ಚಿಕ್ಕಬಳ್ಳಾಪುರ: ಇನ್ನೊಬ್ಬರ ನೆಮ್ಮದಿಗೆ ದಕ್ಕೆ ತರುವುದು, ಸಾರ್ವಜನಿಕ ಸ್ಥಳದಲ್ಲಿ ಅವಾಚ್ಯ ಪದ ಬಳಕೆ ಮಾಡುವುದು ಅಪರಾಧ. ಹೀಗಿದ್ದರೂ ನಗರದ ಬಿಬಿ ರಸ್ತೆಯ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಕುಡಿದ ಅಮಲಿನಲ್ಲಿ ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂತಿಸಿ, ಥಳಿಸಿಕೊಂಡಿದ್ದಾನೆ.
ಆಗಿದ್ದೇನು?:
ಇಂದು ಮಧ್ಯಾಹ್ನ ವಾಣಿ ಚಿತ್ರಮಂದಿರದ ಬಳಿ ಯುವಕನೊಬ್ಬ ಮದ್ಯದ ಅಮಲಿನಲ್ಲಿ ರಸ್ತೆಯ ಮೇಲೆ ತೂರಾಡುತ್ತಾ, ಸಾರ್ವಜನಿಕರನ್ನು ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯವಕನನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅವರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದ ಯುವಕ ನಡು ರಸ್ತೆಯಲ್ಲಿಯೇ ಮುಗುಚಿ ಬಿದ್ದಿದ್ದ. ಅಲ್ಲಿಯೂ ಆತನನ್ನು ಏಳೆದು ಹೊಡೆದಿದ್ದಾರೆ.
ಇದನ್ನು ನೋಡಿದ ಯುವಕನ ಸ್ನೇಹಿತರು ಹಾಗೂ ಕೆಲ ಹಿರಿಯರು ಆತನನ್ನು ರಕ್ಷಿಸಿದ್ದಾರೆ. ಬಳಿಕ ಸ್ನೇಹಿತ ಅವನನ್ನು ಬೈಕ್ ಮೇಲೆ ಕರೆದುಕೊಂಡು ಹೋಗುತ್ತಿದ್ದಾಗಲೂ ಸಾರ್ವಜನಿಕರು ಗೂಸಾ ಕೊಟ್ಟಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv