Connect with us

Chikkaballapur

ವಿದ್ಯುತ್ ಶಾಕ್‍ಗೆ ಬಾಲಕ ಬಲಿ

Published

on

ಚಿಕ್ಕಬಳ್ಳಾಪುರ: ವಿದ್ಯುತ್ ಶಾಕ್ ಹೊಡದು ಬಾಲಕ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹಳೇ ಮಣಿವಾಲ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಗಂಗಾಧರ್ ಎಂಬವರ ಪುತ್ರ ಭರತ್(10) ಮೃತ ಬಾಲಕ. ಇಂದು ಶಾಲೆಗೆ ಹೋಗದ ಬಾಲಕ ತಂದೆಯ ಜೊತೆಯಿದ್ದನು. ಈ ವೇಳೆ ಪಕ್ಕದ ಮನೆಯ ನಿವಾಸಿ ರಾಧಮ್ಮ ತಮ್ಮ ಮನೆಯಲ್ಲಿ ಟಿವಿ ಆನ್ ಆಗುತ್ತಿಲ್ಲ ಎಂದು ಗಂಗಾಧರಪ್ಪ ಗೆ ಹೇಳಿ ಚೆಕ್ ಮಾಡುವಂತೆ ಕೇಳಿಕೊಂಡಿದ್ದಾರೆ.

ಈ ವೇಳೆ ತಂದೆಯ ಜೊತೆಯ ರಾಧಮ್ಮ ಮನೆಗೆ ಹೋದ ಭರತ್ ತಂದೆ ಪವರ್ ಕನೆಕ್ಷನ್ ಚೆಕ್ ಮಾಡುತ್ತಿದ್ದ ಈ ವೇಳೆ ಆಕಸ್ಮಿಕವಾಗಿ ಬಾಲಕ ವಿದ್ಯುತ್ ತಂತಿ ಹಿಡಿದ ಪರಿಣಾಮ ಸಾವನ್ನಪ್ಪಿದ್ದಾನೆ. ಈ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Click to comment

Leave a Reply

Your email address will not be published. Required fields are marked *