– ಹುಬ್ಬಳ್ಳಿಯಲ್ಲಿ ನಡೆದ 2 ಕೊಲೆಗೆ ಪೊಲೀಸರ ವೈಫಲ್ಯವೇ ಕಾರಣ
– ಪ್ರಧಾನಿಗಳಂತೆ ನಾನು ರೋಡ್ ಬ್ಲಾಕ್ ಮಾಡಿಸಲ್ಲ ಎಂದ ಸಿಎಂ
ಬೆಂಗಳೂರು: ಕೆಲ ಪೊಲೀಸರು (Karnataka Police) ರಿಯಲ್ ಎಸ್ಟೇಟ್ ಕೆಲಸ ಮಾಡ್ತಿದ್ದಾರೆ. ಡ್ರಗ್ಸ್, ರೌಡಿಸಂ, ಮಟ್ಕಾ ದಂಧೆಗಳು ಸ್ಥಳೀಯ ಪೊಲೀಸರಿಗೆ ಗೊತ್ತಿಲ್ಲದೇ ನಡೆಯೋದಿಲ್ಲ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಪೊಲೀಸರಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದ ನೃಪತುಂಗ ರಸ್ತೆಯಲ್ಲಿರುವ ಡಿಜಿ-ಐಜಿಪಿ ಕಚೇರಿಯಲ್ಲಿಂದು ಸಿಎಂ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳ ಜೊತೆ ವಾರ್ಷಿಕ ಸಭೆ ನಡೆಸಿದರು. ಈ ಸಂದರ್ಭದಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ (G Parameshwara), ವಲಯ ಐಜಿಪಿ, ಎಸ್ಪಿ, ಬೆಂಗಳೂರು ಡಿಸಿಪಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ: ಚನ್ನಪಟ್ಟಣ ಮೈತ್ರಿ ಕಗ್ಗಂಟು- ಟಿಕೆಟ್ ಸಿಗದಿದ್ದರೆ ಪಕ್ಷೇತರ ಸ್ಪರ್ಧೆ ಸುಳಿವು ನೀಡಿದ ಸಿಪಿವೈ
Advertisement
Advertisement
ವಿವಿಧ ಕೈಪಿಡಿ, ಆಪ್, ಪ್ರಾತ್ಯಕ್ಷಿಕೆ ಬಿಡುಗಡೆ:
ವಾರ್ಷಿಕ ಸಭೆ ಆರಂಭಿಸುವುದಕ್ಕೂ ಮುನ್ನ ಸಿಎಂ ವಿಧಿ ವಿಜ್ಞಾನ ಇಲಾಖೆಯಿಂದ ʻಸೀನ್ ಆಫ್ ಕ್ರೈಂʼ ಕೈಪಿಡಿ ಬಿಡುಗಡೆಗೊಳಿಸಿದರು. ಬಳಿಕ ಹೊಸ ಕ್ರಿಮಿನಲ್ ಕಾನೂನಿಗೆ (New Criminal Law) ಸಂಬಂಧಿಸಿದ ʻಸಂಚಯʼ ಮೊಬೈಲ್ ಆಪ್ ಅನಾವರಣಗೊಳಿಸಿದರು. ಜೊತೆಗೆ ಹೊಯ್ಸಳ ವಾಹನಗಳ ರಿಯಲ್ ಟೈಂ ಟ್ರ್ಯಾಕಿಂಗ್ ಪ್ರಾತ್ಯಕ್ಷಿಕೆ, ಆಡಿಯೋ ವಿಡಿಯೋ ಸಂಪರ್ಕ ಮಾಡುವ ಟೆಕ್ನಾಲಜಿಯುಳ್ಳ ʻಸೇಫ್ ಕನೆಕ್ಟ್ ತಂತ್ರಾಂಶʼ, ಡಿಜಿಟಲ್ ಅರೆಸ್ಟ್ ಸ್ಕ್ಯಾಮ್ ತನಿಖಾ ಕೈಪಿಡಿ, ಆನ್‌ಲೈನ್ ವಂಚನೆ ಪ್ರಕರಣಗಳ ಕುರಿತು ತನಿಖೆ ನಡೆಸುವ ಕೈಪಿಡಿಗಳನ್ನು ಸಿಎಂ ಬಿಡುಗಡೆ ಮಾಡಿದರು. ಇದನ್ನೂ ಓದಿ: ಬೇಬಿ ಬೆಟ್ಟದ ಟ್ರಯಲ್ ಬ್ಲಾಸ್ಟ್‌ಗೆ ತಾತ್ಕಾಲಿಕ ಬ್ರೇಕ್
Advertisement
Advertisement
ಬೇಜವಾಬ್ದಾರಿ ಕೆಲಸ ಮಾಡಿದ್ರೆ ಸಹಿಸೋದಿಲ್ಲ:
ವಾರ್ಷಿಕ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಸಾರ್ವಜನಿಕ ಸಮಸ್ಯೆಗಳಿಗೆ ಹೆಚ್ಚಿನ ಒತ್ತು ನೀಡಲು ಹೇಳಿದ್ದೇನೆ. ಸಾರ್ವಜನಿಕರು ನಿರ್ಭಯವಾಗಿ ಬದುಕಬೇಕಾದ ವಾತಾವರಣ ನಿರ್ಮಾಣ ಮಾಡಬೇಕಿದೆ. ಒಳ್ಳೆಯ ಕೆಲಸ ಮಾಡಿದ್ರೆ ನಮ್ಮ ಸರ್ಕಾರ ಬೆನ್ನು ತಟ್ಟುತ್ತೆ. ಬೇಜವಾಬ್ದಾರಿ ಕೆಲಸ ಮಾಡಿದ್ರೆ ಸಹಿಸೋದಿಲ್ಲ ಎಂದು ಎಚ್ಚರಿಸಿದ್ದಾರೆ. ಇದನ್ನೂ ಓದಿ: ಎಸ್ಸಿ, ಎಸ್ಟಿಗೆ ಮೀಸಲಿಟ್ಟಿದ್ದ 14,000 ಕೋಟಿ ಹಣ ರಾಜ್ಯ ಸರ್ಕಾರದಿಂದ ದುರ್ಬಳಕೆ – ಬೊಮ್ಮಾಯಿ ಆರೋಪ
ಹುಬ್ಬಳ್ಳಿಯಲ್ಲಿ 2 ಕೊಲೆಗೆ ಪೊಲೀಸರ ವೈಫಲ್ಯ ಕಾರಣ:
ಮುಂದುವರಿದು ಮಾತನಾಡಿದ ಸಿಎಂ, ಕೆಲ ಪೊಲೀಸರೇ ರಿಯಲ್ ಎಸ್ಟೇಟ್ ಕೆಲಸ ಮಾಡ್ತಿದ್ದಾರೆ. ಹೀಗಾಗಿ ಅಂಥವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ತೇವೆ. ಎಸ್ಪಿ, ಡಿಸಿಪಿ, ಐಜಿಪಿ, ಪೊಲೀಸ್ ಆಯುಕ್ತರು ಪ್ರತಿದಿನ ಪೊಲೀಸ್ ಠಾಣೆಗೆ ಭೇಟಿ ಕೊಡಬೇಕು. ಡ್ರಗ್ಸ್, ರೌಡಿಸಂ, ಮಟ್ಕಾ ದಂದೆಗಳು ಸ್ಥಳೀಯ ಪೊಲೀಸರಿಗೆ ಗೊತ್ತಿಲ್ಲದೇ ನಡೆಯೋದಿಲ್ಲ. ಕೆಲವು ಕಡೆ ಪೊಲೀಸರು ಇಂತಹವರ ಜೊತೆಯಲ್ಲಿ ಶಾಮೀಲು ಆಗಿಬಿಟ್ಟಿರುತ್ತಾರೆ. ಗುಪ್ತಚರ ಇಲಾಖೆ ಮತ್ತು ಸ್ಥಳೀಯ ಪೊಲೀಸರ ಜೊತೆ ಸರಿಯಾದ ಸಂಬಂಧ ಇಲ್ಲ. ಗುಪ್ತಚರ ಇಲಾಖೆ ಮೊದಲೇ ಎಚ್ಚರಿಕೆ ಕೊಡಬೇಕು. ಹುಬ್ಬಳ್ಳಿಯಲ್ಲಿ ಎರಡು ಕೊಲೆ ಆಗೋದಕ್ಕೆ ಪೊಲೀಸರ ವೈಫಲ್ಯವೇ ಕಾರಣ ಎಂದು ಗರಂ ಆಗಿದ್ದಾರೆ.
ಅಲ್ಲದೇ ಕೆಲ ಪೊಲೀಸರು ಪಕ್ಷಕ್ಕೆ ಸಂಬಂಧಿಸಿದ ಫ್ಲಾಗ್ ಹಾಕಿಕೊಳ್ತಾರೆ. ಪೊಲೀಸರು ಯಾವುದೇ ಕೋಮುವಾದದ ಕೆಲಸ ಮಾಡಬಾರದು, ಕಾನೂನು ಸುವ್ಯವಸ್ಥೆ ಚೆನ್ನಾಗಿರೆ ಹೂಡಿಕೆ ಜಾಸ್ತಿ ಆಗುತ್ತೆ. ಉದ್ಯೋಗ ಸೃಷ್ಟಿ ಆಗುತ್ತೆ ಎಂದು ಎಚ್ಚರಿಸಿದ್ದಾರೆ. ಇದರೊಂದಿಗೆ ತ್ತೀಚಿನ ದಿನಗಳಲ್ಲಿ ಸುಳ್ಳುಸುದ್ದಿ ಹಬ್ಬಿಸೋರ ಸಂಖ್ಯೆ ಜಾಸ್ತಿ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಸುಳ್ಳು ಸುದ್ದಿಗಳು ಹರಿದುಬರುತ್ತಿವೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಪ್ರಧಾನಿಗಳ ರೀತಿ ರೋಡ್ ಬ್ಲಾಕ್ ಮಾಡಿಸಲ್ಲ:
ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ಇದೆ. ನನಗೆ ಟ್ರಾಫಿಕ್ ಸಮಸ್ಯೆ ಕಾಣೋದಿಲ್ಲ. ನಾನು ಹೋಗೋವಾಗ ಪೊಲೀಸರೇ ಬಿಡಿಸಿಬಿಡ್ತಾರೆ. ನನಗೆ ಝೀರೋ ಟ್ರಾಫಿಕ್ ಬೇಡ ಅಂದಿದ್ದೇನೆ. ಪ್ರಧಾನ ಮಂತ್ರಿಗಳ ರೀತಿ ನಾನು ರೋಡ್ ಬ್ಲಾಕ್ ಮಾಡಿಸೋದಿಲ್ಲ. ಅವರು ಬಂದಾಗ ನೀವು ಯಾರಾದರೂ ಹತ್ತಿರ ಹೋಗೋಕೆ ಸಾಧ್ಯ ಇದ್ಯಾ? ಆದ್ರೆ ನಾನು ಅಷ್ಟೊಂದು ಸವಲತ್ತು ತೆಗೆದುಕೊಳ್ಳೋದಿಲ್ಲ ಎಂದು ಕುಟುಕಿದ್ದಾರೆ.