– ಕುಟುಂಬಸ್ಥರ ಜೊತೆ ಬೊಮ್ಮಾಯಿ ಮಾತುಕತೆ
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ, ಅಪ್ಪು ಪತ್ನಿ ಅಶ್ವಿನಿ ಅವರಿಗೆ ಸಾಂತ್ವನ ಹೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪ್ರೀತಿಯ ಪುನೀತ್ ರಾಜ್‍ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳೋಕೆ ಬಂದಿದ್ದೆ. ಪುನೀತ್ ಕನ್ನಡದ ಆಸ್ತಿ. ಇನ್ನು ಮುಂದೆ ಸಾಕಷ್ಟು ಕಾರ್ಯಕ್ರಮಗಳು ನಡೆಯಬೇಕಿದೆ. ಹಾಗಾಗಿ ಆ ಬಗ್ಗೆ ಮಾತಾಡಿದ್ದೇವೆ ಎಂದರು. ಇದನ್ನೂ ಓದಿ: ಪತ್ನಿಯ ಎದೆಹಾಲು ಕದ್ದು ಕುಡಿದ ಆಯುಷ್ಮಾನ್ ಖುರಾನಾ
ಇತ್ತೀಚೆಗೆ ನಿಧನರಾದ ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜಕುಮಾರ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಅಶ್ವಿನಿ ಹಾಗೂ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲಾಯಿತು.#PuneetRajkumar pic.twitter.com/JBODzjE37m
— Basavaraj S Bommai (@BSBommai) November 5, 2021
ಪುನೀತ್ ಕುಟುಂಬದವರ ಜೊತೆಗೆ ನಾವು ಇದ್ದೀವಿ. ಫಿಲ್ಮ್ ಚೇಂಬರ್ ಅವರು ಒಂದು ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಸರ್ಕಾರದ ಕಡೆಯಿಂದ ಏನು ಸಹಾಯ ಮಾಡಬೇಕೋ ಎಲ್ಲವನ್ನೂ ಮಾಡುವುದಾಗಿ ಸಿಎಂ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸಿಎಂಗೆ ಸಚಿವರಾದ ಆರ್ ಅಶೋಕ್, ಡಾ. ಸಿ ಎನ್ ಅಶ್ವಥ್ ನಾರಾಯಣ್, ರಾಘವೇಂದ್ರ ರಾಜಕುಮಾರ್, ಚಿನ್ನೇಗೌಡ, ಎಸ್.ಎ ಗೋವಿಂದರಾಜ್, ಯುವರಾಜ್ ಕುಮಾರ್ ಮತ್ತು ಇತರರು ಸಾಥ್ ನೀಡಿದರು.

