುದನ್ನೂ ಬಲವಂತ ಮಾಡೋದಿಲ್ಲ ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!