ಬೆಂಗಳೂರು: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಹಣಕಾಸು ಬಜೆಟ್‍ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ.
ಟ್ವೀಟ್‍ನಲ್ಲಿ ಏನಿದೆ?: ಆತ್ಮನಿರ್ಭರ್ ಭಾರತ್ ಒಳಗೊಂಡ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಗುರಿಯ ಬಜೆಟ್ ಇದಾಗಿದೆ. ಕರ್ನಾಟಕ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಬಜೆಟ್‍ನಿಂದ ಉತ್ತೇಜನ ಸಾಧ್ಯ. ಬಜೆಟ್‍ನಲ್ಲಿ ಹಂಚಿಕೆಯಾದ ಸಂಪನ್ಮೂಲ ಪರಿಣಾಮಕಾರಿ ಬಳಕೆ ಮಾಡುತ್ತೇವೆ.
Advertisement
Karnataka’s developmental activities will recieve a huge boost with the various announcements and we look forward to ensuring effective utilisation of the resources allocated.#AatmanirbharBharatKaBudget
(2/2)
— Basavaraj S Bommai (@BSBommai) February 1, 2022
Advertisement
ನಬಾರ್ಡ್‍ನಿಂದ ಕೃಷಿ ಮತ್ತು ಗ್ರಾಮೀಣ ಉದ್ಯಮಗಳ ಸ್ಟಾರ್ಟ್-ಅಪ್‍ಗಳಿಗೆ ಹಣಕಾಸು ಒದಗಿಸಲು ಹಾಗೂ ಕೃಷಿ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳ ಪರಿಷ್ಕರಣೆಗಳಿಗೆ ಆರ್ಥಿಕ ಸಹಾಯವನ್ನು ಮಾಡಿದೆ. ಜೊತೆಗೆ ನಮ್ಮ ಆರ್ಥಿಕತೆಯ ಬೆನ್ನೆಲುಬನ್ನು ಸಶಕ್ತಗೊಳಿಸಲು ಬೇಕಾದ ಎಲ್ಲಾ ರೀತಿಯ ಸೌಕರ್ಯವನ್ನು ನೀಡಿದೆ.
Advertisement
a fund facilitated by NABARD to finance start-ups for agriculture and rural enterprise, to revision of syllabi of agricultural universities, our govt truly is doing all it takes to empower the backbone of our economy.
(3/3)
— Basavaraj S Bommai (@BSBommai) February 1, 2022
Advertisement
ಕೃಷಿಗೆ ಉತ್ತೇಜನ ನೀಡಲು ಗೋಧಿ ಮತ್ತು ಭತ್ತದ ಖರೀದಿ ಮಾಡುವುದರ ಜೊತೆಗೆ 163 ಲಕ್ಷ ರೈತರ ಖಾತೆಗಳಿಗೆ 2.37 ಲಕ್ಷ ಕೋಟಿ ರೂ.ಗಳ ನೇರ ಪಾವತಿ ಮಾಡುವುದಾಗಿ ಘೋಷಿಸಿದೆ. ಕಿಸಾನ್ ಡ್ರೋನ್‍ಗಳ ಬಳಕೆ ಮತ್ತು ದೇಶಾದ್ಯಂತ ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಹೆಚ್ಚಿನ ಒತ್ತನ್ನು ನೀಡಿದೆ. ಇದನ್ನೂ ಓದಿ: ಗ್ರಾಮೀಣ, ನಗರಾಭಿವೃದ್ಧಿ ಎರಡು ಕ್ಷೇತ್ರಗಳ ಅಭಿವೃದ್ಧಿಗೆ ಪೂರಕ: ಬಿಎಸ್‌ವೈ ಮೆಚ್ಚುಗೆ
Our Union Govt led by PM @narendramodi has reiterated its commitment to our Annadata’s welfare with various announcements in today’s #AatmaNirbharBharatKaBudget.
(1/3)
— Basavaraj S Bommai (@BSBommai) February 1, 2022
ಪ್ರಧಾನಿ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರ ಇಂದಿನ ವಿವಿಧ ಘೋಷಣೆಗಳೊಂದಿಗೆ ನಮ್ಮ ಅನ್ನದಾತರ ಕಲ್ಯಾಣಕ್ಕೆ ಬದ್ಧರಾಗಿರುವುದನ್ನು ಪುನರುಚ್ಚರಿಸಿದೆ ಎಂದು ಟ್ವೀಟ್‍ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಇಲ್ಲ: ಶಶಿ ತರೂರ್