ಹುಬ್ಬಳ್ಳಿ: ಬೊಮ್ಮಾಯಿವರು ಸುಳ್ಳು ಹೇಳುತ್ತಿದ್ದಾರೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ, ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಬಹಳ ಗೌರವವಿತ್ತು. ಆದರೆ ಇತ್ತೀಚಿಗೆ ಅವರ ಹೇಳಿಕೆಗಳು ನನಗೆ ಬಹಳ ನಿರಾಸೆ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಅಸಮಾಧಾನ ವ್ಯಕ್ತಪಡಿಸಿದರು.
Advertisement
ನಗರದ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸಭೆ ಇದೆ. ಪಕ್ಷದ ಶಾಸಕರು ಮುಖಂಡರ ಸಭೆ ಕರೆದಿದ್ದೇವೆ. ನಮ್ಮ ಅಭ್ಯರ್ಥಿ ಗೆಲ್ಲೋಕೆ ಏನೆಲ್ಲಾ ಸೂಚನೆ ನೀಡಬೇಕು ಅದನ್ನು ಮಾಡುತ್ತೇನೆ. ನಮ್ಮ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಗೆಲುವು ನಿಶ್ಚಿತ. ಲಖನ್ ಜಾರಕಿಹೊಳಿ, ಕಾಂಗ್ರೆಸ್‍ನ ಬಂಡಾಯ ಅಭ್ಯರ್ಥಿ. ನಮಗೇನು ಸಂಬಂಧವಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸಿಎಂ ನಿಮಗೆ ನಾವು ಸದಾ ಆಭಾರಿ: ಅಶ್ವಿನಿ ಪುನೀತ್ ರಾಜ್‍ಕುಮಾರ್
Advertisement
Advertisement
ರಾಜ್ಯದಲ್ಲಿ ಹೆಚ್ಚಾಗುತ್ತಿರು ಕೊರೊನಾ ವೈರಸ್ ಪ್ರಕರಣ ಕುರಿತಂತೆ ಮಾತನಾಡಿದ ಅವರು, ಎಲ್ಲಾ ಕೊರೊನಾ ಕೇಸ್‍ಗಳ ಜಿನೋಮ್ ಸ್ವಿಕ್ವೇನ್ಸ್ ಟೆಸ್ಟ್ ಮಾಡುತ್ತಿದ್ದೇವೆ. ಆ ಲ್ಯಾಬ್ ಗಳನ್ನು ಹೆಚ್ಚಿಗೆ ಮಾಡುವ ಚಿಂತನೆ ಮಾಡಿದ್ದೇವೆ. ಪರಿಣತರ ಜೊತೆ ಚರ್ಚಿಸಿ ಈಗಾಗಲೇ ಆರೋಗ್ಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಿದ್ದೇವೆ. ಏನೆಲ್ಲಾ ಅದಕ್ಕೆ ತಯಾರಿಬೇಕು ಮಾಡಿಕೊಳ್ಳುವಂತೆ ಸೂಚನೆ ತಿಳಿಸಿದ್ದೇನೆ. ಆದಷ್ಟು ಬೇಗ ವರದಿ ಬರುವಂತೆ ಮಾಡುತ್ತೇವೆ ಎಂದರು.
Advertisement
ಇದೇ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ರೇಣುಕಾಚಾರ್ಯ ಹೇಳಿಕೆಗೆ ವಿಚಾರಕ್ಕೆ ಖಾರವಾಗಿ ಪ್ರತಿಕ್ರಿಯಿಸಿ ಎಲ್ಲರ ಹೇಳಿಕೆಗೆ ಪ್ರತಿಕ್ರಿಯೆ ನೀಡಲ್ಲ ಎಂದು ರೇಣುಕಾಚಾರ್ಯಗೆ ಟಾಂಗ್ ನೀಡಿದರು. ಇದನ್ನೂ ಓದಿ: ಫೋಟೋಶೂಟ್‌ಗಾಗಿ ಬಂದಿದ್ದ ಮಹಿಳೆ ಮೇಲೆ ಲಾಡ್ಜ್‌ನಲ್ಲಿ ಗ್ಯಾಂಗ್‌ರೇಪ್