ಬೆಂಗಳೂರು: ಚಿಕ್ಕಪೇಟೆ ಮಾರುಕಟ್ಟೆಯಲ್ಲಿ ಅನುಮಾನಸ್ಪದ ರೀತಿಯಲ್ಲಿ ಸೂಟ್‍ಕೇಸ್ ಒಂದು ಪತ್ತೆಯಾಗಿತ್ತು. ಬಳಿಕ ಮೂರು ತಾಸುಗಳ ಕಾರ್ಯಚರಣೆ ಬಳಿಕ ಅದನ್ನು ತೆರೆದು ನೋಡಿದಾಗ ಕಲರ್, ಕಲರ್ ಸೀರೆಗಳು ಪತ್ತೆಯಾಗಿದೆ.
ಚಿಕ್ಕಪೇಟೆ ಮಾರುಕಟ್ಟೆಯ ಬಿಕೆ ಐಯ್ಯಂಗಾರ್ ಬೇಕರಿಯ ಅಭಿನಯ ಟಾಕೀಸ್ ಮುಂಭಾಗದ ರಸ್ತೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ಎರಡು ಸೂಟ್ ಕೇಸ್ ಪತ್ತೆಯಾಗಿ ಆತಂಕ ಸೃಷ್ಟಿಸಿತ್ತು. ಬಳಿಕ ಸ್ಥಳಕ್ಕೆ ಬಾಂಬ್ ಸ್ಕ್ವಾಡ್ ಕರೆಸಿದ ಪೊಲೀಸ್ ಇಲಾಖೆ ಮೂರು ಗಂಟೆಗಳ ಕಾರ್ಯಚರಣೆ ನಡೆಸಿ ಸೂಟ್‍ಕೇಸ್ ತೆರೆದಾಗ ಅದರಲ್ಲಿ ಬರೀ ಸೀರೆಗಳು ಪತ್ತೆಯಾಗಿದೆ. ಇದನ್ನೂ ಓದಿ: ಕಾಂಗ್ರೆಸ್ಸಿನಿಂದ ಸಲೀಂ 6 ವರ್ಷ ಉಚ್ಚಾಟನೆ- ಉಗ್ರಪ್ಪಗೆ ಶೋಕಾಸ್ ನೋಟಿಸ್ ಜಾರಿ
ಸೂಟ್‍ಕೇಸ್ ಪತ್ತೆಯಾದ ಪ್ರದೇಶದಲ್ಲಿ 3 ಸಾವಿರ ಮಳಿಗೆಗಳು ಇತ್ತು. ಇಲ್ಲಿ ಎಲೆಕ್ಟ್ರಿಕ್, ಗ್ಲಾಸ್, ಹೋಲ್‍ಸೆಲ್ ಬಟ್ಟೆ, ಆಟದ ಸಾಮಾಗ್ರಿ ಮಳಿಗೆ, ವೈರಿಂಗ್ ಮಳಿಗೆಗಳು ಹೀಗೆ ನಾನಾ ಬಗೆಯ ಹೋಲ್‍ಸೆಲ್ ಶಾಪ್‍ಗಳು ಇದ್ದವು. ಹಾಗಾಗಿ ಜನರಲ್ಲಿ ಆತಂಕ ಮೂಡಿಸಿತ್ತು. ಸೂಟ್‍ಕೇಸ್‍ನಲ್ಲಿ ಬಾಂಬ್ ಆತಂಕದ ಮಧ್ಯೆ ತೆರೆದು ನೋಡಿದಾಗ ಕಲರ್, ಕಲರ್ ಸೀರೆ ಪತ್ತೆಯಾಗಿದೆ. ಈ ಮೂಲಕ ಜನರಲ್ಲಿ ಆತಂಕ ಮೂಡಿಸಿದ್ದ ಸೂಟ್‍ಕೇಸ್ ಕಂಡು ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಇದನ್ನೂ ಓದಿ: ಪರ್ಸಂಟೇಜ್ ಆರೋಪ – ನನಗೂ, ಪಕ್ಷಕ್ಕೂ ಸಂಬಂಧವಿಲ್ಲದ ವಿಚಾರ ಅಂದ್ರು ಡಿಕೆಶಿ