ಚಿಕ್ಕಬಳ್ಳಾಪುರ: ಆಜಾದ್ ಕೀ ಅಮೃತ ಮಹೋತ್ಸವದ ಸಂಭ್ರಮದ ಸವಿನೆನಪಿಗಾಗಿ ಯೋಧರು ಕನ್ಯಾಕುಮಾರಿಯಿಂದ ದೆಹಲಿಯ ರಾಜ್ ಘಟ್ ವರೆಗೂ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದು, ಈ ವೇಳೆ ಯೋಧರನ್ನು ಆತ್ಮೀಯವಾಗಿ ಶಾಸಕರು ಬರಮಾಡಿಕೊಂಡರು.
Advertisement
ಆಜಾದ್ ಕೀ ಅಮೃತ ಮಹೋತ್ಸವ ಪ್ರಯುಕ್ತ ಕನ್ಯಾಕುಮಾರಿಯಿಂದ ರಾಜ್ ಘಟ್ ವರೆಗೂ ಯೋಧರು ಈ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ ಆಂಧ್ರಪ್ರದೇಶದ ಮಾರ್ಗವಾಗಿ ದೆಹಲಿಯ ರಾಜ್ ಘಟ್ ಗೆ ತೆರಳುವಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಯೋಧರು ಆಗಮಿಸಿದ್ದಾರೆ. ಯೋಧರಿಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡರು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ
Advertisement
Advertisement
ಯೋಧ ಮಹಾಂತೇಶ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಉಗ್ರರ ದಾಳಿಯಿಂದ ಅಘ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದ್ದರೂ, ಭಾರತದಲ್ಲಿ ಜನ ನೆಮ್ಮದಿಯಾಗಿದ್ದಾರೆ. ಇದಕ್ಕೆ ಮತ್ತಷ್ಟು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಮೃತ ಕಾ ಮಹೋತ್ಸವದ ಕಾರ್ಯಕ್ರಮದಡಿಯಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳವಾದ ರಾಜ್ ಘಟ್ ಗೆ ಸೈಕಲ್ ರ‍್ಯಾಲಿ ಮೂಲಕ ತೆರಳುತ್ತಿದ್ದು, ಮಾರ್ಗ ಮಧ್ಯೆ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ
Advertisement
ಇನ್ನೂ ಭಾರತದ ಪ್ರಜೆಗಳೆಲ್ಲ ಒಂದೇ. ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬಿ ದೇಶದ ಬಲಿಷ್ಠತೆಗೊಸ್ಕರ ಜನರಲ್ಲಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ 20 ಮಂದಿ ಸೈನಿಕರು ಈ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಆಗಸ್ಟ್ 22 ರಂದು ಕನ್ಯಾಕುಮಾರಿಯಲ್ಲಿ ಸೈಕಲ್ ರ‍್ಯಾಲಿ ಆರಂಭವಾಗಿದ್ದು, ಅಕ್ಟೋಬರ್ 2 ರಂದು ದೆಹಲಿಯ ರಾಜ್ ಘಟ್ ತಲುಪಲಿದ್ದಾರೆ.
ಸೈಕಲ್ ರ‍್ಯಾಲಿ ಮುಖಾಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ ಯೋಧರನ್ನು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬರ ಮಾಡಿಕೊಂಡು ಸ್ವಾಗತ ಕೋರಿ ಸತ್ಕರಿಸಲಾಯಿತು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಜಾದ್ ಕೀ ಅಮೃತ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗುತ್ತಿದ್ದು, ಸಿ.ಆರ್.ಫಿ.ಎಫ್ ಯೋಧರು ಸಹ ಸಂಭ್ರಮದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು
ಸಾವಿರಾರು ಕಿಲೋಮೀಟರ್ ದೂರ ಸೈಕಲ್ ಮುಖಾಂತರ ಕ್ರಮಿಸುವ ಸಾಹಸಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸೈಕಲ್ ಜಾಥ ಕೈಗೊಂಡ ಯೋಧರ ರ‍್ಯಾಲಿ ಬಾಗೇಪಲ್ಲಿ ಪಟ್ಟಣಕ್ಕೆ ಬಂದ ವೇಳೆ ತಾಲೂಕು ಆಡಳಿತ ಪಟ್ಟಣದಲ್ಲಿ ಯೋಧರಿಗೆ ಭಾವಪೂರ್ಣ ಸ್ವಾಗತ ಕೋರಿ ಸೈನಿಕರಿಗೆ ಸಕಲ ವ್ಯವಸ್ಥೆ ಕಲ್ಪಿಸಿತು.
ಸೈಕಲ್ ಜಾಥದಲ್ಲಿ ಬಂದ ಯೋಧರಿಗೆ ಆತ್ಮೀಯ ಸ್ವಾಗತ ಕೋರಿದ ಬಾಗೇಪಲ್ಲಿ ತಾಲೂಕು ಆಡಳಿತ ರಾತ್ರಿ ತಂಗಲಿಕ್ಕೆ ಸಕಲ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ ಧ್ವಜಾರೋಹಣ, ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸೈನಿಕರ ಬೀಳ್ಕೊಡುಗೆ ಕಾರ್ಯವನ್ನು ನಡೆಸಿಕೊಟ್ಟಿತು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ