ಚಿಕ್ಕಬಳ್ಳಾಪುರ: ಅವರು ಮೊದಲೆಲ್ಲಾ ಹಿಪ್ಪು ನೇರಳೆ, ಸೊಪ್ಪು ಬೆಳೆಯುವ ಕೃಷಿ ಮಾಡುತ್ತಿದ್ದ ರೈತರು (Farers) ಕ್ರಮೇಣ ದ್ರಾಕ್ಷಿ ಬೆಳೆದು ಕೈ ಸುಟ್ಟುಕೊಂಡಿದ್ದರು. ಕೊನೆಗೆ ಏನು ಮಾಡುವುದು ಅಂತಾ ತಲೆಮೇಲೆ ಕೈಹೊತ್ತು ಕುಳಿತಿದ್ದಾಗ ಬಾಲ್ಯ ಸ್ನೇಹಿತ ಕೊಟ್ಟ ದಾಳಿಂಬೆ (Pomegranate) ಬೆಳೆಯುವ ಐಡಿಯಾ ಈಗ ಆ ರೈತನ ಬದುಕನ್ನೇ ಬದಲಿಸಿದೆ. ಮೊದಲ ಬೆಳೆಯಲ್ಲೇ ರೈತ 1 ಕೋಟಿಗೂ ಅಧಿಕ ಆದಾಯ ಗಳಿಸಿದ್ದು ಬದುಕು ಸಿಹಿಯಾಗಿಸಿಕೊಂಡಿದ್ದಾರೆ.
Advertisement
ಹೌದು.. ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ಹೊಸಹುಡ್ಯ ಗ್ರಾಮದ ರೈತ ಮಂಜುನಾಥ್ ಇದೇ ಮೊದಲ ಬಾರಿಗೆ ದಾಳಿಂಬೆ ಬೆಳೆದು ಯಶಸ್ಸು ಕಂಡಿದ್ದಾರೆ. ತಮ್ಮ ಪಿತ್ರಾರ್ಜಿತ 11 ಎಕೆರೆ ಭೂಮಿಯಲ್ಲಿ ದಾಳಿಂಬೆ ಬೆಳೆದಿದ್ದು (Pomegranate Crop) ರೈತನಿಗೆ ಇದೀಗ ಭರಪೂರ ಇಳುವರಿ ಬಂದಿದೆ. ಮೊದಲ ಬೆಳೆಯಲ್ಲೇ 80ಕ್ಕೂ ಹೆಚ್ಚು ಟನ್ ಹಣ್ಣು ಕಟಾವಿಗೆ ಬಂದಿದ್ದು 1 ಕೆಜಿ ದಾಳಿಂಬೆ ಹಣ್ಣು 145 ರೂಪಾಯಿಗೆ ಮಾರಾಟವಾಗಿದೆ. ಇದರಿಂದ 1 ಕೋಟಿ ರೂ.ಗಿಂತಲೂ ಅಧಿಕ ಆದಾಯ ಗಳಿಸಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಿಗರು ಭಾಗಿಯಾಗದ್ದಕ್ಕೆ ಆಕ್ರೋಶ- ಕಾವೇರಿ ನೀರು ಸರಬರಾಜು ಮಾಡೋ ಪಂಪ್ ಹೌಸ್‍ಗೆ ಮುತ್ತಿಗೆ
Advertisement
Advertisement
ಕಳೆದ 2 ವರ್ಷಗಳಿಂದ ಹಗಲು ರಾತ್ರಿ ಅನ್ನದೇ ಕಷ್ಟಪಟ್ಟು ದಾಳಿಂಬೆ ಬೆಳೆದಿದ್ದು, ರೈತ ಮಂಜುನಾಥ್ ಕಷ್ಟಕ್ಕೆ ಪ್ರತಿಫಲವಾಗಿ ಉತ್ತಮ ಬೆಳೆ ಬಂದಿದೆ. ಮಂಜುನಾಥ 60 ಲಕ್ಷ ರೂ.ನಷ್ಟು ಬಂಡವಾಳ ಹೂಡಿ ಸರಿಸುಮಾರು 11 ಎಕೆರೆ ಪ್ರದೇಶದಲ್ಲಿ 4,500 ದಾಳಿಂಬೆ ಗಿಡ ನಾಟಿ ಮಾಡಿದ್ದರು. ಇದೀಗ ವ್ಯಾಪಾರಸ್ಥರೇ ತೋಟಕ್ಕೆ ಬಂದು ಹಣ್ಣು ಖರೀದಿ ಮಾಡಲು ಮುಂದಾಗಿದ್ದು, ನಿರೀಕ್ಷೆಗೂ ಮೀರಿದ ಆದಾಯ ದೊರೆತಿದೆ. ಇದನ್ನೂ ಓದಿ: ಮಹಿಳಾ ಮೀಸಲಾತಿ ಅಂಗೀಕಾರ – ಇದು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡೋ ದಿನ: ಪ್ರಹ್ಲಾದ್ ಜೋಶಿ
Advertisement
ಈಗಾಗಲೇ 11 ಎಕೆರೆಯಲ್ಲಿ ದಾಳಿಂಬೆ ಬೆಳೆದಿರುವ ರೈತ ಮತ್ತೊಂದೆಡೆ 8 ಎಕರೆ ದಾಳಿಂಬೆ ನಾಟಿ ಮಾಡಿದ್ದಾರೆ. ಸಾಲದ್ದಕ್ಕೆ ಇನ್ನೂ 40 ಎಕೆರೆ ಭೂಮಿ ಭೋಗ್ಯಕ್ಕೆ ಪಡೆದು ದಾಳಿಂಬೆ ಬೆಳೆಯಲು ಮುಂದಾಗುತ್ತಿದ್ದಾರೆ.
Web Stories