ಹೂವಿನ ಬೆಲೆ ಕುಸಿತ, ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ರೈತ

Public TV
2 Min Read
Chikkaballapur Flower

ಚಿಕ್ಕಬಳ್ಳಾಪುರ: ಒಂದು ಕಡೆ ರೈತ ಸಂಘಟನೆಗಳು ನಾಳೆ ಭಾರತ್ ಬಂದ್‍ಗೆ ಸಕಲ ತಯಾರಿಯಲ್ಲಿದ್ದರೇ ಇತ್ತ ಹೂವಿನ ಬೆಲೆ ಪಾತಾಳಕ್ಕೆ ಕುಸಿದ ಹಿನ್ನಲೆ ರೈತರೊಬ್ಬರು ತನ್ನ ಗುಲಾಬಿ ತೋಟಕ್ಕೆ ಬೆಂಕಿ ಇಟ್ಟ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

Chikkaballapur Flower 1

ತಾಲೂಕಿನ ಡಿ. ಹೊಸೂರು ಗ್ರಾಮದ ರೈತ ಪಿಳ್ಳೇಗೌಡ ಅವರು ತಮ್ಮ ಒಂದು ಎಕೆರೆಯಲ್ಲಿ ಬೆಳೆದಿದ್ದ 1300 ಗುಲಾಬಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದಾರೆ. ಸದ್ಯ ಪಿತೃ ಪಕ್ಷದ ಎಫೆಕ್ಟ್ ನಿಂದ ಮಾರುಕಟ್ಟೆಯಲ್ಲಿ ಹೂ ಕೇಳೋರೇ ಇಲ್ಲ. ಕೆಜಿ 5 ರೂಪಾಯಿಗೂ ಖರೀದಿ ಮಾಡೋರಿಲ್ಲದಂತಾಗಿದ್ದು, ನೊಂದ ರೈತ ಪಿಳ್ಳೇಗೌಡ ಅವರು ಇಡೀ ಗುಲಾಬಿ ತೋಟವನ್ನ ಬುಡದವರೆಗೂ ಕಟಾವು ಮಾಡಿ ಬೆಂಕಿ ಇಟ್ಟು ಸುಟ್ಟು ಹಾಕಿದ್ದಾರೆ. ಇದನ್ನೂ ಓದಿ:  DNA ಲಸಿಕೆ ಅಭಿವೃದ್ಧಿಪಡಿಸಿದ ಮೊದಲ ದೇಶ ಭಾರತ: ಮೋದಿ

Chikkaballapur Flower 4

ಮಾರ್ಕೆಟ್‍ನಲ್ಲಿ ರೇಟ್ ಇಲ್ಲ, ಗಿಡದಲ್ಲಿ ಹೂವು ಹಾಗೆ ಬಿಟ್ಟರೆ ಗಿಡ ಹಾಳಾಗುತ್ತದೆ. ಹೂವು ಕಟಾವು ಮಾಡೋಣ ಎಂದರೆ ಕೂಲಿ ಹಣನೂ ಸಿಗಲ್ಲ. ಇದರ ಜೊತೆಗೆ ಗಿಡಗಳನ್ನ ಕಾಪಾಡಿಕೊಳ್ಳೋಕೆ ಫರ್ಟಿಲೈಸರ್ಸ್ ಖರೀದಿ ಮಾಡಬೇಕು. ಅವು ಸಹ ದುಬಾರಿ ಬೆಲೆ, ಏನ್ ಮಾಡೋದು ಸರ್ ಲಾಭ ಇಲ್ಲ ಎಲ್ಲವೂ ನಷ್ಟವಾಗಿದೆ. ಹೀಗಾಗಿ ಗಿಡಗಳನ್ನ ಕಟಾವು ಮಾಡಿ ಬೆಂಕಿ ಇಟ್ಟಿದ್ದೇವೆ ಎಂದು ರೈತ ಪಿಳ್ಳೇಗೌಡ ಅವರು ಹೇಳಿ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಪಂಜಾಬ್‍ನಲ್ಲಿ ನೂತನ ಸಚಿವ ಸಂಪುಟ ರಚನೆ ಕಸರತ್ತು- ಐವರು ಹಳೆ ಸಚಿವರಿಗೆ ಕೊಕ್

 

Chikkaballapur Flower 5

ಕೆಜಿ 5 ರೂಪಾಯಿಗೂ ಕೇಳೋರಿಲ್ಲ:

ಚಿಕ್ಕಬಳ್ಳಾಪುರ ತಾಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದಲ್ಲಿ ಪುಷ್ಪೋದ್ಯಮ ಮಾಡಲಾಗುತ್ತದೆ. ಗುಲಾಬಿ, ಚೆಂಡು ಹೂವು, ಸೇವಂತಿಗೆ ಸೇರಿದಂತೆ ತರಹೇವಾರಿ ಹೂವುಗಳನ್ನ ಬೆಳೆಯಲಾಗುತ್ತದೆ. ಇನ್ನೂ ಕೊರೊನಾ ಹೊಡೆತಕ್ಕೆ ಪುಷ್ಪೋದ್ಯಮ ನಲುಗಿ ಹೋಗಿದೆ. ಇತ್ತೀಚೆಗೆ ಶ್ರಾವಣ ಮಾಸ ಸಾಲು ಸಾಲು ಹಬ್ಬಗಳಿಂದ ಚೇತರಿಸಿಕೊಂಡಿತ್ತು. ಆದರೆ ಪಕ್ಷದ ಕಾರಣ ಹೂಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಮಾರುಕಟ್ಟೆಯಲ್ಲಿ ಗುಲಾಬಿ ಹೂವು ಕೆಜಿ 5 ರೂಪಾಯಿಗೂ ಕೇಳೋರಿಲ್ಲ. ಬಲವಂತ ಮಾಡಿ ನಾವೇ ಕೊಟ್ಟು ಬರಬೇಕಾಗಿದೆ ಅಂತಾರೆ ರೈತ ಸುನೀಲ್. ಮತ್ತೊಂದೆಡೆ ಚೆಂಡು ಹೂ ಸಹ ಕೇಳೋರು ಇಲ್ಲ, ಹೀಗಾಗಿ ಚಿಕ್ಕಬಳ್ಳಾಪುರ ನಗರದ ಹೂವು ಮಾರುಕಟ್ಟೆಯಲ್ಲಿ ರಾಶಿ ರಾಶಿ ಚೆಂಡು ಹೂವು ಎಲ್ಲಂದರಲ್ಲಿ ಬಿಸಾಡಲಾಗಿದೆ. ರೈತರೊಬ್ಬರು ಟ್ರ್ಯಾಕ್ಟರ್ ತುಂಬಾ ಗುಲಾಬಿ ಹೂವನ್ನ ರಸ್ತೆ ಬದಿ ಸುರಿದು ಹೋಗಿದ್ದ. ಮಾರುಕಟ್ಟೆಯಲ್ಲಿ ಎತ್ತ ನೋಡಿದರು ಈಗ ರಾಶಿ ರಾಶಿ ಹೂವುಗಳು ಕಣ್ಣಿಗೆ ಕಾಣುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *