ಚಿಕ್ಕಬಳ್ಳಾಪುರ: ಹೆತ್ತವರ ವಿರೋಧದ ನಡುವೆ ಪ್ರೇಮವಿವಾಹವಾದ ಜೋಡಿ ಪೊಲೀಸರ ರಕ್ಷಣೆ ಕೋರಿದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapur) ನಡೆದಿದೆ.
Advertisement
ಗುಡಿಬಂಡೆ ತಾಲೂಕಿನ ಜಂಬಿಗೆಮರದಹಳ್ಳಿ ನಿವಾಸಿ ಭಾನುಶ್ರೀ, ಕಾಮಶೆಟ್ಟಿಹಳ್ಳಿ ನಿವಾಸಿ ಮಧುಸೂದನ್ ಪರಸ್ಪರ ಪ್ರೀತಿ (Love Marriage) ಮಾಡುತ್ತಿದ್ದರು. ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾಗ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಈ ವಿಚಾರ ಭಾನುಶ್ರೀ ಮನೆಯವರಿಗೆ ಗೊತ್ತಾಗಿದ್ದು ಬೇರೊಂದು ಮದುವೆಗೆ ತಯಾರಿ ನಡೆಸಿದರು. ಹೀಗಾಗಿ ಮನೆಯಿಂದ ಹೊರ ಬಂದಿರೋ ಭಾನುಶ್ರೀ ಈಗ ಮಧುಸೂದನ್ ಜೊತೆ ವಿವಾಹವಾಗಿದ್ದಾರೆ. ತನಗೆ ತನ್ನ ತಂದೆ ತಾಯಿಯಿಂದ ತೊಂದರೆ ಆಗಬಹುದು. ನಮಗೆ ರಕ್ಚಣೆ ಕೊಡಿ ಅಂತ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
Advertisement
ಭಾನುಶ್ರೀ ಮನೆಯವರು ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದರೆ ಇತ್ತ ಮಧುಸೂದನ್ ಮನೆಯವರು ಆಗಿದ್ದು ಆಗೋಯ್ತು ಮದುವೆ ಆಗಿದೆ ಅಂತ ವಿವಾಹಕ್ಕೆ ಸಮ್ಮತಿ ಸೂಚಿಸಿದ್ದಾರೆ. ಆದರೆ ಈಗ ಭಾನುಶ್ರೀ ಕಡೆಯವರು ಮನೆ ಹಾಗೂ ಸಂಬಂಧಿಕರ ಮನೆ ಮೇಲೆ ದಾಳಿ ಮಾಡಿ ತೊಂದರೆ ಕೊಡುತ್ತಿದ್ದಾರೆ ಅಂತ ಆರೋಪ ಕೇಳಿಬಂದಿದೆ. ಹಾಗಾಗಿ ಸೂಕ್ತ ಪೊಲೀಸ್ ರಕ್ಷಣೆ ಕೊಡಿ ಅಂತ ಪೊಲೀಸರ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ಸಾಲ ಮರುಪಾವತಿ ವಿಳಂಬ- ತುಮಕೂರು ಕಾಲೇಜಿಗೆ ಬೀಗ ಜಡಿದ ಬ್ಯಾಂಕ್
Advertisement
ಭಾನುಶ್ರೀ ಮನೆಯವರು ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ. ಸದ್ಯ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ರಾಜೀ ಸಂಧಾನ ನಡೆದಿದ್ದು ಮುಂದೆ ಏನಾಗಲಿದೆ ಎಂಬುದನ್ನ ಕಾದು ನೋಡಬೇಕಿದೆ.
Web Stories