ವೀಕೆಂಡ್ ಎಂದು ನಂದಿಬೆಟ್ಟಕ್ಕೆ ಹೋದ ಯುವಕ ಅಪಘಾತಕ್ಕೆ ಬಲಿ

Public TV
1 Min Read
nandi hills

ಚಿಕ್ಕಬಳ್ಳಾಪುರ: ವೀಕೆಂಡ್ ಎಂದು ಬೈಕ್‍ನಲ್ಲಿ ನಂದಿಬೆಟ್ಟಕ್ಕೆ ಬಂದ ಯುವಕನೋರ್ವ ಅಪಘಾತಕ್ಕೆ ಬಲಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ವಿಶ್ವವಿಖ್ಯಾತ ನಂದಿಗಿರಿಧಾಮದ ನಂದಿಬೆಟ್ಟದ ಕ್ರಾಸ್ ನಲ್ಲಿ ನಡೆದಿದೆ.

ಬೆಂಗಳೂರು ಮೂಲದ 21 ವರ್ಷದ ಯುವಕ ರಾಹುಲ್ ಮೃತ ವ್ಯಕ್ತಿ. ಅಂದಹಾಗೆ ಬೆಂಗಳೂರು ಕಡೆಯಿಂದ ನಂದಿಗಿರಿಧಾಮದತ್ತ ತನ್ನ ಅಪಾಚಿ ಬೈಕ್‍ನಲ್ಲಿ ಬಂದಿದ್ದ ರಾಹುಲ್, ಬೆಟ್ಟದ ಕ್ರಾಸ್‍ನಲ್ಲಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

police 1 1

ಕಾರು ಚಾಲಕ ಕೋದಂಡರಾಮರೆಡ್ಡಿ ಎಂಬಾತ ಹೋಟೆಲೊಂದರ ಬಳಿಯಿಂದ ಏಕಾಏಕಿ ರಸ್ತೆಗೆ ಕಾರು ಇಳಿಸಿದ್ದು ಈ ವೇಳೆ ರಸ್ತೆಯಲ್ಲಿ ವೇಗದಿಂದ ಬರುತ್ತಿದ್ದ ಬೈಕ್ ಸವಾರ ರಾಹುಲ್ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ಮುಂಭಾಗ ಜಖಂಗೊಂಡಿದ್ದು ರಾಹುಲ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ಸಂಬಂಧ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಕಾರು ಚಾಲಕ ಕೊದಂಡರಾಮರೆಡ್ಡಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This Article