ಉಡುಪಿ: ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಚರ್ಚೆ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ನಮ್ಮದು ಘರ್ಜಿಸುವ ಸಿಂಹ, ಕಾಂಗ್ರೆಸ್‍ನದ್ದು ಮಲಗಿದ ಸಿಂಹ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದರು.
ಉಡುಪಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರನಾಥದಲ್ಲಿರುವ ಅಶೋಕನ ಕಾಲದಲ್ಲಿರುವ ಲಾಂಛನ ಅನುಕರಿಸಲಾಗಿದೆ. ಆ ಲಾಂಛನದಿಂದಲೇ ಸಿಂಹದ ಮುಖಚರ್ಯೆ ತೆಗೆದುಕೊಳ್ಳಲಾಗಿದೆ. ಲಾಂಛನವನ್ನು ನಾವು ನೋಡುವ ದೃಷ್ಟಿಯಲ್ಲಿದೆ. ವ್ಯಾಘ್ರವಾಗಿದೆಯೋ ಉಗ್ರವಾಗಿದೆಯೋ ಅನ್ನೋದನ್ನ ನಮ್ಮ ದೃಷ್ಟಿಕೋನ ಸೂಚಿಸುತ್ತದೆ ಎಂದರು.
Advertisement
Advertisement
ವಿರೋಧ ಪಕ್ಷ ಮೊಸರಲ್ಲಿ ಕಲ್ಲು ಹುಡುಕುತ್ತದೆ. ಸಾರನಾಥ ಮಾದರಿಯನ್ನು ಯಥಾವತ್ತು ಮಾಡಲಾಗಿದೆ. ಕಾಂಗ್ರೆಸ್ ನೋಡುವ ದೃಷ್ಟಿ ಬೇರೆ ನಾವು ನೋಡುವ ದೃಷ್ಟಿ ಬೇರೆ. ಕಾಂಗ್ರೆಸ್ ಲಾಂಛನದಲ್ಲಿ ರಾಜಕೀಯ ಹುಡುಕುತ್ತದೆ. ನಮ್ಮಲ್ಲಿ ಕ್ರಿಯಾಶೀಲವಾದ ಆ್ಯಕ್ಟಿವ್ ಪ್ರಧಾನಿ ಇದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕಾಂಗ್ರೆಸ್‍ಗೆ ಆಳಾಗಿ ಬರೆಯುವವರಿಗೆ RSS ಆಳ ಅಗಲ ತಿಳಿಯುವುದಿಲ್ಲ: ಪ್ರತಾಪ್ ಸಿಂಹ
Advertisement
Advertisement
ಸಿಂಹ ಹೇಗೆ ಸಶಕ್ತವಾಗಿ ಘರ್ಜನಾ ರೂಪದಲ್ಲಿರಬೇಕೋ ಅದು ನಮ್ಮ ಸಿಂಹ. ಕಾಂಗ್ರೆಸ್ ನಿದ್ದೆ ಮಾಡುವ ಸಿಂಹವನ್ನು ನಂಬಿಕೊಂಡು ಬಂದಿದ್ದಾರೆ. ಕಾಂಗ್ರೆಸ್‍ನ ಸಂಸ್ಕೃತಿ ಹೇಗೋ ಆ ಸಿಂಹ ಹಾಗೆಯೇ ಕಾಣುತ್ತದೆ ಎಂದು ಬೊಮ್ಮಾಯಿ ಟಾಂಗ್ ನೀಡಿದರು. ಇದನ್ನೂ ಓದಿ: ರಾಷ್ಟ್ರೀಯ ಹೊಸ ಲಾಂಛನಕ್ಕೆ ವಿಪಕ್ಷಗಳ ಆಕ್ರೋಶ – ಆಕ್ರಮಣಕಾರಿ ಲಾಂಛನ ಅಂತ ಕಟು ಟೀಕೆ