ಚಿಕ್ಕಬಳ್ಳಾಪುರ: ಅಕಾಲಿಕ ಮಳೆಯಿಂದ ರಾಜ್ಯಾದ್ಯಂತ ಭಾರೀ ಬೆಳೆ ನಷ್ಟ ಆಗಿದ್ರೂ, ರೈತರ ಕಡೆ ತಿರುಗಿ ನೋಡದೇ ಜನಸ್ವರಾಜ್ ಯಾತ್ರೆಯಲ್ಲಿ ಬಿಜೆಪಿ ನಾಯಕರು ಮುಳುಗಿರುವ ಬಗ್ಗೆ ಪಬ್ಲಿಕ್ ಟಿವಿ ವರದಿ ಮಾಡಿತ್ತು. ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಎಚ್ಚೆತ್ತಿದ್ದಾರೆ.
ಅತೀ ಹೆಚ್ಚು ಬೆಳೆ ಹಾನಿಗೆ ತುತ್ತಾಗಿರೋ ಚಿಕ್ಕಬಳ್ಳಾಪುರದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಳೆ ಹಾನಿಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ರು. ಮೊದಲಿಗೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಅಗತ್ಯ ಮಾಹಿತಿ ಪಡೆದು, ಸಂತ್ರಸ್ತರಿಗೆ ಜಿಲ್ಲಾಮಟ್ಟದಲ್ಲಿ ಪರಿಹಾರ ವಿತರಿಸಲು ಸೂಚನೆ ನೀಡಿದ್ರು. ಕರೆ ಕಟ್ಟೆ ಒಡೆದು ಅಪಾರ ಹಾನಿಗೆ ತುತ್ತಾಗಿರುವ ಶಿಡ್ಲಘಟ್ಟದ ಆನೆಮಡಗು ಅಗ್ರಹಾರಕ್ಕೆ ಸಿಎಂ ಭೇಟಿ ನೀಡಿದ್ರು. ಇದನ್ನೂ ಓದಿ: ಜೆಡಿಎಸ್ ಪಕ್ಷ ಕುಟುಂಬಕ್ಕೆ ಮಾತ್ರ ಸೀಮಿತ: ಶಾಸಕ ಪ್ರೀತಂಗೌಡ ವ್ಯಂಗ್ಯ
ಕತ್ತಲಲ್ಲಿ ಕೆರೆ ವೀಕ್ಷಣೆ ಮಾಡಿದ್ರು. ರಾತ್ರಿಯಾದ ಕಾರಣ ಮಳೆ ಹಾನಿ ಪ್ರವಾಸವನ್ನು ಸಿಎಂ ಮೊಟಕು ಮಾಡಿದ್ರು. ಈ ಸಂದರ್ಭದಲ್ಲಿ ಮಾತಾಡಿದ ಸಿಎಂ ಬೊಮ್ಮಾಯಿ, ಅಕಾಲಿಕ ಮಳೆಯಿಂದ ರಾಜ್ಯದಲ್ಲಿ 5 ಲಕ್ಷ ಹೆಕ್ಟೇರ್ ಬೆಳೆಹಾನಿ ಸಂಭವಿಸಿದೆ. ಸಂಪೂರ್ಣ ವರದಿ ಬಂದ್ಮೇಲೆ ಪರಿಹಾರ ನಿರ್ಧರಿಸ್ತೀವಿ. 40 ಸಾವಿರ ಮನೆ ಬಿದ್ದಿದ್ದು, ತಾತ್ಕಾಲಿಕವಾಗಿ 95 ಸಾವಿರ ರೂಪಾಯಿ ಪರಿಹಾರ ನೀಡಲಾಗುವುದು. ಒಡೆದುಹೋದ ಕೆರೆಗಳ ದುರಸ್ಥಿಗೆ ಕ್ರಮ ಕೈಗೊಳ್ಳಲಾಗುವುದು. ಆದ್ಯತೆಯ ಮೇಲೆ ರಸ್ತೆ ಸೇತುವೆ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದ್ರು. ಇದನ್ನೂ ಓದಿ: ಸಿದ್ದರಾಮಯ್ಯ ಭಾಷಣದಲ್ಲಿಂದು ಪೂರ್ತಿ ಮೋದಿ ‘ಜೀ’ ಮಯ
ಇದಕ್ಕೂ ಮುನ್ನ ವಿಪಕ್ಷಗಳ ಆರೋಪಕ್ಕೂ ಸಿಎಂ ತಿರುಗೇಟು ನೀಡಿದ್ರು. ಈಗಾಗಲೇ ಕೆಲ ಉಸ್ತುವಾರಿ ಸಚಿವರು ಆಯಾ ಜಿಲ್ಲೆಗಳ ನೆರೆಪೀಡಿತ ಪ್ರವಾಸದಲ್ಲಿದ್ದಾರೆ. ಆದ್ರೇ ಚುನಾವಣಾ ನೀತಿ ಸಂಹಿತೆ ನೆರೆಪೀಡಿತ ಪ್ರದೇಶಗಳ ಪ್ರವಾಸಕ್ಕೆ ಅಡ್ಡಿಯಾಗಿದೆ ಅಂತಾ ತಿಳಿಸಿದ್ರು. ಕಂದವಾರ ಕೆರೆಯಿಂದ ಗೋಪಾಲಕೃಷ್ಣ ಕೆರೆವರೆಗಿನ ಅಚ್ಚುಕಟ್ಟು ಪ್ರದೇಶದಲ್ಲಿ ರಾಜಕಾಲುವೆ ನಿರ್ಮಾಣಕ್ಕೆ ಡಿಪಿಆರ್ ಮಾಡಲು ಸೂಚನೆ ನೀಡಿದ್ದಾಗಿ ತಿಳಿಸಿದ್ರು. ಅಂದ ಹಾಗೇ ಜುಲೈ, ಆಗಸ್ಟ್‍ನಲ್ಲಿ ಅತಿವೃಷ್ಟಿಗೆ ತುತ್ತಾಗಿದ್ದ 16 ಜಿಲ್ಲೆಗಳ ಸಂತ್ರಸ್ತರಿಗೆ 353 ಕೋಟಿ ರೂ. ಪರಿಹಾರ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ.