ಚಿಕ್ಕಬಳ್ಳಾಪುರ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಚಿತಾಮಣಿ ಕ್ಷೇತ್ರದ ಜೆಡಿಎಸ್ ಪಕ್ಷದ ಶಾಸಕ ಜೆಕೆ ಕೃಷ್ಣಾರೆಡ್ಡಿ ಮತದಾರರನ್ನು ಸೆಳೆಯಲು ಭರ್ಜರಿ ಬಾಡೂಟ ಹಾಕಿಸಿದ್ದಾರೆ.
ಈ ಬಾರಿ ಉತ್ತಮ ಮಳೆಯಾದ ಹಿನ್ನಲೆ ನಗರದ ಕುಡಿಯುವ ನೀರಿನ ಮೂಲ ಕನ್ನಂಪಲ್ಲಿ ಕೆರೆ ಕೋಡಿ ಹರಿದ ಕಾರಣಕ್ಕೆ ಕನ್ನಂಪಲ್ಲಿ ಕೆರೆಯಂಗಳದಲ್ಲಿ ಕ್ಷೇತ್ರದ ಜನತೆಗೆ ಬಾಡೂಟ ಅಯೋಜನೆ ಮಾಡಿದ್ದೇನೆಂದು ಕೃಷ್ಣಾರೆಡ್ಡಿ ತಿಳಿಸಿದ್ದಾರೆ.
Advertisement
ಚಿಂತಾಮಣಿ ತಾಲೂಕು ಕನ್ನಂಪಲ್ಲಿ ಕೆರೆಯಂಗಳದಲ್ಲಿ ನೂರಾರು ಜನ ಬಾಣಸಿಗರು ಸೇರಿ 3 ಸಾವಿರ ಕೆಜಿ ಮಟನ್ ಹಾಗೂ 2 ಸಾವಿರ ಕೆಜಿ ಚಿಕನ್ ನಿಂದ ಬಿರಿಯಾನಿ, ಮಟನ್ ಸಾಂಬರ್ ಹಾಗೂ ಮುದ್ದೆ ಊಟವನ್ನು ತಯಾರಿಸಿದ್ದರು. ಮಂಗಳವಾರ ಬೆಳಿಗ್ಗೆಯಿಂದಲೇ ಆರಂಭವಾಗಿರುವ ಬಾಡೂಟದಲ್ಲಿ ಸಾವಿರಾರು ಜನರು ಆಗಮಿಸಿ ಊಟ ಮಾಡಿ ಸಂತೃಪ್ತರಾಗಿದ್ದಾರೆ.
Advertisement
ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕರ ವಿರೋಧಿ ಅಲೆ ಎದ್ದಿರುವ ಕಾರಣದಿಂದ ಮತದಾರರನ್ನು ಸೆಳೆಯಲು ಶಾಸಕರು ಮೆಗಾ ಪ್ಲಾನ್ ಮಾಡಿ ಭರ್ಜರಿ ಬಾಡೂಟದ ನೆಪದಲ್ಲಿ ಜನರ ಓಲೈಕೆಗೆ ಇಳಿದಿದ್ದಾರೆಂದು ಕ್ಷೇತ್ರದ ಜನ ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಶಾಸಕರು ಮಾತ್ರ ಕನ್ನಂಪಲ್ಲಿ ಕೆರೆ ತುಂಬಿದ ಕಾರಣ ಹಾಗೂ ಕೆರೆಯಂಗಳದ ಬಳಿ ವನಮಹೋತ್ಸವ ಮಾಡುವ ಕಾರಣಕ್ಕೆ ಬಾಡೂಟ ಏರ್ಪಡಿಸಿದ್ದು ಇದರಲ್ಲಿ ಯಾವುದೇ ರಾಜಕೀಯ ಇಲ್ಲವೆಂದು ಕೃಷ್ಣಾರೆಡ್ಡಿ ತಿಳಿಸಿದ್ದಾರೆ.