ಅಮಾನತ್ತಾಗಿದ್ದ ಪೇದೆಗೆ ಮುಖ್ಯಮಂತ್ರಿ ಪದಕ – ಸರ್ಕಾರದ ವಿರುದ್ಧ ವಿಜಯೇಂದ್ರ ಕಿಡಿ

Public TV
2 Min Read
Chief Ministers medal for suspended police constable BY Vijayendra Slams Karnataka Government

ಬೆಂಗಳೂರು: ಅಮಾನತ್ತಾಗಿದ್ದ ಪೊಲೀಸ್ ಪೇದೆ (Police Constable) ಹೆಸರು ಸಿಎಂ ಪದಕ ಪಟ್ಟಿಯಲ್ಲಿಯಲ್ಲಿ ಪ್ರಕಟವಾಗಿದ್ದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (By Vijayendra) ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಮೈಸೂರಿನ (Mysuru) ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ. ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: Tungabhadra Dam | ನನ್ನ ಕಡೆಯಿಂದ ಪ್ರತಿ ಕಾರ್ಮಿಕನಿಗೆ 50 ಸಾವಿರ : ಜಮೀರ್‌ ಘೋಷಣೆ

ಪೋಸ್ಟ್‌ನಲ್ಲಿ ಏನಿದೆ?
ಕೆಲ ನಾಮಧೇಯಗಳನ್ನು ಕಂಡರೆ ಈ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕಳ್ಳರಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಕೊಡಮಾಡುವ “ಮುಖ್ಯಮಂತ್ರಿಗಳ ಪದಕ” ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ.

ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತನಾಗಿದ್ದು, ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಿಗೊಳಗಾಗಿದ್ದುದ್ದೇ ಈತನ ಅರ್ಹತೆಯಾಗಿರುವಂತಿದೆ.

ಸಮಾಜಘಾತುಕತನ ಹಾಗೂ ದೇಶದ್ರೋಹಿ ಮನಸ್ಥಿತಿಯ ಪೊಲೀಸ್ ಪೇದೆಯೊಬ್ಬರ ಹೆಸರು ಮುಖ್ಯಮಂತ್ರಿಗಳ ಪದಕ ಪಟ್ಟಿಯಲ್ಲಿ ಪ್ರಕಟವಾಗಿರುವುದು ಗೃಹ ಇಲಾಖೆ ಅಧಃಪತನಕ್ಕೀಡಾಗಿರುವುದಕ್ಕೆ ನಿದರ್ಶನವಾಗಿದೆ.

ಪೊಲೀಸ್ ಇಲಾಖೆಯು ಶಿಸ್ತು ಹಾಗೂ ಪಾರದರ್ಶಕತೆಯ ವ್ಯಾಪ್ತಿಯ ಪರಿಧಿಯ ಸಮತೋಲನವನ್ನು ಕಾಯ್ದುಕೊಳ್ಳದೇ ಇರುವುದನ್ನು ಬಿಜೆಪಿ ಎಚ್ಚರಿಸುತ್ತಲೇ ಇತ್ತು. ಅದು ನಿಜ ಎನ್ನುವುದನ್ನು ದುಷ್ಕೃತ್ಯಗಳ ಆರೋಪದ ಮೇಲೆ ಅಮಾನತಿಗೊಳಗಾಗಿದ್ದ ಪೊಲೀಸ್ ಪೇದೆ ಸಲೀಂ ಪಾಷಾ ಗೆ ಪದಕ ಪ್ರಕಟವಾಗಿರುವುದು ಸಾಕ್ಷೀಕರಿಸಿದೆ.

ಮುಖ್ಯಮಂತ್ರಿಗಳ ಪದಕ ಲಭಿಸಲು ಪೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷತೆ ಹಾಗೂ ತ್ಯಾಗ ಮನೋಭಾವ ಪ್ರದರ್ಶಿಸುವ ಸಮರ್ಥರನ್ನು ಆಯ್ಕೆ ಮಾಡುವ ಮಾನದಂಡವನ್ನು ಹೊಂದಿರುತ್ತದೆ. ಆದರೆ ಇದೀಗ ಪೊಲೀಸ್ ಇಲಾಖೆಯಲ್ಲಿ ವಿದ್ರೋಹ ಎಸಗುವವರಿಗೂ ಮುಖ್ಯಮಂತ್ರಿಗಳ ಪದಕ ಪಡೆಯಲು ಅರ್ಹತೆಯಾಗಿ ಪರಿಗಣಿಸಿರುವುದು ಕರ್ನಾಟಕ ಎತ್ತ ಸಾಗುತ್ತಿದೆ ಎನ್ನುವುದನ್ನು ಸೂಚಿಸುತ್ತದೆ. ಪೊಲೀಸ್ ಇಲಾಖೆಯನ್ನು ದೇವರೇ ಕಾಪಾಡಬೇಕಿದೆ.

Share This Article