ಚಿಕ್ಕಬಳ್ಳಾಪುರ: ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಕೊರೊನಾ ವೈರಸ್ ತಡೆಯುವ ಸಲುವಾಗಿ ಸುರಂಗ ಮಾರ್ಗವನ್ನ ನಿರ್ಮಿಸಲಾಗಿದೆ. ಅದರಲ್ಲೂ ವಿಶೇಷವಾಗಿ ಈ ಸುರಂಗ ಮಾರ್ಗ ಸಾವಯುವ ಸೋಂಕು ನಿವಾರಕವಾಗಿದೆ.
ಸುರಂಗ ಮಾರ್ಗದಲ್ಲಿ ಸೋಡಿಯಂ ಹಿಪೋ ಕ್ಲೋರೈಡ್ ಸೊಲ್ಯೂಷನ್ ಬಳಕೆ ಮಾಡಲಾಗ್ತಿದೆ. ಆದರೆ ಈ ಸುರಂಗ ಮಾರ್ಗದಲ್ಲಿ ಯಾವುದೇ ರಾಸಾಯನಿಕಗಳನ್ನ ಬಳಸಲಾಗುತ್ತಿಲ್ಲ. ಬದಲಾಗಿ ಸಾವಯುವ ಅಂದ್ರೆ ಸಿಟ್ರಸ್ ಫ್ರೂಟ್ಸ್ ರಸಗಳನ್ನ ಬಳಸಲಾಗುತ್ತಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ಇಂತಹ ವಿಭಿನ್ನ ಪ್ರಯತ್ನ ಮೊದಲನೆಯದಾಗಿದೆ. ಅಂದಹಾಗೆ ಡಾ. ಕಾರ್ತಿಕ್ ನಾರೇಯಣನ್ ಈ ಸಾವಯುವ ಸೊಂಕು ನಿವಾರಕ ರಸವನ್ನ ಕಂಡುಹಿಡಿದಿದ್ದಾರೆ.
Advertisement
Advertisement
ಇದು ರಾಸಾಯನಿಕ ಸೋಂಕು ನಿವಾರಕ ರಸಕ್ಕಿಂತಲೂ ಉತ್ತಮ ಫಲಿತಾಂಶ ನೀಡುತ್ತಿದೆಯಂತೆ. ಹೀಗಾಗಿ ಈಗಾಗಲೇ ಕೊರೊನಾ ಹಾಟ್ ಸ್ಪಾಟ್ ಗೌರಿಬಿದನೂರು ನಗರದಲ್ಲಿ ಮೊದಲ ಬಾರಿಗೆ ಇಂತಹ ಸುರಂಗ ಮಾರ್ಗವನ್ನ ನಿರ್ಮಾಣ ಮಾಡಲಾಯಿತು. ಬಳಿಕ ಜಿಲ್ಲೆಯ ಎಲ್ಲಾ ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳ ಬಳಿ ಈ ಸಿಟ್ರೋಶಿಲ್ ಡಿಎಸ್ ಇನ್ಫೆಕ್ಟೆಡ್ ಟನಲ್ ನಿರ್ಮಾಣ ಮಾಡಲಾಯಿತು.
Advertisement
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಬಳಿ ಸಹ ಇದೇ ರೀತಿಯ ಸಾವಯುವ ಸೊಂಕು ನಿವಾರಕ ಟನಲ್ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ ಬೆಂಗಳೂರಿನ ಹಲವೆಡೆ ಆರಕ್ಷಕರಿಗೆ ಉಚಿತ ಸಾವಯುವ ಸ್ಯಾನಿಟೈಸರ್ ವಿತರಣೆ ಮಾಡಿದ್ರು. ಇದನ್ನ ಅರಿತ ಇವರ ಸ್ನೇಹಿತ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯ ಪಿಎಸ್‍ಐ ವರುಣ್, ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದ್ದು, ಜಿಲ್ಲೆಯಲ್ಲಿ ಕೊರೊನಾ ಕಡಿವಾಣಕ್ಕೆ ಪ್ಲಾನ್ ಮಾಡುವಂತೆ ಕೇಳಿಕೊಂಡಿದ್ದರು.
Advertisement
ಸ್ನೇಹಿತನ ಕರೆಗೆ ಸ್ಪಂದಿಸಿದ ಕಾರ್ತಿಕ್ ನಾರೇಯಣನ್, ಈಗ ಇಡೀ ಜಿಲ್ಲೆಯ ಹಲವೆಡೆ ಈ ಸಾವಯುವ ಸೋಂಕು ನಿವಾರಕ ಮಾರ್ಗಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಗೌರಿಬಿದನೂರು ನಗರದಲ್ಲಿ ಸಾವಯುವ ಸುರಂಗ ಮಾರ್ಗವನ್ನ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಿ ಕಾರ್ತಿಕ್ ನಾರೇಯಣನ್ ಕಾರ್ಯವನ್ನ ಮೆಚ್ಚುಗೆ ವ್ಯಕ್ತಪಡಿಸಿದರು.
ಚಿಕ್ಕಬಳ್ಳಾಪುರದಲ್ಲೂ ಜಿಲ್ಲಾ ಉಸ್ತುವಾರಿ ಸಚಿವ ಸುಧಾಕರ್ ಈ ಸಾವಯುವ ಸುರಂಗ ಮಾರ್ಗವನ್ನ ಉದ್ಘಾಟಿಸಿದರು. ಈಗ ಪೊಲೀಸ್ ಠಾಣೆಯಲ್ಲೂ ಈ ಸಾವಯುವ ಸುರಂಗ ಮಾರ್ಗ ನಿರ್ಮಾಣ ಮಾಡಲಾಗಿದ್ದು, ಕಾರ್ತಿಕ್ ನಾರೇಯಣನ್ ಕಾಯಕಕ್ಕೆ ಎಸ್ಪಿ ಮಿಥುನ್ ಕುಮಾರ್ ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.