ಉಡುಪಿ: ಹಿಂದೂ ಪದದ ಅರ್ಥ ಅಶ್ಲೀಲವಾಗಿದೆ ಎಂಬ ಸತೀಶ್ ಜಾರಕಿಹೊಳಿ (Satish Jarakiholi) ಹೇಳಿಕೆಗೆ ಇದೀಗ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಕೂಡ ಕೆಂಡಾಮಂಡಲರಾಗಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಅರೆಬರೆ ಓದಿದ ವ್ಯಕ್ತಿ. ಯಾವುದೇ ಆಳವಾದ ಅಧ್ಯಯನ ಇಲ್ಲದೆ ಮಾತನಾಡಿದ್ದಾರೆ. ಅಲ್ಪಸಂಖ್ಯಾತ ಮತ ಬರುತ್ತೆ ಎಂಬ ಭ್ರಮೆಯಲ್ಲಿದ್ದಾರೆ. ಸತೀಶ್ ಹೇಳಿಕೆಯಿಂದ ಭಾರತದ ಭಾವನೆಗೆ ಧಕ್ಕೆಯಾಗಿದೆ. ಕ್ಷೋಭೆಭರಿತ ಹೇಳಿಕೆ ಎಂಬೂದು ದೇಶದ್ರೋಹದ ಕೆಲಸ ಎಂದು ಕಿಡಿಕಾರಿದರು.
ರಾಹುಲ್ ಗಾಂಧಿ (Rahul Gandhi) ಹಾಗೂ ಸಿದ್ದರಾಮಯ್ಯ (Siddaramaiah) ಈ ವಿಚಾರದಲ್ಲಿ ಯಾಕೆ ಮೌನವಹಿಸಿದ್ದಾರೆ. ನಿಮ್ಮ ಮೌನ ಸತೀಶ್ ಮಾತಿಗೆ ಸಮ್ಮತಿನಾ? ಸತೀಶ್ ಇನ್ನೂ ಸಮರ್ಥನೆ ಮಾಡ್ತಾರೆ ಹುಳಿ ಹಿಂಡುವ ಕೆಲಸ ಮಾಡುತ್ತಾರೆ. ದೇಶದಲ್ಲಿ ಕಾಂಗ್ರೆಸ್ ಅಲ್ಪ ಸ್ಪಲ್ಪ ಉಳಿದಿದೆ. ನೆಪಮಾತ್ರದ ಕಾಂಗ್ರೆಸ್ (Congress) ಪಕ್ಷ ರಾಜ್ಯದಲ್ಲಿ ಜನ ಮೂಲೆಯ ಸ್ಥಾನ ತೋರಿಸ್ತಾರೆ. ಇದೊಂದು ಪೂರ್ವಗ್ರಹ ಹೇಳಿಕೆ ಮತ್ತು ಯೋಜನಾಬದ್ಧವಾದ ಹೇಳಿಕೆ. ಹಿಂದೂ ಭಾವನೆ ವಿಚಾರ ಮನಸ್ಸಿಗೆ ಘಾಸಿಯಾಗುವ ಹೇಳಿಕೆ ನೀಡಿದ್ದಾರೆ. ರಾಜ್ಯದ ಜನ ಒಕ್ಕೊರಲಿನಿಂದ ಇದನ್ನು ವಿರೋಧಿಸಬೇಕು ಎಂದು ಸಿಎಂ ಕರೆ ನೀಡಿದರು.
ಇದೇ ವೇಳೆ ಡಿಕೆ ಸುರೇಶ್ ಸಿಬಿಐಯನ್ನು ಕಿರುಕುಳ ಬ್ಯೂರೊ ಆಫ್ ಇಂಡಿಯಾ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಕೆ ಸುರೇಶ್ (DK Suresh) ತಪ್ಪು ಮಾಡದೇ ಇದ್ರೆ ಯಾಕೆ ಭಯ ಪಡುತ್ತಾರೆ?. ಯಾವ ತನಿಖೆ ಬಂದ್ರೂ ನಾನು ಸಿದ್ಧ ಅಂತಾರಲ್ಲ. ಒಂದು ಕಡೆ ಅದನ್ನು ಹೇಳ್ತಾರೆ, ಇನ್ನೊಂದು ಕಡೆ ಇದನ್ನು ಹೇಳ್ತಾರೆ. ತಪ್ಪು ಮಾಡದೇ ಇದ್ರೆ ಭಯ ಪಡುವ ಅವಶ್ಯಕತೆ ಇಲ್ಲ ಎಂದು ಸಿಎಂ ಹೇಳಿದರು. ಇದನ್ನೂ ಓದಿ: ಸತೀಶ್ ಜಾರಕಿಹೊಳಿ ವಿರುದ್ಧ ಕೆರಳಿದ ಕೇಸರಿಪಡೆ- ಸುನಿಲ್ ಕುಮಾರ್‌ರಿಂದ ಸ್ವಾಭಿಮಾನಿ ಹಿಂದು ಅಭಿಯಾನ
ಕಾಂಗ್ರೆಸ್ ಗೆದ್ದು ಖರ್ಗೆ ಅವರಿಗೆ ಗಿಫ್ಟ್ ನೀಡುತ್ತೇವೆ ಎಂಬ ಕಾಂಗ್ರೆಸ್ ಹೇಳಿಕೆ ಸಂಬಂಧ ಮಾತನಾಡಿ, ಖರ್ಗೆಯವರು ಕೂಡ ಹಿಂದೂಗಳ ಬಗ್ಗೆ ಮಾತನಾಡಿದ್ದಾರೆ. ಹಿಂದೂ ಪರ್ಷಿಯನ್‍ಯಂತ ಹೇಳಿದ್ದಾರೆ. ಅವರೂ ಕೂಡ ಜಾರಕಿಹೋಳಿ ಹೇಳಿಕೆ ಭಾಗ ಆಗಿದ್ದಾರೆ. ಯಾರು ಯಾರಿಗೆ ಗಿಫ್ಟ್ ನೀಡುತ್ತಾರೆ ನೋಡೋಣ ಎಂದರು.