ಬೆಂಗಳೂರು: ನಗರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಇಂದು ಸಾಹಿತಿ ಚಿದಾನಂದ ಮೂರ್ತಿ ಅವರನ್ನು ಭೇಟಿಯಾಗಿದ್ದಾರೆ.
ಹಿರಿಯ ಸಂಶೋಧಕ ಡಾ ಚಿದಾನಂದ ಮೂರ್ತಿ ಅವರನ್ನು ಭೇಟಿಯಾದ ಶಾ ಮುಂದೆ ಬಿಜೆಪಿ ಪ್ರಣಾಳಿಕೆಗೆ ರಚನೆ ಸಂಬಂಧ ಸಲಹೆ ನೀಡುವಂತೆ ಕೇಳಿಕೊಂಡಿದ್ದಾರೆ.
Advertisement
ಅಮಿತ್ ಶಾ ಭೇಟಿಗೂ ಮುನ್ನ ಪಬ್ಲಿಕ್ ಟಿವಿ ಜೊತೆ ಚಿದಾನಂದ ಮೂರ್ತಿ ಮಾತನಾಡಿದ್ದರು. ಈ ವೇಳೆ ನಾನು ಶಾ ಅವರಿಗೆ ಏನು ಸಲಹೆ ನೀಡತ್ತೇನೆ ಎನ್ನುವುದನ್ನು ತಿಳಿಸಿದ್ದರು.
Advertisement
Advertisement
ಸಾಹಿತಿ ಚಿಮೂ ಹೇಳಿದ್ದೇನು?
1. ವೀರಶೈವ ಹಾಗೂ ಲಿಂಗಾಯಿತ ಎರಡೂ ಒಂದೇ. ಹೀಗಾಗಿ, ಪ್ರತ್ಯೇಕ ಲಿಂಗಾಯತ ಧರ್ಮ ಬೇಡ ಹಾಗೂ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಬಾರದು.
Advertisement
2. ಕಾವೇರಿ ವಿಚಾರದಲ್ಲಿ ಕನ್ನಡಿಗರಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಗಡಿ ವಿವಾದದಿಂದಾಗಿ ಮಹಾರಾಷ್ಟ್ರವೂ ಪದೇ ಪದೇ ಕರ್ನಾಟಕದ ಜೊತೆ ತಗಾದೆ ತೆಗೆಯುತ್ತಿದೆ. ಕರ್ನಾಟಕ ಬೆಳಗಾವಿಗೆ ಸೇರುತ್ತದೆ ಎನ್ನುವ ಭರವಸೆ ಇದೆ. ಕೇಂದ್ರ ಸರ್ಕಾರ ಕರ್ನಾಟಕದ ವಾದವನ್ನು ಸರಿಯಾಗಿ ಪರಿಶೀಲಿಸಬೇಕು.
3. ಆಂಗ್ಲರು ಬಿಟ್ಟು ಹೋಗಿರುವ `ಇಂಡಿಯಾ’ ಎನ್ನುವ ಪದ ಕೈಬಿಟ್ಟು `ಭಾರತ್’ ಎನ್ನುವ ಪದ ಬಳಕೆ ಮಾಡಬೇಕು. ಸಂವಿಧಾನದಲ್ಲಿರುವ ಇಂಡಿಯಾ ಪದವನ್ನು ಕೂಡ ತೆಗೆಯಬೇಕು. ಇಂಡಿಯಾ ಎಂದು ಬರೆದಿರುವ ಕಡೆ ಭಾರತ್ ಎಂದು ಬರೆಯಬೇಕು. ದೇಶದಲ್ಲಿ ಮಾತೃಭಾಷಾ ಮಾಧ್ಯಮ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು.
4. ಒಬ್ಬ ಹಿಂದೂ ಉತ್ತಮ ಹಿಂದೂವಾಗಿ ಬದುಕಬೇಕು, ಒಬ್ಬ ಮುಸ್ಲಿಮ್ ಉತ್ತಮ ಮುಸ್ಲಿಮನಾಗಿ ಬದುಕಬೇಕು, ಒಬ್ಬ ಕ್ರಿಶ್ಚಿಯನ್ ಉತ್ತಮ ಕ್ರಿಶ್ಚಿಯನ್ ಆಗಿ ಬದುಕಬೇಕು. ಆದರೆ, ಮತಾಂತರ ಸಲ್ಲದು. ದೇಶದಲ್ಲಿ ಹಿಂದೂ ಧರ್ಮದವರನ್ನು ಮತಾಂತರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು.
5. ಬಿಜೆಪಿ ಮೇಲ್ವರ್ಗದವರ ಪಕ್ಷ ಎಂದು ಗುರುತಿಸಿಕೊಂಡಿದೆ. ಇದು ಬದಲಾಗಬೇಕು. ಸ್ವಲ್ಪ ಮಟ್ಟಿಗೆ ಭಾರತೀಯ ಸಂಸ್ಕೃತಿಯನ್ನು ಉಳಿಸುತ್ತಿರುವ ಪಕ್ಷ ಬಿಜೆಪಿಯಾಗಿದೆ. ಹೀಗಾಗಿ, ದಲಿತರನ್ನು ನಿರ್ಲಕ್ಷಿಸದೆ, ಅವರ ಅಭಿವೃದ್ಧಿಗೆ ಕೆಲಸ ಮಾಡಬೇಕು. ರೈತರಿಗೆ ಸಕಾಲದಲ್ಲಿ ಸೂಕ್ತ ಸೌಲಭ್ಯಗಳನ್ನು ಒದಗಿಸಬೇಕು
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @AmitShah ರವರು ಕರ್ನಾಟಕದ ಶ್ರೇಷ್ಟ ಇತಿಹಾಸಕಾರ, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಲು ಶ್ರಮಿಸಿದ ಡಾ. ಶ್ರೀ ಚಿದಾನಂದ ಮೂರ್ತಿಯವರನ್ನು ಭೇಟಿಯಾಗಿ ಕರ್ನಾಟಕ ಚುನಾವಣೆಗೆ ಪ್ರಣಾಳಿಕೆ ಸಿದ್ದಪಡಿಸಲು ಚರ್ಚಿಸಿ, ಅವರ ಸಲಹೆ ಪಡೆದರು. pic.twitter.com/LnAtK5e7HN
— BJP Karnataka (@BJP4Karnataka) April 18, 2018
ಹಿರಿಯ ಸಂಶೋಧಕರಾದ ಡಾ. ಚಿದಾನಂದ ಮೂರ್ತಿಯವರನ್ನು ಬಿಜೆಪಿ ರಾಷ್ಟ್ರಾಧ್ಯಕ್ಷರಾದ ಶ್ರೀ @AmitShah ಬೆಂಗಳೂರಿನಲ್ಲಿ ಭೇಟಿ ಮಾಡಿದರು. pic.twitter.com/JGDeBFXKEj
— BJP Karnataka (@BJP4Karnataka) April 18, 2018