ಚೆನ್ನೈ: ಮೇಕೆದಾಟು ವಿಚಾರವಾಗಿ ತಮಿಳುನಾಡು ಮತ್ತೆ ಖ್ಯಾತೆ ತೆಗೆದಿದೆ. ಮೇಕೆದಾಟು ಸಂಬಂಧ ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಪತ್ರ ಬರೆದಿದ್ದಾರೆ.
Advertisement
ಜೂನ್ 17ರಂದು ನಡೆಯಲಿರುವ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಚರ್ಚಿಸದಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಸೂಚಿಸಬೇಕು ಎಂದು ಸ್ಟಾಲಿನ್ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‍ಗೆ 11 ಗಂಟೆ ಇಡಿ ಡ್ರಿಲ್ – ಇಂದು ಹಾಜರಾಗುವಂತೆ ಸೂಚನೆ
Advertisement
Advertisement
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಕಾರ್ಯ ಚಟುವಟಿಕೆಯ ವ್ಯಾಪ್ತಿಯು ಸುಪ್ರೀಂಕೋರ್ಟ್ ನಿರ್ದೆಶನಗಳನ್ನು ಪಾಲಿಸುವ ಮಿತಿಯನ್ನು ಮಾತ್ರ ಹೊಂದಿದೆ. ಬೇರೆ ವಿಷಯಗಳನ್ನು ಪ್ರಾಧಿಕಾರ ಪರಿಗಣಿಸುವಂತಿಲ್ಲ. ಇದನ್ನೂ ಓದಿ: ಪ್ರತಿಭಟನೆ ವೇಳೆ ತಳ್ಳಿದ ಪೊಲೀಸರು – ಮೂಳೆ ಮುರಿತಕ್ಕೊಳಗಾದ ಪಿ.ಚಿದಂಬರಂ
Advertisement
ಮೇಕೆದಾಟು ಸಂಬಂಧ ತಮಿಳುನಾಡಿನ ಹಲವು ಅರ್ಜಿಗಳು ವಿಚಾರಣೆ ಹಂತದಲ್ಲಿದೆ. ಹಾಗಾಗಿ ಸುಪ್ರೀಂ ಕೋರ್ಟ್ ತೀರ್ಪು ಬರುವವರೆಗೆ ಈ ವಿಷಯದ ಬಗ್ಗೆ ಯಾವುದೇ ಚರ್ಚೆಮಾಡದಂತೆ ಪ್ರಾಧಿಕಾರಕ್ಕೆ ಸಲಹೆ ನೀಡುವಂತೆ ಜಲಶಕ್ತಿ ಸಚಿವಾಲಯಕ್ಕೆ ಸೂಚಿಸಿ ಎಂದು ಪತ್ರದಲ್ಲಿ ಕೋರಿದ್ದಾರೆ.