ಚಿಕ್ಕಬಳ್ಳಾಪುರ: ನಗರದಲ್ಲಿ ಇಂದು ಸಹ 54 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾಗಿದೆ. ನಗರದ 17ನೇ ವಾರ್ಡಿನಲ್ಲೇ ಇಂದು ಸಹ ಕೊರೊನಾ ಸೋಂಕು ಪತ್ತೆಯಾಗಿದೆ.
ಅಂದಹಾಗೆ ಇದೇ ಏರಿಯಾದಲ್ಲಿ ಕೊರೊನಾ ಸೋಂಕಿಗೆ ಬಲಿಯಾಗಿದ್ದ ಪಿ-250 ರ ದ್ವೀತಿಯ ಸಂಪರ್ಕಿತ ವ್ಯಕ್ತಿಯಾದ ಈ 54 ವರ್ಷದ ವ್ಯಕ್ತಿಗೆ ಕೊರೊನಾ ದೃಢಪಟ್ಟಿದೆ. ನಿನ್ನೆ ಸಹ ಇದೇ 17ನೇ ವಾರ್ಡಿನಲ್ಲಿ 40 ವರ್ಷದ ಮಹಿಳೆಗೆ ಕೊರೊನಾ ಸೋಂಕು ಪಾಸಿಟಿವ್ ಬಂದಿತ್ತು. ಇಂದು ಕೊರೊನಾ ಧೃಡಪಟ್ಟ ಪಿ-593, ಹಾಗೂ ನಿನ್ನೆ ದೃಢವಾದ ಪಿ-586, 40 ವರ್ಷದ ಮಹಿಳೆ ಇಬ್ಬರು ಸಂಬಂಧಿಕರಾಗಿದ್ದು, ಅಕ್ಕಪಕ್ಕದ ಮನೆಯ ನಿವಾಸಿಗಳಾಗಿದ್ದಾರೆ.
Advertisement
Advertisement
ಸದ್ಯ ಪಿ-593ರ 54 ವರ್ಷದ ವ್ಯಕ್ತಿಯ ಪತ್ನಿ, ಮಕ್ಕಳು, ಮೊಮ್ಮಕ್ಕಳು, ಅಕ್ಕ ಸೇರಿದಂತೆ 08 ಮಂದಿಯನ್ನ ಹಾಸ್ಪಿಟಲ್ ಐಸೊಲೇಷನ್‍ಗೆ ಒಳಪಡಿಸಲಾಗಿದೆ. ಜಿಲ್ಲೆಯಾದ್ಯಾಂತ ಕೊರೊನಾ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
Advertisement
ಮೂವರು ಡಿಸ್ಚಾರ್ಜ್:
ಚಿಕ್ಕಬಳ್ಳಾಪುರ ಜಿಲ್ಲೆಯ ಕೋವಿಡ್-19 ಜಿಲ್ಲಾಸ್ಪತ್ರೆಯಿಂದ ಇಂದು ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಪಿ-338, 339, 340 ಮೂವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಈ ಮೂವರು ಯುವಕರಲ್ಲಿ ಓರ್ವ ಕೊರೊನಾ ಸೋಂಕಿಗೆ ಬಲಿಯಾದ ಪಿ-250ರ 65 ವರ್ಷದ ವೃದ್ಧನ ಮಗನಾಗಿದ್ದು, ಉಳಿದ ಇಬ್ಬರು ಆತನ ಇಬ್ಬರ ಸ್ನೇಹಿತರಾಗಿದ್ದಾರೆ.
Advertisement
ಸದ್ಯ ಜಿಲ್ಲೆಯಲ್ಲಿ 20 ಮಂದಿ ಕೊರೊನಾ ಸೋಂಕಿತರಲ್ಲಿ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗುಣಮುಖರಾಗಿದ್ದಾರೆ. ಇನ್ನುಳಿದ 4 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೂವರೆಗೂ ಜಿಲ್ಲೆಯಲ್ಲಿ ಸರಿಸುಮಾರು 2000 ಮಂದಿಗೆ ಸ್ವಾಬ್ ಟೆಸ್ಟ್ ಮಾಡಲಾಗಿದ್ದು, ಇನ್ನೂ 400 ಮಂದಿಯ ವರದಿಯ ನೀರಿಕ್ಷೆಯಲ್ಲಿದ್ದೇವೆ ಎಂದು ಡಿಸಿ ಆರ್.ಲತಾ ಹೇಳಿದ್ದಾರೆ.