ಚಿಕ್ಕಬಳ್ಳಾಪುರ: ರಾಜ್ಯ ಕಾಂಗ್ರೆಸ್‍ನಲ್ಲಿ ಬಿರುಗಾಳಿ ಎದ್ದಿದ್ದು, ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ರಾಜೀನಾಮೆ ನೀಡುವ ಬಗ್ಗೆ ಟ್ವಿಟರ್‍ನಲ್ಲಿ ಘೋಷಣೆ ಮಾಡಿದ್ದಾರೆ. ಈ ಮೂಲಕ ಚುನಾವಣೆ ಪೂರ್ವದಲ್ಲೇ ಆಪರೇಷನ್ ಶುರುವಾಗುವ ಲಕ್ಷಣ ಕಂಡು ಬರ್ತಿದೆ.
ಸುಧಾಕರ್ ಅವರ ತಂದೆ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೇಶವ್ ರೆಡ್ಡಿಗೆ ತಮ್ಮ ಸ್ಥಾನ ಬಿಟ್ಟುಕೊಡಲು ಕೆಪಿಸಿಸಿ ಸೂಚನೆ ನೀಡಿತ್ತು. ಸಿಎಂ ಸಿದ್ದರಾಮಯ್ಯ ಹಾಗೂ ಡಾ. ಜಿ ಪರಮೇಶ್ವರ್ ಸೂಚನೆ ನೀಡಿದ್ರಿಂದ ಅಸಮಾಧಾನಗೊಂಡ ಸುಧಾಕರ್ ಪಕ್ಷವನ್ನೇ ಬಿಡೋದಾಗಿ ಹೇಳಿದ್ದಾರೆ.
ರಾಹುಲ್‍ಗೂ ದೂರು ಹೋಗಿತ್ತು: ಕಳೆದ ಜೂನ್ 12ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದ ರಾಹುಲ್‍ಗಾಂಧಿ ವಾಪಸ್ ಹೋಗುವಾಗ ಈ ವಿಚಾರ ಚರ್ಚೆಗೆ ಬಂದಿತ್ತು. ಹೆಚ್‍ಎಎಲ್ ಏರ್‍ಪೋರ್ಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್, ವೀರಪ್ಪ ಮೊಯ್ಲಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ.ಸುಧಾಕರ್ ಅವರ ನಡುವಿನ ತಿಕ್ಕಾಟದ ಬಗ್ಗೆ ದೂರು ನೀಡಲಾಗಿತ್ತು ಎಂದು ಹೇಳಲಾಗಿದೆ.
ನಿನ್ನೆ ಚಿಕ್ಕಬಳ್ಳಾಪುರ ಕಾಂಗ್ರೆಸ್ ಮುಖಂಡರೊಂದಿಗೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಸಂಸದ ವೀರಪ್ಪ ಮೊಯ್ಲಿ, ಕೆ.ಎಚ್. ಮುನಿಯಪ್ಪ, ಸಚಿವ ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಆದ್ರೆ ಮನವೊಲಿಕೆಗೆ ನಿರ್ಧಾರ ಮಾಡಲಾಗಿದ್ದು, ರಾಜೀನಾಮೆ ನೀಡುವ ಕೊನೇ ಕ್ಷಣದವರೆಗೂ ಏನು ಬೇಕಾದರೂ ಬದಲಾವಣೆಗಳು ಆಗಬಹುದು.
ಇನ್ನು ಸುಧಾಕರ್ ಪಕ್ಷ ಬಿಡೋ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತಾಡಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಅಧಿಕೃತ ಘೋಷಣೆ ಮಾಡೋದಾಗಿ ಹೇಳಿದ್ದಾರೆ.
I am resigning as Chikkaballapur MLA at 11am tmrw. Indebted to people of Chikkaballapur, my party, KPCC president, Mistry, @CMofKarnataka
— Dr Sudhakar K (@mla_sudhakar) July 6, 2017