ದೆಹಲಿ ಲಾಕ್‍ಡೌನ್ ಆಗಲ್ಲ: ಅರವಿಂದ್ ಕೇಜ್ರಿವಾಲ್

Public TV
1 Min Read
ARAVINDH KEJIRIWAL

ನವದೆಹಲಿ: ಕೊರೊನಾ ಪಾಸಿಟಿವಿಟಿ ದರವು ಗರಿಷ್ಟ ಶೇ.25ರಷ್ಟಿದ್ದು, ದೆಹಲಿ ಮತ್ತೆ ಲಾಕ್‍ಡೌನ್ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರಿಕರು ಆಂತಕ ಪಡುವ ಅವಶ್ಯಕತೆಯಿಲ್ಲ. ದೆಹಲಿಯಲ್ಲಿ ಪುನಃ ಲಾಕ್‍ಡೌನ್ ಮಾಡುವುದಿಲ್ಲ ಎಂದು ತಿಳಿಸಿದರು. ದೆಹಲಿಯಲ್ಲಿ ಇಂದು ಸುಮಾರು 22,000 ಹೊಸ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

CORONA 2

ಕಳೆದ ಎರಡು ದಿನಗಳಿಂದ ಪಾಸಿಟಿವಿಟಿ ಪ್ರಮಾಣವು ಶೇ. 24-25 ರಷ್ಟಿದೆ. ಅನಿವಾರ್ಯವಾಗಿ ದೆಹಲಿಯಲ್ಲಿ ರಾತ್ರಿ ಕಫ್ರ್ಯೂನಂತಹ ಕಟ್ಟುನಿಟ್ಟಾದ ನಿಬರ್ಂಧಗಳನ್ನು ಜಾರಿಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

CORONA 1

ಮೊದಲ ಹಾಗೂ ಎರಡನೇ ಅಲೆಗೆ ಹೋಲಿಸಿದರೆ ಮೂರನೇ ಅಲೆಯೂ ಸೌಮ್ಯವಾದ ಗುಣಲಕ್ಷಣಗಳನ್ನು ಹೊಂದಿದೆ. ಆದರೆ ಇದು ಸಾಂಕ್ರಾಮಿಕ ರೋಗವಾಗಿದ್ದು, ಅತಿ ವೇಗವಾಗಿ ಹರಡುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಇದನ್ನೂ ಓದಿ: ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದವರಿಗೆ ಆನ್‍ಲೈನ್ ಯೋಗ ಕ್ಲಾಸ್: ಕೇಜ್ರಿವಾಲ್

arvind kejriwal

ಈಗಾಗಲೇ ದೆಹಲಿ ವಿಪತ್ತು ನಿರ್ವಹಣಾ ಸಂಸ್ಥೆ (ಡಿಡಿಎಂಎ) ಸಭೆಯಲ್ಲಿ ದೆಹಲಿಯ ಎಲ್ಲಾ ಖಾಸಗಿ ಕಂಪನಿಗಳಿಗೆ ಮನೆಯಿಂದ ಕೆಲಸ ಮಾಡಲು ಸೂಚನೆ ನೀಡಲಾಗಿದೆ. ಅಗತ್ಯ ಸೇವೆಗಳನ್ನು ಒದಗಿಸುವವವರಿಗೆ ಮಾತ್ರ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ. ರೆಸ್ಟೋರೆಂಟ್‍ಗಳು ಮತ್ತು ಬಾರ್‍ಗಳನ್ನು ಮುಚ್ಚಿ ಪಾರ್ಸ್‍ಲ್ ವ್ಯವಸ್ಥೆಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆ ಸಾಧ್ಯತೆ – ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್

Share This Article
Leave a Comment

Leave a Reply

Your email address will not be published. Required fields are marked *